ಕ್ರಿಕೆಟ್ game ಅಷ್ಟೇ: ಗಡಿಸಮರವಲ್ಲ,.. ಭಯೋತ್ಪಾಧನೆಯಲ್ಲ. ರಾ.ಚಿಂತನ್….!
ನಿನ್ನೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಸೋತಿತು. ಆಸ್ಟ್ರೇಲಿಯ, ಇಂಗ್ಲೆಂಡ್ ಬೇರೆ ಯಾವುದೇ ತಂಡದ ವಿರುದ್ಧ ಭಾರತ ಸೋತಾಗ ಆಗುತ್ತಿದ್ದ ಬೇಸರವೇ ನನಗಾಯಿತು! ಇದೊಂದು game ಅಷ್ಟೆ! ಆದರೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಈ ಸೋಲನ್ನು ದುಃಖಿಸುತ್ತಿದ್ದಾರೆ. ಕ್ರೀಡೆಯನ್ನು ಯುದ್ಧೋಪಾದಿಯಲ್ಲಿ ಬಿತ್ತಿದ ಅಥವಾ ನೋಡುವ ಪರಿಣಾಮವಿದು. ಅಸಲಿಗೆ ಈ ಮನಃಸ್ಥಿತಿಗಳಲ್ಲೇ ಸೋಲಿದೆ. ಆದರೆ ಪಂದ್ಯದ ನಂತರ ಭಾರತದ ಆಟಗಾರರ ನಡಾವಳಿ ಕೋಟಿ ಮನಸುಗಳನ್ನು ಗೆದ್ದಿತು. ಇವೆರಡು ಭಾವಚಿತ್ರಗಳು ದ್ವೇಷಿಸುವ ಮನಸುಗಳಿಗೆ ಪ್ರೀತಿಯ ಪಾಠವನ್ನು ಹೇಳುತ್ತದೆ. ಇವಷ್ಟೇ ಸತ್ಯ; ನೆಮ್ಮದಿಯನ್ನು ಬಲವಂತವಾಗಿ ಕೆಡಿಸಿಕೊಳ್ಳುವ ಅನಗತ್ಯ ಸಂಘರ್ಷಗಳಲ್ಲ. ಮೊದಲೇ ಹೇಳಿದಂತೆ ಇದೊಂದು game ಅಷ್ಟೇ: ಗಡಿಸಮರವಲ್ಲ, ಭಯೋತ್ಪಾಧನೆಯಲ್ಲ. ಅವಕ್ಕೆಲ್ಲಾ ಭಾರತದ ರಾಜನೀತಿ ದಿಟ್ಟ ಉತ್ತರ ಕೊಟ್ಟಿದೆ, ಕೊಡುತ್ತದೆ. ಯಾವುದೇ ದೇಶದ ವಿರುದ್ಧದ ಕ್ರೀಡೆಯನ್ನು just ಕ್ರೀಡೆಯಾಗಿ ನೋಡುವುದೇ sense. ಅಷ್ಟಕ್ಕೂ ಈ ಒಂದು ಸೋಲಿನಲ್ಲಿ ಎಲ್ಲವೂ ಮುಗಿದಿಲ್ಲ, ಆಟವಿನ್ನೂ ಬಾಕಿಯಿದೆ. ನಿರ್ಣಾಯಕ ಹಂತದಲ್ಲಿ ಪಾಕಿಸ್ತಾನವೇ ಮತ್ತೆ ಮುಖಾಮುಖಿ ಆಗಬಹುದು. ಎಂದಿನಂತೆ ಭಾರತ ಗೆಲ್ಲುತ್ತದೆ ಎಂಬ hope ಇಟ್ಟುಕೊಳ್ಳೋಣ . ಈ ಸಲ ಕಪ್ ನಮ್ದೇ!
ವರದಿ – ಹುಸೇನ್ ಬಾಷಾ ಮೊತೇಖಾನ್