ಸಿದ್ದಾಪುರ:ನ್ಯಾಯಬೆಲೆ ಅಂಗಡಿ ಹತ್ತಿರ ಕೋವ್ಯಾಕ್ಸೀನ್ ವ್ಯವಸ್ಥೆ-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಬಳಿ, ಮೊದಲನೇ ಹಾಗೂ ಎರಡನೇ ಕರೋನ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ನ್ಯಾಯಬೆಲೆ ಅಂಗಡಿಗೆ ಪಡಿತರ ಆಹಾರ ಧಾನ್ಯಗಳನ್ನು ಪಡೆಯುವ ಪಲಾನುಭವಿಗಳು, ಕಡ್ಡಾಯವಾಗಿ ಕರೋನ ಲಸಿಕೆ ಹಾಕಿಸಿಕೊಳ್ಳಬೇಕೆಂಬ ನಿಯಮ ಇಲ್ಲಿ ಜಾರಿಯಲ್ಲಿದೆ. ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪಡಿತರ ಆಹಾರಧಾನ್ಯ ವಿತರಿಸಲಾಗುವುದು ಎಂದು, ನ್ಯಾಯಬೆಲೆ ಅಂಗಡಿ ಮಾಲೀಕರು ಹೇಳಿದ್ದರಿಂದಾಗಿ.ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳದೇ ಇರುವವರು ನ್ಯಾಯಬೆಲೆ ಅಂಗಡಿಗೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ, ಈ ಸಂದರ್ಭದಲ್ಲಿ ಸಿದ್ದಾಪುರದ ಬಣಜಾರ ಮುಖಂಡ ರವಿಕುಮಾರ್ ಮತ್ತು ಪತ್ರಕರ್ತ ಹಾಗೂ ದಲಿತ ಮುಖಂಡ ಸಿದ್ದಾಪುರದ ಡಿ.ಎಂ. ಈಶ್ವರಪ್ಪ,ಹಾಗೂ ಸಿದ್ದಾಪುರ ಗ್ರಾಮದ ವಡ್ಡರಹಟ್ಟಿ ಮತ್ತು ಗೊಲ್ಲರಹರಟ್ಟಿ ಗ್ರಾಮಸ್ಥರು ಕೂಡ ಲಸಿಕೆ ಹಾಕಿಸಿಕೊಂಡರು. ಆರೋಗ್ಯ ಇಲಾಖೆಯ ಪಿ.ಹೆಚ್. ಸಿ.ಅನಿತಾ,ಡಿಸಿಓ ಪ್ರಮೋದ. ಆಶ ಕಾರ್ಯಕರ್ತೆಯರಾದ ಕಾಂತಮ್ಮ, ಗೀತಮ್ಮ,ಶೈಲಜಾ,ಸಿದ್ದಾಪುರದ ನ್ಯಾಯಬೆಲೆ ಅಂಗಡಿಯ ಮಾಲೀಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428