ಸ್ಕೂಲ್ ಡೇಸ್’ ಚಿತ್ರೀಕರಣ ಆರಂಭ….
ಹಿರೇಬಾಗೇವಾಡಿ : ಶ್ರೀಗುರು ಮಹಾಂತ್ ಕ್ರಿಯೇಷನ್ಸ್ ಬೈಲಹೊಂಗಲ್ ವತಿಯಿಂದ ನಿರ್ಮಾಣವಾಗುತ್ತಿರುವ , ಕುಂದಾ ನಗರಿ ಡಿಂಪಲ್ ಕ್ವೀನ್ ಪ್ರೀಯಾ , ನಮ್ರತಾ ನಾಯಕಿ ನಟಿಯಾಗಿ ಅನೀಲ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ ‘ಸ್ಕೂಲ್ ಡೇಸ್’ ಚಿತ್ರೀಕರಣಕ್ಕೆ ಇಲ್ಲಿನ ಕರ್ನಾಟಕ ಹೈಸ್ಕೂಲ್‌ನಲ್ಲಿ ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹಾಗೂ ಬಡೇಕೊಳ್ಳಮಠದ ನಾಗೇಂದ್ರಸ್ವಾಮೀಜಿ ಕ್ಯಾಮರಾ ಗುಂಡಿಯನ್ನು ಒತ್ತಿ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿ ಚಿತ್ರ ತಂಡಕ್ಕೆ ಶುಭ ಕೋರಿದರು. ಜಿವಿವಿ ಸಂಘದ ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಆರ್ ಇಎಂಎಸ್ ಶಾಲೆಯ ಅಧ್ಯಕ್ಷ ಸುರೇಶ ಇಟಗಿ,ಸಂಯೋಜಕ ಆನಂದ ಕಳಸದ, ಪತ್ರಕರ್ತ ಸೋಮಶೇಖರ ಸೊಗಲದ ,ದಯಾನಂದ ಮುಪ್ಪೆನವರಮಠ ಮೊದಲಾದವರು ಆಗಮಿಸಿದ್ದರು. ಸುಮಾರು ಮೂವತ್ತು ದಿನಗಳ ಕಾಲ ಬೆಳಗಾವಿ, ಹಿರೇಬಾಗೇವಾಡಿ, ಮತ್ತು ಪ್ರೇಕ್ಷಣಿಯ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸುವದಾಗಿ ಚಿತ್ರ ತಂಡ ಹೇಳಿದ್ದು , ಸ್ಕೂಲ್ ಡೇಸ್ ಚಿತ್ರದಲ್ಲಿ ಅನೀಲ ಹುದಲಿ, ನಾಯಕಿಯರಾಗಿ ಪ್ರೀಯಾ, ನಮ್ರತಾ , ಮಲ್ಲಿಕಾರ್ಜುನ, ಸಂದೀಪ, ದಾನೇಶ ಖಳನಾಯಕನಾಗಿ ವಿರಾಜ್, ಪ್ರಾಂಶುಪಾಲರಾಗಿ ಪತ್ರಕರ್ತ ಸೋಮಶೇಖರ ಸೊಗಲದ ಅಭಿನಯಿಸುತ್ತಿದ್ದಾರೆ. ಪಕ್ಕಾ ಹಾಸ್ಯ ಮತ್ತು ಮನೋರಂಜನೆಯ ಚಿತ್ರ ಇದಾಗಿದ್ದು ಎಲ್ಲರ ಮನವನ್ನು ಸೆಳೆಯುತ್ತದೆ. ಎಲ್ಲ ಅಂದು ಕೊಂಡಂತೆ ಆದರೆ ಈ ವರ್ಷದ ಕೊನೆಯೊಳಗೆ ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ತರುವ ಯೋಚನೆ ಇದೆ ಎಂದು ನಿರ್ಮಾಪಕ ಉಮೇಶ್ ಹಿರೇಮಠ ಹೇಳುತ್ತಾರೆ. ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಅವರಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ನಮ್ಮಲ್ಲಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ನೀಡಬೇಕು. ಇದರಲ್ಲಿ ಸಹಜ ರೀತಿಯಲ್ಲಿ ತುಂಬಾ ಉತ್ತಮವಾಗಿ ಅಭಿನಯಿಸುತ್ತಿದ್ದಾರೆ. ನಿಜಕ್ಕೂ ಖುಷಿಯಾಗುತ್ತಿದೆ ಎಂದು ನಿರ್ದೇಶಕ ಸಂಜಯ್ ಹೇಳುತ್ತಾರೆ. ತಾಂತ್ರಿಕ ವರ್ಗದಲ್ಲಿ ಕೃಷ್ಣ ಎ.ಆರ್.ಛಾಯಾಗ್ರಹಣ ಮತ್ತು ಸಂಕಲನ, ಮೇಕಪ್ ನಾಗೇಶ್, ಸಂಗೀತ ಬಿಜೆ ಸೂರ್ಯ, ರಾಮಕೃಷ್ಣ ಸಿ ಎಚ್, ಕೋರಿಯೋಗ್ರಫಿ ಖ್ಯಾತ ನೃತ್ಯ ನಿರ್ದೇಶಕರಾದ ಮದನ್ ಹರಿಣಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರಚಾರಕಲೆ ವಿಶ್ವಪ್ರಕಾಶ ಮಲಗೊಂಡ, ಸಹಕಾರ ನಿರ್ದೇಶನ ರಂಜಿತ ತಿಗಡಿ, ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜೊತೆಗೆ ನಿರ್ದೇಶನವನ್ನು ಯುವ ಉತ್ಸಾಹಿ ನಿರ್ದೇಶಕ ಸಂಜಯ್ ಹಲಸಗಿ ಅವರದಿದ್ದು ನಿರ್ಮಾಪಕರು ಉಮೇಶ ಹಿರೇಮಠ ಆಗಿದ್ದಾರೆ.
ವರದಿ – ಸೋಮನಾಥ ಹೆಚ್.ಎಮ್.