ಹೆಣ್ಣು ಶಿಕ್ಷಣ ಹೊಂದಿದಲ್ಲಿ ಕುಟುಂಬವೇ ಶಿಕ್ಷಣ ಹೊಂದಿದಂತೆ….
ಶಿಕ್ಷಕ ಈಶ್ವರಪ್ಪ- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುರುಳಿಹಾಳು ಗಾಮದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಹುರುಳಿಹಾಳು ವಲಯದ ಕುಮತಿ ಕಾರ್ಯಕ್ಷೇತ್ರದಲ್ಲಿ. ರ್ಶ್ರೀಗಂಧ ಎನ್ನುವ ಹೊಸ ಕೇಂದ್ರದ ಉದ್ಘಾಟನೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವಂತೆ ಅವರು ಕರೆ ನೀಡಿದರು, ಶಿಕ್ಷಣದ ವ್ಯವಸ್ಥೆ ಕುರಿತು ಶಿಕ್ಷಕ ಈಶ್ವರಪ್ಪ ಮಾತನಾಡಿ,ಹೆಣ್ಣೊಂದು ಶಿಕ್ತಣ ಕಲಿತರೆ ಕುಟುಂಬವೇ ಶಿಕ್ಷಣ ಕಲಿತಂತೆ.ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಇಡೀ ಕುಟುಂಬವೇ ಶಿಕ್ಷಣ ಪಡೆದಂತಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಮಕ್ಕಳ ಶಿಕ್ಷಣ ಕುಂಠಿತವಾಗಿದ್ದು ವಿಷಾಧದ ಸಂಗತಿಯಾಗಿದೆ,ಕೊರೋನಾ ಹಿನ್ನಲೆಯಲ್ಲಿ ಇಂದು ಶಾಲೆಗಳು ತರೆದಿವೆ ಕಾರಣ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಆವರು ಪೋಷಕರಲ್ಲಿ ಕೋರಿದರು. ಮಾತೃಶ್ರೀರವರ ಮಹತ್ವಪೂರ್ಣ ಕಾರ್ಯಕ್ರಮ ನಮ್ಮ ಗ್ರಾಮದಲ್ಲಿ ಜರುಗಿದ್ದು ಹೆಮ್ಮಪಡುವ ಸಂಗತಿಯಾಗಿದ್ದು, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಕುಟುಂಬದಲ್ಲಿ ಅನುಷ್ಠಾನ ಮಾಡಬೇಕೆಂದರು. ಕಾರ್ಯಕ್ರಮ ಅಯೋಜಿಸಿರುವ ಗಣ್ಯಮಾನ್ಯರಿಗೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು. ವೈದ್ಯರಾದ ಬಸನಗೌಡ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಗಂಗಮ್ಮ, ಒಕ್ಕೂಟದ ಅಧ್ಯಕ್ಷೆ ಜಲಜಾಕ್ಷಿ, ಸಮನ್ವಯಾಧಿಕಾರಿ ಹಾಗೂ ವಲಯದ ಮೇಲ್ವಿಚಾರಕರು. ಸ್ಥಳೀಯ ಸೇವಾ ಪ್ರತಿನಿಧಿಗಳು, ಕೇಂದ್ರದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428