ಕಂಪ್ಲಿ: ಸಂಭ್ರಮದ ಕರ್ನಾಟಕ ರಾಜ್ಯೋತ್ಸವ,ನಾಡು–ನುಡಿ ರಕ್ಷಣೆಯೊಂದಿಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು– ನವಕರ್ನಾಟಕ ಯುವಶಕ್ತಿ ರಾಜ ಅಧ್ಯಕ್ಷರು ಕೆ ನ ಲಿ ಗೌಡ…
ಕಂಪ್ಲಿ : ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಭವ್ಯ ಪರಂಪರೆ ಹಾಗೂ ಅಗಾಧ ಆಲೋಚನೆಗಳು ಈ ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ನಾಡು ನುಡಿಯ ರಕ್ಷಣೆಯೊಂದಿಗೆ ಉಜ್ವಲ ಭವಿಷ್ಯ ರೂಪಿಸುವ ಶ್ರಮಿಸಬೇಕು ಈ ಜವಾಬ್ದಾರಿ ನಮ್ಮಲ್ಲರ ಮೇಲಿದೆ ಎಂದು ಕೆ ನ ಲಿ ಗೌಡ. ಅವರು ಹೇಳಿದರು. ತಂತ್ರಜ್ಞಾನ ಇಂದು ಎಲ್ಲಾ ರಂಗಗಳನ್ನು ಪ್ರವೇಶಿಸಿದೆ, ಈ ಶಕ್ತಿಯನ್ನು ನಾಡಿನ ಯುವ ಜನಾಂಗಕ್ಕೆ ಮುಟ್ಟಿಸಿ ಸಮಗ್ರ ಅಭಿವೃದ್ಧಿಗೆ ಪಣ ತೋಡುವ ಮೂಲಕ ನಮ್ಮ ಹಿರಿಯರ ಸಂಕಲ್ಪವನ್ನು ಸಾಕಾರಗೊಳಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯ ಆಗಿದೆ.ಎರಡು ಸಾವಿರ ವರ್ಷದ ಇತಿಹಾಸ ಇರುವ ಈ ನಮ್ಮ ಹೆಮ್ಮೆಯ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ದೊರೆತಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ನಮ್ಮ ನಾಡು ನುಡಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಅವರು ಹೇಳಿದರು. ಕನ್ನಡ ಸಂಸ್ಕೃತಿಯನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸುರ್ವಣ ಯುಗವನ್ನು ಸೃಷ್ಠಿಮಾಡಿ ಈ ನಾಡಿನ ಕಲೆ, ಭಾಷೆ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ “ಎಂದೂ ಮರೆಯದ” ವಿಜಯನಗರ ಸಾಮ್ರಾಜ್ಯ ನಮ್ಮದು; ಆ ಹೆಸರಿನಲ್ಲಿಯೇ ನೂತನ ಜಿಲ್ಲೆ ಉದಯಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ರಾಜ್ಯಾಧ್ಯಕ್ಷರು ಹೇಳಿದರು. ಕನ್ನಡ ಕೇವಲ ಭೂಪ್ರದೇಶವಾಗದೆ “ಒಂದು ಸಂಸ್ಕೃತಿ”, “ಒಂದು ಜನ ಸಮುದಾಯ”, ಇದೊಂದು ಭವ್ಯ ಪರಂಪರೆಯನ್ನು ಪ್ರತಿನಿಧಿಸುವ ಪ್ರಾಚೀನ ಸುಧೀರ್ಘ ಇತಿಹಾಸವಾಗಿದೆ. ಕನ್ನಡನಾಡು ವಿವಿಧ ಮತ, ಪಂಥ, ಧರ್ಮಗಳ ಸಂಗಮವಾಗಿದೆ, ಸರ್ವಧರ್ಮ ಸಹಿಷ್ಣುತೆ, ಸತ್ಯಾರಾಧನೆ, ಧರ್ಮನೀತಿ, ಸಮಭಾಳ್ವೆ, ಸೌರ್ಹಾದತೆ ಹಾಗೂ ಭಾವಕೈತೆಯ ದಿವ್ಯ ಸ್ವರ್ಗ ಈ ನಾಡು. ಈ ನಾಡಿನಲ್ಲಿ ಸಾಹಿತಿಗಳು, ಕವಿಗಳು, ಶಿಲ್ಪಿಗಳು, ಕಲಾವಿದರು, ಸಂಶೋಧಕರು ಹಾಗೂ ಇತಿಹಾಸಕಾರರು ತಮ್ಮದೇ ಶೈಲಿಯಲ್ಲಿ ಸಾಧನೆ ಮಾಡಿ ಕರ್ನಾಟಕ ಕೀರ್ತಿ ಕಳಸಕ್ಕೆ ಗರಿಗಳಾಗಿದ್ದಾರೆ. ಇದಕ್ಕೆ ಮುಕುಟ ಪ್ರಾಯವೆಂಬುವಂತೆ ದೇಶದಲ್ಲಿಯೇ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಈ ನಮ್ಮ ಕನ್ನಡಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಈ ಸಂದರ್ಭದಲ್ಲಿ ವಿರುಪಾಕ್ಷಿ ಯಾದವ್. ಎನ್ ಗೋಪಾಲ್ ಯಾದವ್.ಬಿ ನವೀನ್ ಕುಮಾರ್. ಜೆ ಶಿವಕುಮಾರ್. ವೈ ಎಲ್ಲಪ್ಪ. ಯು ಹೊನ್ನೂರ್ ಸ್ವಾಮಿ. ವಿ ದೊಡ್ಡಬಸವ. ಡಿ ಎಂ ಗೌರೀಶ್ ಬಳ್ಳಾರಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಗಂಗಾಧರ್ ಮತ್ತಿತರು ಇದ್ದರು.
ವರದಿ – ಸಂಪಾದಕೀಯ