ಬಸವ ಜನ್ಮಸ್ಥಳ ಇಂಗಳೇಶ್ವರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕಿನ 43ನೇ ಶಾಖೆಯ ಬ್ಯಾಂಕ ಪ್ರಾರಂಭ
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕಿನ 43 ನೇಯ ಹೊಸ ಶಾಖೆಯನ್ನು ಪ್ರಾರಂಭಿಸಲಾಯಿತು ವಿಜಯಪುರ ಜಿಲ್ಲೆಯ ಜನತೆಗೆ ಬ್ಯಾಂಕಿಂಗ್ ಸೇವೆ ನೀಡುವುದರೊಂದಿಗೆ ರೈತಾಪಿ ವರ್ಗಕ್ಕೆ ಆರ್ಥಿಕ ನೆರವನ್ನು ಸಹಕಾರ ವಲಯದ ಸಂಘ ಸಂಸ್ಥೆಗಳ ಅಭಿವೃದ್ಧಿಯನ್ನು ಧ್ಯೇಯವನ್ನಾಗಿಸಿ ದಿನಾಂಕ 28/07/1919 ರಂದು ಭಾರತೀಯ ಸಹಕಾರ ಸಂಘಗಳ ಕಾಯ್ದೆ 1912 ರಡಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸ್ಥಾಪನೆಗೊಂಡಿದೆ ಬ್ಯಾಂಕು ಈಗ 100 ವರ್ಷಗಳ ಸುದೀರ್ಘ ಸೇವೆಯನ್ನು ಪೂರ್ಣಗೊಳಿಸಿದ್ದು ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ ಬ್ಯಾಂಕಿನ ಶಾಖೆಗಳನ್ನು ಆಧುನೀಕರಣಗೊಳಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬ್ಯಾಂಕು ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ಈ ದಿಶೆಯಲ್ಲಿ ಬ್ಯಾಂಕಿನ 43ನೇ ಶಾಖೆಯನ್ನು ಇಂಗಳೇಶ್ವರ ಗ್ರಾಮದಲ್ಲಿ ಪ್ರಾರಂಭ ಗೊಂಡಿದ್ದು 9:00 ಗಂಟೆಗೆ ಲಕ್ಷ್ಮಿ ಪೂಜೆ ಯೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇಂಗಳೇಶ್ವರದ ಹೊಸ ಕಟ್ಟಡದಲ್ಲಿ ಹೊಸದಾಗಿ ನಿರ್ಮಿಸಿರುವ ಡಿಸಿಸಿ ಬ್ಯಾಂಕಿನ ಹೊಸ ಕಟ್ಟಡ ಪ್ರಾರಂಭಗೊಂಡಿದೆ ಎಲ್ಲ ರೈತರು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಬ್ಯಾಂಕಿನ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು
ವರದಿ – ಪ್ರವೀಣ್ ನಂದಿ ವಿಜಯಪುರ