ಕೂಡ್ಲಿಗಿ:ಕ.ಸಾ.ಪ ಚುನಾವಣೆ ರಾಜ್ಯಧ್ಯಕ್ಷತೆಗೆ ಪುರಸ್ಕಾರ, ಜಿಲ್ಲಾಧ್ಯಕ್ಷತೆಗೆ ಭಹಿಷ್ಕಾರ-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಎ18ರಂದು ಸಂಜೆ, ಸಾಹಿತ್ಯ ಪರಿಷತ್ ಕೂಡ್ಲಿಗಿ ಘಟಕದಲ್ಲಿ ವತಿಯಿಂದ ಹಿರಿಯರಾದ ಡಾಟಿ.ಎಂ.ಶಾಂತಯ್ಯ ರವರ ಅಧ್ಯಕ್ಷತೆಯಲ್ಲಿ. ಮಾಜಿ ಜಿಲ್ಲಾಧ್ಯಕ್ಷರಾದ ಬ್ಯಾಳಿ ವಿಜಯಕುಮಾರ ಗೌಡ ಹಾಗೂ ಮಾಜಿ ತಾಲೂಕಾಧ್ಯಕ್ಷರಾದ ಕೆ.ಹೆಚ್.ಎಂ.ಚಿದಾನಂದ ಸ್ವಾಮಿರವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಜರುಗಿತು. ಕೂಡ್ಲಿಗಿ ಕಡೆಗಣನೆ-ಆಕ್ರೋಶ:- ಪ್ರಸಕ್ತ ಕಸಾಪ ಚುನಾವಣೆಯು ರಾಜ್ಯ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜರುಗಲಿದ್ದು,ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾತ್ರ ಮಾನ್ಯತೆ ನೀಡಿ,ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಭಹಿಷ್ಕರಿಸಲು ತೀರ್ಮಾನಿಸಿದ್ದು ಮಾನ್ಯತೆ ನೀಡದರಲು ಸರ್ವಸದಸ್ಯರು ಒಕ್ಕೋರಲಿನಿಂದ ನಿರ್ಣಯಿಸಲಾಗಿದೆ. ಕಾರಣ ಕಾಸಪ ಜಿಲ್ಲಾಧ್ಯಕ್ಷರು ಕೂಡ್ಲಿಗಿ ತಾಲೂಕನ್ನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಡೆಗಣಿಸಿದ್ದಾರೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು,ಪರಿಣಾಮ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಯನ್ನ ಕೂಡ್ಲಿಗಿ ತಾಲೂಕು ಘಟಕ ಭಹಿಷ್ಕರಿಸಲಿದೆ ಎಂದು ಕಸಾಪ ತಾಲೂಕು ಘಟಕ ಪ್ರಕಟಿಸಿದೆ. ಜಿಲ್ಲೆ ಇಬ್ಭಾಗವಾಗಿರುವ ಕಾರಣ ಚುನಾವಣೆಯಲ್ಲಿ ಗೊಂದಲ ಸೃಷ್ಠಿಯಾಗಿದ್ದು,ಪ್ರತ್ಯೇಕ ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಯನ್ನ ನಡೆಸುವುದು ಅನಿವಾರ್ಯವಾಗಲಿದೆ. ಕಾರಣ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಯನ್ನ ಕೂಡ್ಲಿಗಿ ತಾಲೂಕು ಘಟಕ ಭಹಿಷ್ಕರಿಸಿ ಸ್ಪಷ್ಟಪಡಿಸಿದೆ. ಈ ಕುರಿತು ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು,ಚರ್ಚಿಸಿ ಒಕ್ಕೋರಲ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಘಟಕ ಪ್ರಕಟಿಸಿದೆ. ಮತದಾನ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೆ ಮಾತ್ರ ಮಾನ್ಯತೆ ನೀಡಲಾಗುವುದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಾವುದೇ ಕಾರಣಕ್ಕೆ ಮತ ಚಲಾಯಿಸದಿರಲು ತಾಲೂಕು ಘಟಕದಿಂದ ತೀರ್ಮಾನಿಸಲಾಗಿದೆ. ವಿಭೂತಿ ಈರಣ್ಣ,ನಿವೃತ್ತ ಶಿಕ್ಷಕ ನಂದಿ ಬಸವರಾಜ, ನೌಕರರ ಸoಘದ ಅಧ್ಯಕ್ಷರಾದ ಪಿ.ಶಿವರಾಜ್, ಹಿರಿಯ ಮಹಿಳಾ ನ್ಯಾಯವಾದಿ ಕೆ.ಹೆಚ್.ಎಮ್. ಶೈಲಜಮ್ಮ, ಶಿಕ್ಷಕಿ ವಿಜಯಲಕ್ಷ್ಮಿ ಮತ್ತು ಅoಬಿಕಾ. ಸಾಹಿತ್ಯ ಪರಿಷತ್ ನ ಸದಸ್ಯರು ಭಾಗಿಯಾಗಿದ್ದರು.ಕೆ.ಎo. ವೀರೇಶ ನಿರೂಪಿಸಿದರು. ಕಸಾಪ ಕೂಡ್ಲಿಗಿ ಘಟಕ ತೆಗೆದು ಕೊಂಡ ನಿರ್ಣಯದಂತೆ ಅಗತ್ಯ ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ, ತಹಶಿಲ್ದಾರರ ಮೂಲಕ ಕಸಾಪ ಸದಸ್ಯರು ಮನವಿ ಮಾಡಿಕೊಳ್ಳಲಿದ್ದು, ಕಸಾಪ ಪದಾಧಿಕಾರಿಗಳು ಸದಸ್ಯರು ತಹಶಿಲ್ದಾರರಿಗೆ ಮನವಿ ಪತ್ರ ನೀಡಿದ್ದಾರೆ. ವರದಿ – ಚಲುವಾದಿ ಅಣ್ಣಪ್ಪ