ಕೊಪ್ಪಳ ಜಿಲ್ಲೆ ಮುಧೋಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಿಸಿ ಸಿಇಒ ದಿಢೀರ್ ಭೇಟಿ– ಪರಿಶೀಲನೆ….
ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಮುಂದೆ ಸುತ್ತ ಗಿಡಮರಗಳನ್ನು ನೋಡಿ ತುಂಬ ಸಂತೋಷಪಟ್ಟರು ಯಲಬುರ್ಗಾ : ಮುಧೋಳ ಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 6:30 ರವೇಳೆಗೆ ದಿಡೀರ್ ಭೇಟಿ ನೀಡಿ ಪರಿಸರದ ಬಗ್ಗೆ ಮಾತನಾಡಿದರು. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್. ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ (ಸಿಇಒ) ಹಾಗೂ ತೋಟಗಾರಿಕಾ ಇಲಾಖೆಯ ನಿರ್ದೇಶಕಿಯಾಗಿದ್ದ ಬಿ. ಫೌಝಿಯಾ ತರನಮ್ ಕೂಡ ಭೇಟಿ ನೀಡಿ ಮಾತನಾಡಿದರು. ಮುಧೋಳ ಗ್ರಾಮದಲ್ಲಿ ಒಟ್ಟು 4565 ಜನರಲ್ಲಿ 4454 ಜನರಿಗೆ ಲಸಿಕೆ ನೀಡಿದೆ ಶೇಕಡ 96ರಷ್ಟು ಪ್ರಗತಿ ಸಾಧಿಸಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಣ್ಣ ಅಂಗಡಿಯವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಿಳಿಸಿದರು ಹೀಗೆ ಪ್ರತಿಯೊಬ್ಬರ ಮನೆ-ಮನೆಗೆ ತೆರಳಿ ಲಸಿಕೆ ನೀಡಿ ಪ್ರತಿ ಆಶಾ ಕಾರ್ಯಕರ್ತೆಯರು ಕನಿಷ್ಠ ಜನರಿಗೆ ಲಸಿಕೆ ನೀಡುವ ಗುರಿ ಹೊಂದಬೇಕು.ಎಂದು ಹೇಳಿದರು. ಸುಸಂದರ್ಭದಲ್ಲಿ ಶುಶ್ರೂಷಕಿ ಕಾಳಮ್ಮ ಮತ್ತು ಗ್ರೂಪ್ ಡಿ ರವಿ ಅವರು ಇನ್ನು ಇತರರು ಇದ್ದರು.ಇದೇ ರೀತಿ ಜಿಲ್ಲೆಯಲ್ಲಿ ಬರುವ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳಿ ಬೇಟೆ ನೀಡಿ, ಪರೀಶಿಲಿಸಲೆಂದು ನಮ್ಮ ಪತ್ರಿಕೆಯ ಆಶಯ.
ವರದಿ – ಹುಸೇನ್ ಮೋತೆಖಾನ್