ಕರ್ತವ್ಯ ಲೋಪದ ಆರೋಪದಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 8 ಪಿಡಿಓಗಳ ಅಮಾನತು
ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಸಭೆಗೆ ಗೈರು ಹಾಜರಾದ 5 ಪಿಡಿಓಗಳು ಮತ್ತು ಹಣಕಾಸು ವಹಿವಾಟಿನಲ್ಲಿ ಕರ್ತವ್ಯ ಲೋಪ ಎಸಗಿದ ಓರ್ವ ಹಾಗೂ ಸರ್ಕಾರದ ಆದೇಶ ಪಾಲಿಸದ ಇಬ್ಬರು ಪಿಡಿಒ ಸೇರಿದಂತೆ ಎಂಟು ಪಿಡಿಒಗಳನ್ನು ಕೊಪ್ಪಳ ಜಿಪಂ ಸಿಇಒ ರಘುನಂದನ್ ಮೂರ್ತಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿ ಬಾರಿ ಸಂಚಲನ ಮೂಡಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಎರಡನೇ ಅಲೆಯ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಡಿಸಿ ಹಾಗೂ ಸಿಇಒ ಅವರ ಅಧ್ಯಕ್ಷತೆಯಲ್ಲಿ ಗ್ರಾಪಂ ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಈ ಪೈಕಿ ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಪಂ ಪಿಡಿಒ ಬಸವರಾಜ ಕಿರ್ದಿ, ಇಂದರಗಿ ಗ್ರಾಪಂನ ಬಿ.ಕೃಷ್ಣಾರಡ್ಡಿ, ಯಲಬುರ್ಗಾ ತಾಲೂಕಿನ ಹಿರೇ ವಂಕಲಕುoಟಾ ಪಿಡಿಒ ಜುಮಾಲ್ ಸಾಬ, ಕುಕನೂರು ತಾಲೂಕಿನ ಯರೆಹಂಚಿನಾಳ ಗ್ರಾಪಂ ಪಿಡಿಒ ಮಹೇಶಗೌಡ, ಕುಷ್ಟಗಿ ತಾಲೂಕಿನ ಕೇಸೂರು ಗ್ರಾಪಂನ ನಾಗರತ್ನಾ ಅವರು ಸಭೆಗೆ ಗೈರು ಹಾಜರಾಗಿ ನಿರ್ಲಕ್ಷ ತೋರಿದ್ದರು. ಅಲ್ಲದೇ ಸಭೆಗೆ ಗೈರು ಹಾಜರಾದ ಕುರಿತಂತೆ ಸಿಇಒ ನೊಟೀಸ್ ನೀಡಿದ್ದರೂ ಅದಕ್ಕೆ ಸಮರ್ಪಕ ಉತ್ತರ ಕೊಡದ ಹಿನ್ನೆಲೆಯಲ್ಲಿ ಐವರನ್ನು ಕರ್ತವ್ಯ ನಿರ್ಲಕ್ಷತನ ತೋರಿ ಅಮಾನತು ಮಾಡಲಾಗಿದೆ. ಇನ್ನೂ ಗ್ರಾಪಂ ವ್ಯಾಪ್ತಿಯಲ್ಲಿನ ನಿವೇಶನಗಳಿಗೆ ಗ್ರಾಪಂನಿoದ 9 ಮತ್ತು 11 ಫಾರಂ ನೀಡದೇ ಸರ್ಕಾರದ ಕರ್ತವ್ಯದಲ್ಲಿ ಲೋಪ ಎಸಗಿದ ಕೊಪ್ಪಳ ತಾಲೂಕಿನ ಮತ್ತೂರು ಗ್ರಾಪಂನ ಸೋಮಶೇಖರ, ಕರ್ತವ್ಯಕ್ಕೆ ಅನಧೀಕೃತ ಗೈರಾದ ಹಾಸಗಲ್ ಗ್ರಾಪಂನ ಪ್ರಕಾಶ ಸಜ್ಜನ್ ಹಾಗೂ 14 ಮತ್ತು 15 ನೇ ಹಣಕಾಸು ಯೋಜನೆಯಡಿ ಹಣ ದುರುಪಯೋಗ ಮಾಡಿಕೊಂಡ ಅಗಳಕೇರಾ ಗ್ರಾಪಂ ಈ ಹಿಂದಿನ ಪಿಡಿಓ ಆಗಿದ್ದ ಗೌಸುಸಾಬ ಮುಲ್ಲಾ ಅವರನ್ನು ಅಮಾನತು ಮಾಡಲಾಗಿದೆ. ಒಟ್ಟು ಜಿಲ್ಲೆಯಲ್ಲಿ 08 ಪಿಡಿಒಗಳನ್ನು ಜಿಪಂ ಸಿಇಒ ಅವರು ಅಮಾನತು ಮಾಡುವುದರ ಮೂಲಕ ನಿರ್ಲಕ್ಷö್ಯತನ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಪಂ ಸಿಇಒ ಅಧಿಕಾರಿಗಳ ಮೇಲೆ ಅಮಾನತಿನ ಅಸ್ತç ಬೀಸುವ ಮೂಲಕ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಈ ದಿಟ್ಟ ನಿರ್ಧಾರಕ್ಕೆ ಕೆಲ ಅಧಿಕಾರಿಗಳು ತಂಡವಡಿದಿದ್ದಾರೆ, ಇವರ ಈ ನಿರ್ಧಾರಕ್ಕೆ ಸಲ್ಯೂಟ್ ಸಲ್ಲಿಸುತ್ತಿದ್ದೆವೆ. ವರದಿ – ಸಂಪಾದಕೀಯ