ಸೌಲಭ್ಯಕ್ಕಾಗಿ ಸಂಘಟನೆ ಹೋರಾಟ ಅನಿವಾರ್ಯ–ಕಾಂ ಯಲ್ಲಲಿಂಗ–
ವಿಜಯನಗರ ಜಿಲ್ಲೆ ಕೂಡ್ಲಿಗಿ: ಸರ್ಕಾರಿ ಸೌಕರ್ಯಗಳನ್ನು ಪಡೆಯಲು ಹೋರಾಟ ಸಂಘಟನೆ ಹೋರಾಟ ಅನಿವಾರ್ಯ ಎಂದು, ಸಿಐಟಿಯು ಹಾಗೂ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷರಾದ ಕಾಂ ಯಲ್ಲಲಿಂಗ ನುಡಿದರು.ಅವರು ಜಂಗಮ ಸೋವೇನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ, ಸಿಐಟಿಯು ಹಾಗೂ ಸಿಡ್ಬಲ್ಯೂಎಫೈ ಗ್ರಾಮ ಘಟಕ ನಾಮಫಲಕ ಉದ್ಘಾಟಿಸಿ ಮಾತನಾಡಿದರು, ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಜಾರಿತಂದಿದೆ.ಅವುಗಳನ್ನು ಸಮರ್ಪಕವಾಗಿ ಹೊಂದಬೇಕೆಂದರೆ ಹೋರಾಟ ಅನಿವಾರ್ಯವಾಗಿದ್ದು, ಕಾರ್ಮಿಕರು ಸಂಘಟಿತರಾಗಬೇಕಿದೆ ಕೆಲ ಜನವಿರೋಧಿ ನೀತಿಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕಿದೆ, ಅದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಸಂಘಟನೆ ಹುಟ್ಟುಹಾಕಬೇಕೆಂದರು. ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಪುನೀತ್ ಗೆ ಶ್ರದ್ಧಾಂಜಲಿ-ಕಾರ್ಯಕ್ರಮದಲ್ಲಿಯುವ ನಟ ದಿವಂಗತ ಪನಿತ್ ರಾಜಕುಮಾರ್ ರವರ ಅಗಲಿಕೆ ಹಿನ್ನಲೆಯಲ್ಲಿ, ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ತಾಲೂಕು ಸಿ.ಪಿ.ಎಂ.ಪಾರ್ಟಿ ಕಾರ್ಯದರ್ಶಿ ಸಿ. ವಿರೂಪಾಕ್ಷಪ್ಪ,ತಾಲೂಕಿನ ಸಿ.ಐ.ಟಿ.ಯು ಸಂಚಾಲಕ ಗುನ್ನಳ್ಳಿ ರಾಘವೇಂದ್ರ,ದಲಿತ ಸಮಿತಿಯ ಬಿ.ಟಿ.ಗುದ್ದಿ ಚಂದ್ರು ವೇದಿಕೆಯಲ್ಲಿದ್ದರು. ಗ್ರಾಮದ ಕಾರ್ಮಿಕ ಮುಖಂಡರಿಗೆ ಹಾಗೂ ಗಣ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು. ಗ್ರಾಮದ ಪಂಚಾಯಿತಿ ಸದಸ್ಯರಾದ ಉಪ್ಪಾರ ಪಕ್ಕೀರಪ್ಪ,ಎಂ.ಕೊಟ್ರೇಶಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಗ್ರಾಮದ ಯುವ ಮುಖಂಡರಾದ ನಂದಿ ವಿರುಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು- ಅಧ್ಯಕ್ಷ ಬಾರಿಕರ ಹೂಲೆಪ್ಪ , ಉಪಾಧ್ಯಕ್ಷ ನಂದಿ ವಿರುಪಾಕ್ಷಪ್ಪ,ಕಾರ್ಯದರ್ಶಿ ಗೊಲ್ಲರ ತಿಮ್ಮಪ್ಪ , ಖಜಾಂಚಿ ಶ್ರೀಮತಿಮುದ್ದಪುರ ಭೀಮಕ್ಕರವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾದ ಬಂಗಾರಿ ಹನುಮಂತಪ್ಪ,ಉಪ್ಪಾರ ಪಕ್ಕೀರಪ್ಪ,ಗೊಲ್ಲರ ನಾಗಮ್ಮ, ಬಾರಿಕರ ಶಾರದಮ್ಮ,ಗುನ್ನಪ್ಪರ ಹನುಮಪ್ಪ,ಬಾರಿಕರ ಶಶಿಕುಮಾರ, ಗೊಲ್ಲರ ಲಕ್ಷ್ಮಣ,ಎಸ್ಡಿಎಮ್ಸಿ ಮಾಜಿ ಅಧ್ಯಕ್ಷ ಗೊಲ್ಲರ ತಿಮ್ಮಪ್ಪ, ನಾಣ್ಯಪುರ ಮಲ್ಲಪ್ಪ ಸೇರಿದಂತೆ ಕಾರ್ಮಿಕರು ಹಾಗೂ ಗ್ರಾಮದ ಮುಖಂಡರು ಭಾಗಿಯಾಗಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428