ಕನ್ನಡ ಅನ್ನದ ಭಾಷೆಯಾಗಲಿ– ಡಾ.ಜಯದೇವಿ….
ಹುಮನಾಬಾದ: ಕನ್ನಡ ಭಾಷೆ ಎರಡು ಸಾವಿರ ವರ್ಷದ ಇತಿಹಾಸ ಪರಂಪರೆ ಹೊಂದಿದೆ.ನೆಲ,ಜಲ,ಭಾಷೆ,ಸಂಸ್ಕೃತ,ಸಾಹಿತ್ಯ ಸಾಂಸ್ಕೃತಿಕ ಮಹತ್ವ ಹೊಂದಿದ ಪ್ರದೇಶ ಅತ್ಯಂತ ಶ್ರೀಮಂತಗೊಳ್ಳುತ್ತದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭಾಷೆ ಅವನತಿಯತ್ತ ಸಾಗಿದೆ ಮೊದಲು ಅನ್ನದ ಭಾಷೆಯಾದಾಗ ಕನ್ನಡಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತದೆಂದು ಸಾಹಿತಿ ಮತ್ತು ಪ್ರಾಧ್ಯಾಪಕಿ ಡಾ.ಜಯದೇವಿ ಗಾಯಕವಾಡ ಅಭಿಪ್ರಾಯ ಪಟ್ಟರು ತಾಲೂಕಾ ಆಡಳಿತ ಹಮ್ಮಿಕೊಂಡ ೬೬ ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.ಈ ವರ್ಷ ಎರಡು ರಾಜ್ಯೋತ್ಸವ ಪ್ರಶಸ್ತಿ ಜಿಲ್ಲೆಗೆ ಬರಬೇಕಾಗಿತ್ತು. ಇಲ್ಲೂ ಪ್ರಾದೇಶಿಕತೆ ಅಸಮಾನತೆ ಕಂಡುಬಂದಿದೆಯೆಂದು ವಿಷಾದ ವ್ಯಕ್ತಪಡಿಸಿ, ರಾಷ್ಟ್ರೀ ಯ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ದೊರೆತಿದೆಯೆಂದರು.ಒಂದು ವೇಳೆ ನಾವು ಇಂದು ಇಲ್ಲಿ ನಿಂತು ಮಾತನಾಡಲು ದಿ.ಬಸವರಾಜ ಪಾಟೀಲರು ಪದವಿ ಕಾಲೇಜು ಆರಂಭಿಸದೇ ಇದ್ದರೆ ನಾವು ಪ್ರಾಧ್ಯಾಪಕಿಯಾಗುತ್ತಿರಲಿಲ್ಲ ಎಂದು ಹೇಳಿದರು. ಅಧ್ಯಕ್ಷತೆಯನ್ನು ಶಾಸಕ ರಾಜಶೇಖರ ಪಾಟೀಲರವರು ವಹಿಸಿ ಕನ್ನಡ ಅಭಿವೃದ್ದಿ ಹಾಗೂ ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದನಾಗಿರುತ್ತೇನೆ. ತಾಲೂಕಾ ಅಧಿಕಾರಿಗಳು ಕೂಡಲೇ ತಮ್ಮ ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಣೆ ಮಾಡಲು ತಾಕೀತು ಮಾಡಿದರು.ಜಿಲ್ಲೆಗೆ ಮುಂದಿನ ದಿನಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪಕ್ಷಾತೀ ತವಾಗಿ ಕೆಲಸ ಮಾಡುತ್ತೇವೆ ಎಂದರು. ವಿಧಾನ ಪರಿಷತ್ತು ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಪುರಸಭೆ ಅಧ್ಯಕ್ಷೆ ಕಸ್ತೂರಬಾಯಿ ಪರಸನೂರ, ಉಪಾಧ್ಯಕ್ಷೆ ಸತ್ಯವತಿ ಮಠಪತಿ,ಟಿಎಪಿಎಂಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ,ಇಓ ಮುರುಗೆಪ್ಪ,ಡಿವೈಎಸ್ಪಿ ಸೋಮಲಿಂಗ ಕುಂಬರ,ಸಿಪಿಐ ಡಾ.ಮಲ್ಲಿಕಾರ್ಜುನ ಯಾತನೂರ,ಬಿ.ಇ.ಓ ಶಿವಗೊಂಡಪ್ಪ, ಜಯಶ್ರೀ ಗ್ರೇಡ್೨ ತಹಸೀಲ್ದಾರ,ಚಿಟಗುಪ್ಪ ಇಓ ಡಾ.ಗೋವಿಂದ ಇತರರು ಇದ್ದರು. ತಹಸೀಲ್ದಾರ ನಾಗಯ್ಯ ಹಿರೇಮಠ ಸ್ವಾಗತಿಸಿದರು.ಕಜಾಪ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ್ ನಿರೂಪಿಸಿ, ವಂದಿಸಿದರು.ಇದೆ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸಗಳಾದ ಪಿಡಿಓ, ವೈದ್ಯಾಧಿಕಾರಿಗಳನ್ನು ಸನ್ಮಾನಿಸಿದರು.
ವರದಿ – ಸಂಗಮೇಶ ಎನ್ ಜವಾದಿ.