ಯಡೂರ ಗ್ರಾಮದಲ್ಲಿ ೬೬ ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಶಿವತೇಜ ಫೌಂಡೇಶನ ವತಿಯಿಂದ ಕಬ್ಬಡ್ಡಿ ಪಂದ್ಯಾವಳಿ….
ಯಡೂರ ಗ್ರಾಮದಲ್ಲಿ ೬೬ ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಶಿವತೇಜ ಫೌಂಡೇಶನ ವತಿಯಿಂದ ಆಯೋಜಿಸಲಾದ ಪುರುಷ ಮತ್ತು ಮಹಿಳೆಯರಿಗಾಗಿ ಮುಕ್ತ ಕಬ್ಬಡ್ಡಿ ಪಂದ್ಯಾವಳಿಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಚಾಲನೆ ನೀಡಿ,ಮಾತನಾಡಿ, ಆಟಗಾರರಿಗೆ ಶುಭ ಕೋರಿದರು. ಯುವಜನತೆಗೆ ಮೊಬೈಲ್ ಗಳಿಗೆ ಮಾರು ಹೋಗದೆ ಕ್ರಿಕೇಟ್, ಕಬ್ಬಡ್ಡಿ, ವಾಲಿಬಾಲ್ ನಂತಹ ಕ್ರೀಡೆಗಳಲ್ಲಿ ಒಲವು ತೋರಬೇಕು. ಕ್ರೀಡಾಕೂಟಗಳಲ್ಲಿ ಭಾಗಿವಹಿಸುವುದರಿಂದ ದೇಹ, ಮನಸ್ಸು ಸದೃಢವಾಗುತ್ತದೆ. ಯುವಕರಿಗೆ ಕಬ್ಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿರುವ ಶಿವತೇಜ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿವತೇಜ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಅಜಯ ಸೂರ್ಯವಂಶಿ, ಉಪಾಧ್ಯಕ್ಷರಾದ ಶ್ರೀ ಅಮರ ಬೋರಗಾಂವೆ, ಸದಸ್ಯರು,ಊರಿನ ಹಿರಿಯರು, ಅನೇಕ ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರು, ಆಟಗಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ