ಜೈಭೀಮ್ ಸೀನಿಮಾ ಪ್ರತಿಯೊಬ್ಬರು ನೋಡುವಂತ ಚಿತ್ರ…..
ಬುಡಕಟ್ಟು ಜನರ ಮೆಲೆ ಪೊಲೀಸ್ ವ್ಯವಸ್ಥೆ ಕಳ್ಳತನ ಸುಳ್ಳು ಮೊಕದ್ದಮೆ ದಾಖಲಿಸಿ ಪೋಲಿಸರು ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ ನೀಡಿ ಠಾಣೆಯಲ್ಲಿಯೇ ಕೊಲೆ ಮಾಡಿದ ಪ್ರಕರಣ ಮದ್ರಾಸ್ ಹೈಕೋರ್ಟ್ ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ದಾಖಲಾಗಿ. ಮದ್ರಾಸ್ ಹೈಕೋರ್ಟ್ ನಲ್ಲಿ ವಕೀಲರಾಗಿ ಹಲವು ವರ್ಷಗಳವರೆಗೆ ವೃತ್ತಿ ನಡೆಸಿ ತದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ ಚಂದ್ರುರವರು ನಡೆಸಿದ ಪ್ರಕರಣ #ಜೈಭೀಮ್ ಸಿನೆಮಾವಾಗಿದೆ. ಈ ಸಿನೆಮಾದಲ್ಲಿ ವಕೀಲರಾದ ಚಂದ್ರುರವರು ಪ್ರಕರಣವನ್ನು ನಿರ್ವಹಿಸಿದ ಹಾಗೂ ನಡೆಸಿದ ರೀತಿ ಅತ್ಯಂತ ಅನುಕರಣೆಯ ಹಾಗೂ ಆದರ್ಶ ನಿಯ. ಪ್ರಕರಣ ನಡೆಸಿದ ರೀತಿಯಂತೂ ಬಹಳ ಚತೋಹಾರಿಯಾಗಿದೆ. ಸತ್ಯದ ಹುಡುಕಾಟದ ಜೊತೆಗೆ ಅನ್ಯಾಯದ ಕುತಂತ್ರಗಳನ್ನು ಹೊರಗೇಳೆದ ರೀತಿ ಅದ್ಬುತ. ಚಂದ್ರುರವರು ತಮಿಳುನಾಡಿನಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ #AILU ಸಂಘಟನೆಯ ರಾಜ್ಯ ಅಧ್ಯಕ್ಷರಾಗಿದ್ದರು ಎಂಬುದು ನಮ್ಮ ಹೆಮ್ಮೆಯ ಸಂಗತಿ. ವ್ಯವಸ್ಥೆಯೊಳಗೆ ನಡೆಯುವ ಹುನ್ನಾರಗಳು ಬಯಲಾಗಬೇಕಾದರೆ ಇಂತಹ ವಿಬಿನ್ನವಾದ ಪ್ರಕರಣಗಳನ್ನು ವಿವಿದ ರಂಗ ರೂಪ ಹಾಗೂ ಸಿನೆಮಾ ರೂಪದಲ್ಲಿ ಬರಲೇಬೇಕಾದ ಅನಿವಾರ್ಯತೆ ಇದೆ. ಈ ಸಿನೆಮಾದಲ್ಲಿ ನಟಿಸಿದ ಎಲ್ಲರೂ ಅತ್ಯುತ್ತಮವಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಲ್ಲರೂ ಈ ಸಿನೆಮಾ ನೊಡಿ ಹಾಗೂ ನಿಮ್ಮ ಸ್ನೇಹಿತರಿಗೆ ನೊಡಲು ತಿಳಿಸಿ.
ವರದಿ – ಮಹೇಶ ಶರ್ಮಾ