ಜುಮಲಾಪೂರ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆ ಅರಿವು ಮೂಡಿಸುವ ಕಾರ್ಯಕ್ರಮ. ಆಟಕ್ಕುಂಟು ಲೆಕ್ಕಕ್ಕಿಲ್ಲ. ಆನಂದ ಬಂಡಾರಿಯವರಿಂದ ಅಧಿಕಾರಿಗಳಿಗೆ ತರಾಟೆ….
ಜುಮಲಾಪೂರ ಗ್ರಾಮದಲ್ಲಿ ಇಂದು ಕರ್ನಾಟಕ ಸರ್ಕಾರ ಆದೇಶದಂತೆ ತಾಲೂಕಡಳಿತ ಹಾಗೂ ತಾಲ್ಲೂಕು ಪಂಚಾಯಿತ ಹಾಗೂ ಪೋಲಿಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯೋಗದಲ್ಲಿ ಇಂದು ಜುಮಲಾಪೂರ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ತಾಲ್ಲೂಕಿನ ಅಧಿಕಾರಿಗಳು ತಹಶೀಲ್ದಾರ್ ಹಾಗೂ ತಾ ಪಂ ಅಧಿಕಾರಿಗಳ ಗೈರಾಗಿರುವದಕ್ಕೆ ಡಿ ಎಸ್ ಎಸ್ ರಾಜ್ಯ ಸಂಚಾಲಕ ಆನಂದ ಬಂಡಾರಿ ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಯನ್ನು ತರಾಟೆ ತೆಗೆದುಕೊಂಡು ಯಾವುದೇ ಮೇಲಾಧಿಕಾರಿಗಳ ಬರದೆ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ನೇಮಕಾವಸ್ತೆ ಯಂತೆ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ತಾಲ್ಲೂಕು ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಮಾಡಿರುವುದು ಖಂಡನೀಯ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಎಮ್ಮೆ ಗೆ ಜ್ವರ ಬಂದರೆ ಎತ್ತಿಗೆ ಬರೆ ಎಳೆದರಂತೆ ಆ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಿರಿ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಹಲವಾರು ಕುಂದು ಕೊರತೆ ಸಮಸ್ಯೆಯನ್ನು ನಿವಾರಿಸಲು ಸಂಭಂದಿಸಿದ ಅಧಿಕಾರಿಗಳು ಇಲ್ಲದೆ ಇರುವದು ಬೇಸರ ಸಂಗತಿ ಅಸ್ಪೃಶ್ಯತೆ ನಿವಾರಣೆ ಬಗ್ಗೆ ಜನ ಜಾಗೃತಿ ಮೂಡಿಸಲು ಮೆಲ್ಮಟ್ಟದ ಅಧಿಕಾರಿಗಳು ಬಂದು ಜನರ ಮನ ಪರಿವರ್ತನೆ ವಾಗುವಂತೆ ಮಾಡಬೇಕಾಗಿತ್ತು.? ಆದರೆಈ ಕಾರ್ಯಕ್ರಮಕ್ಕೆ ಮೇಲಾಧಿಕಾರಿಗಳ ಗೈರಾಗಿರುವದಕ್ಕೆ ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಮುಜುಗರಕ್ಕಿಡಾಗುವ ಪ್ರಸಂಗಗಳು ನೆಡೆದವು.ಈ. ಸಂದರ್ಭದಲ್ಲಿ ದಲಿತ ಮುಖಂಡ ಆನಂದ ಬಂಡಾರಿ ಶಂಕರಪ್ಪ ಡಿ ಎಸ್ ಎಸ್ ಜುಮಲಾಪೂರ ಗ್ರಾಮದ ಸಾರ್ವಜನಿಕರು ಇದ್ದರು.
ವರದಿ – ಉಪ–ಸಂಪಾದಕೀಯ