ಕನ್ನೋಳಿ“ಸ್ತ್ರೀಯರ ಸಬಲೀಕರಣಕ್ಕೆ ಮಹತ್ವ ನೀಡುತ್ತಿರುವ ಸರ್ಕಾರ ನಮ್ಮದು”
ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಕನ್ನೋಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀ ರಮೇಶ ಭೂಸನೂರ ಅವರ ಪರ ಪ್ರಚಾರಾರ್ಥವಾಗಿ ನಡೆದ ಮಹಿಳಾ ಸಮಾವೇಶಕ್ಕೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಹಾಗೂ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭೇಟಿ ನೀಡಿದಾಗ, ಮಹಿಳಾ ಮೋರ್ಚಾದ ಸದಸ್ಯರು ಅರಿಶಿನ ಕುಂಕುಮ ನೀಡಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಬಳಿಕ ಸಮಾವೇಶವನ್ನು ಉದ್ಘಾಟಿಸಿ, ಜನರ ಹಿತಕ್ಕೆ ಶ್ರಮಿಸುವ ಬಿಜೆಪಿಗೆ ಮತ ನೀಡಿ, ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಬೆಂಬಲ ಕೋರಿದರು. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಹಿರಿಯ ನಾಯಕರಾದ ಶ್ರೀ ಬಿ.ಎಸ್ ಯಡಿಯೂರಪ್ಪ ಜಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಸರ್ಕಾರ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದು, ಹುಟ್ಟಿದ ಪ್ರತಿಯೊಬ್ಬ ಹೆಣ್ಣು ಮಗುವಿಗೂ ಇದರಿಂದ 1 ಲಕ್ಷ ರೂ. ಭಾಗ್ಯಲಕ್ಷ್ಮೀ ಬಾಂಡ್ ದೊರೆಯುತ್ತಿದೆ. ಕೇಂದ್ರ ಸರ್ಕಾರ ಕೂಡ ಸುಕನ್ಯಾ ಸಮೃದ್ಧಿ ಯೋಜನೆ, ಭೇಟಿ ಬಚಾವೊ ಭೇಟಿ ಪಡಾವೊ ಯೋಜನೆ, ಉಜ್ವಲಾ ಯೋಜನೆಗಳನ್ನು ಜಾರಿಗೆ ತಂದು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆಧಾರವಾಗಿ ನಿಂತಿದೆ. ಈ ಎಲ್ಲಾ ಯೋಜನೆಗಳನ್ನು ನಿಮ್ಮ ಬಳಿಗೆ ತಲುಪಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಸಿ.ಸಿ. ಪಾಟೀಲ್ ಜಿ, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಲಕ್ಷ್ಮಣ ಸವದಿ ಜಿ, ಬಿಜೆಪಿ ಬೆಳಗಾವಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಸಂಜಯ ಪಾಟೀಲ, ಸಿಂಧಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮುಖಂಡರು, ಊರಿನ ಮಹಿಳೆಯರು ಪಾಲ್ಗೊಂಡಿದ್ದರು.
ವರದಿ – ಮಹೇಶ ಶರ್ಮಾ