ಹಲ್ಲಿನ ನೋವಿಗೆ ಪರಿಹಾರ – ಮನೆಮದ್ದು.
ಅಯ್ಯೋ ಸೃಷ್ಟಿಕರ್ತನೇ, ಜೀವನದಲ್ಲಿ ಏನು ಬೇಕಾದರೂ ಕಷ್ಟ ಕೊಡು, ಆದರೆ ಎಂದೂ ಹಲ್ಲು ನೋವು ಮಾತ್ರ ಕೊಡಬೇಡಪ್ಪ ಎನ್ನುವ ಪ್ರಾರ್ಥನೆ ಸರ್ವೇ ಸಾಮಾನ್ಯ. ಪ್ರತಿಯೊಬ್ಬರಿಗೂ ಹಲ್ಲು ನೋವು ಕಾಣಿಸಿಕೊಂಡಾಗ ಸಾಮಾನ್ಯವಾಗಿ ಆಡುವ ಮಾತುಗಳು ಇವು ಅಲ್ಲವೇ. ಹೌದು ಯಾಕೆಂದರೆ ಹಲ್ಲಿನಿಂದ ಬರುವ ನೋವನ್ನು ಸಹಿಸಿಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ. ಕ್ಯಾಲ್ಸಿಯಂ ಕೊರತೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದೆ ಇರುವುದರಿಂದ ಕೆಲ ಭಾಗದ ಹಲ್ಲು ಕೊಳೆತು,ಹಲ್ಲಿನಲ್ಲಿ ಕುಳಿ ಹಾಗೂ ಹುಳುಕು ಉಂಟಾಗುತ್ತದೆ.ಜೊತೆಗೆ ನಾವು ಸೇವಿಸಿದ ಆಹಾರ ಹಲ್ಲಿನ ಸಂದಿಯಲ್ಲಿ ಉಳಿದುಕೊಂಡು ಅದನ್ನು ನಾವು ಸ್ವಚ್ಛ ಪಡಿಸದೆ ಇದ್ದಾಗ ಆ ಹಲ್ಲಿನೊಳಗೆ ಆಹಾರ ಪದಾರ್ಥಗಳು ಬ್ಯಾಕ್ಟೀರಿಯಾವನ್ನು ಹುಟ್ಟುಹಾಕುತ್ತವೆ. ಈ ಮೂಲಕ ಹಲ್ಲಿನ ನೋವಿಗೆ ಕಾರಣವಾಗುತ್ತದೆ.ಇದಲ್ಲದೆ ತಂಪಾದ ನೀರು, ಬಿಸಿಯಾದ ವಸ್ತು, ಸಿಹಿ ತಿಂಡಿ ಹಾಗೂ ಗಟ್ಟಿಯಾದ ಆಹಾರವನ್ನು ಸೇವಿಸಿದಾಗ ಕೆಟ್ಟ, ಹುಳುಕಾದ ಹಲ್ಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರ ಪರಿಣಾಮ ಹಲ್ಲಿನ ಸುತ್ತಲ ಪ್ರದೇಶದಿಂದ ತಲೆ ಬುರುಡೆಯವರೆಗೂ ಭಯಂಕರ ನೋವು ಉಂಟಾಗುತ್ತದೆ. ಕೆಲವೊಮ್ಮೆ ಹಲ್ಲುನೋವಿನಿಂದ ಕಿವಿನೋವು ಮತ್ತು ತಲೆನೋವು ಹೆಚ್ಚಾಗಿ ಬರುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಹಲ್ಲು ನೋವಿನ ವೇದನೆಯ ಕಾರಣಕ್ಕೆ ನಿಧಾನವಾಗಿ, ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮುನ್ನ ಹಲವು ಬಾರಿ ಯೋಚಿಸುವ ಸ್ಥಿತಿಯು ಎದುರಾಗಬಹುದು.ಕಾರಣ ಹಲ್ಲು ಇದ್ದ ಮೇಲೆ ಹಲ್ಲು ನೋವು ಒಂದಲ್ಲಾ ಒಂದು ಬಾರಿ ಮನುಷ್ಯನಿಗೆ ಬಂದೇ ಬರುತ್ತದೆ ಎನ್ನುವದಂತು ದಿಟ್ಟ. ಹಲ್ಲು ನೋವಿನಿಂದ ಪಾರಾಗಿದ್ದೇವೆ ಎನ್ನುವವರು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಈ ಭೊಮಿ ಮೇಲೆ ಇರಬಹುದು. ಇನ್ನು ಹಲ್ಲು ನೋವನ್ನು ತಡೆದು ಕೊಳ್ಳುವ ಶಕ್ತಿ ಯಾರಿಗೂ ಇರುವುದಿಲ್ಲ. ಅದೆಷ್ಟೋ ಇದನ್ನು ಅತ್ಯಂತ ಗಂಭೀರ ಕಾಯಿಲೆ ಎಂದು ಜನಸಾಮಾನ್ಯರು ಪರಿಗಣಿಸುತ್ತಾರೆ.ಆದರಿಂದಲೇ ಹೇಳೋದು ಪ್ರತಿಯೊಬ್ಬರೂ ಪ್ರತಿದಿನ ಬಾಯಿಯನ್ನು ಎರಡು ಬಾರಿ ಸ್ವಚ್ಛ ಮಾಡಿಕೊಳ್ಳುವುದು ಅಗತ್ಯವಿದೆ ಅಂತ. ಅದರಲ್ಲಿಯೂ ಭ್ರಶ್ ಸಹಾಯ ಅಥವಾ ಬೆರಳುಗಳಿಂದ ನಿಧಾನವಾಗಿ ಎರಡು ನಿಮಿಷಗಳ ಕಾಲ ಹಲ್ಲನ್ನು ಚೆನ್ನಾಗಿ ಉಜ್ಜುವುದರಿಂದ ಹಲ್ಲಿನ ಸಂದಿಯಲ್ಲಿ ಉಳಿದುಕೊಂಡಿರುವ ಆಹಾರ ಪದಾರ್ಥಗಳು ಹೊರಬರಲು ಸಾಧ್ಯವಾಗುತ್ತದೆ. ಆಗ ಹಲ್ಲು ಹುಳುಕು ಆಗುವುದನ್ನು ತಪ್ಪಿಸಲು ಸಾಧ್ಯ, ಜೊತೆಗೆ ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಬಾಯಿಂದ ಕೆಟ್ಟ ದುರ್ವಾಸನೆ ಕೂಡ ಸಹ ಬರುವುದಿಲ್ಲ ಎನ್ನುವುದಂತು ನಿಜ. ಹಾಗಾದರೆ ಈ ಹಲ್ಲಿನ ಸಮಸ್ಯೆ ನಮ್ಮನ್ನು ಹೇಗೆ ಕಾಡುತ್ತದೆಂದರೆ – ಹಲ್ಲುಗಳು ಸರಿಯಾಗಿ ಸ್ವಚ್ಚತೆ ಮಾಡದೇ ಹೋದಾಗ,ಹಲ್ಲುಗಳಲ್ಲಿ ಅತಿ ದುರ್ವಾಸನೆ ಬಂದಾಗ ಇನ್ನು ಒಸಡುಗಳ ಮಧ್ಯೆ ಆಹಾರ ಪದಾರ್ಥಗಳು ಹಲವು ದಿನಗಳಿಂದ ಅಲ್ಲೇ ಇದ್ದಾಗ ಜೊತೆಗೆ ಹಲ್ಲುಗಳಲ್ಲಿ ಹುಳುಕು ಬಿದ್ದಾಗ ಸಹಜವಾಗಿ ಅವಗಾಲೇ ಹಲ್ಲಿನ ಸಮಸ್ಯೆ ಆರಂಭವಾಗುವುದು. ಅಂದರೆ ಬ್ಯಾಕ್ಟೀರಿಯಾಗಳು ಹಲ್ಲಿನೂಳಗೆ ಜನ್ಮಪಡೆದು ನಮ್ಮ ಹಲ್ಲಿನ ನೋವಿಗೆ ಕಾರಣವಾಗುತ್ತದೆ.ಆದಕಾರಣ ಸಾಮಾನ್ಯವಾಗಿ ಹಲ್ಲಿನ ನೋವು ಉಂಟಾದಾಗ ನೋವು ನಿವಾರಕ ಮಾತ್ರೆಯನ್ನು ಸೇವಿಸುವುದು ಸಹಜ. ಆದರೆ ಇದು ಸೂಕ್ತ ಕ್ರಮವಲ್ಲ. ತಾತ್ಕಾಲಿಕವಾಗಿ ನೋವು ನಿವಾರಣೆಯಾಗುವುದು. ಆದರೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.ಆದಕಾರಣ ಬಂಧುಗಳೆ
ಹಲ್ಲು ನೋವು ಬಂದಾಗ ಅದನ್ನು ಈ ರೀತಿ ಪರಿಹರಿಸಿಕೊಳ್ಳುವುದು ಉತ್ತಮ ಜೊತೆಗೆ ನಾವು ನಮ್ಮ ಮನೆಯಲ್ಲಿ ದೊರೆಯುವ ಸಂಪನ್ಮೂಲ, ಪದಾರ್ಥಗಳನ್ನು ಬಳಸಿಕೊಂಡು ಹಲ್ಲಿನ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳುವ ಪ್ರಯತ್ನ ಮಾಡಬಹುದಾಗಿದೆ.ಈ ನಿಟ್ಟಿನಲ್ಲಿ ನಮ್ಮ ಸಣ್ಣ ಮಾಹಿತಿ ಹೀಗಿದೆ. ಹಲ್ಲು ನೋವು ಕಾಣಿಸಿದ ತಕ್ಷಣ ಒಮ್ಮೆ ಬ್ರಶ್ ಮಾಡಿ, ನಂತರ ಚಿಟಕಿ ಅರಿಶಿಣ ಮತ್ತು ಅದಕ್ಕೆ ಚಿಟಿಕೆ ಉಪ್ಪನ್ನು ಬೆರೆಸಿ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹಾಕಿ ಸಾಸಿವೆ ಎಣ್ಣೆಯೊಂದಿಗೆ ಪೇಸ್ಟ್ ಅನ್ನು ಮಾಡಿಕೊಳ್ಳಿ ನಂತರ ಈ ಪೇಸ್ಟ್ ಅನ್ನು ಒಂದು ಹತ್ತಿಯಲ್ಲಿ ತೆಗೆದುಕೊಳ್ಳಿ. (ಹತ್ತಿಯ ಉಂಡೆಯಲ್ಲಿ ತೆಗೆದುಕೊಳ್ಳಿ )ಈ ಹತ್ತಿಯ ಉಂಡೆಯಿಂದ ಈ ಪೇಸ್ಟ್ ಅನ್ನು ತೆಗೆದುಕೊಂಡು ನೋವಾದ ಭಾಗಕ್ಕೆ ಅಂದರೆ ನೋವಾದ ಹಲ್ಲಿನ ಮೇಲೆ ಸ್ವಲ್ಪ ಸಮಯ ಇಡಿ. ಈ ರೀತಿ ನೀವು ಮಾಡುವುದರಿಂದ ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ. ಹಲ್ಲು ಹುಳುಕು ಆಗುವ ಒಂದು ಪ್ರಮೆಯನ್ನು ಕೂಡ ಕಡಿಮೆ ಮಾಡುತ್ತಾ ಬರುತ್ತದೆ.ಇನ್ನು ಹಲ್ಲು ನೋವು ಬಂದುಬಿಟ್ಟಿದೆ ಆಗ್ತಾ ಇಲ್ಲ, ಇದನ್ನು ಆದಷ್ಟು ಬೇಗ ಶಮನ ಮಾಡಿಕೊಳ್ಳಬೇಕು ಅನ್ನುವದಾದರೆ ಮನೆಯಲ್ಲಿಯೇ ಶುಂಠಿ ಇದ್ದರೆ ಆ ಶುಂಠಿಯ ಒಂದು ಭಾಗ ತೆಗೆದುಕೊಳ್ಳಿ, ಹಲ್ಲು ನೋವಾದ ಜಾಗಕ್ಕೆ ಇಡುವುದರಿಂದ ಬ್ಯಾಕ್ಟೀರಿಗಳು ನಾಶ ಮಾಡಲು ಸಾಧ್ಯವಾಗುತ್ತದೆ. ಹಲ್ಲಿನಿಂದ ಬರುವ ನೋವನ್ನು ಕಡಿಮೆ ಮಾಡುತ್ತದೆ.ಜೊತೆಗೆ ಮನೆಯ ಬಳಿ ಸೀಬೆಹಣ್ಣಿನ ಮರ ಇದ್ದರೆ ಅದರ ಒಂದೆರಡು ಎಲೆಗಳನ್ನು ತೆಗೆದುಕೊಂಡು ಬಾಯೊಳಗೆ ಹಾಕಿ ಜಗಿಯಿರಿ ಆ ರಸವೂ ಕೂಡ ನೋವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ. ಇನ್ನು ಹಲ್ಲು ನೋವು ಬಂದಾಗ ಐಸ್ ಪ್ಯಾಕ್ ಅಥವಾ ಹೆಪ್ಪು ಗಟ್ಟಿದ ಬಟಾಣಿ ಚೀಲವನ್ನು ಹಲ್ಲಿನಿಂದ ಉಂಟಾದ ನೋವಿನ ಜಾಗದಲ್ಲಿ ಇರಿಸಿ ಮತ್ತು ಕೆನ್ನೆಯ ಒಳಭಾಗದಲ್ಲಿ ಇರುವ ಹಲ್ಲಿನಿಂದ ನೋವು ಉಂಟಾಗುತ್ತಿದ್ದರೆ, ಕೆನ್ನೆಯ ಹೊರಭಾಗದಲ್ಲೂ ಐಸ್ ಪ್ಯಾಕ್ ಅನ್ನು ಇಡಬಹುದು.ಐಸ್ ಪ್ಯಾಕ್ ಅತಿಯಾಗಿ ತಣ್ಣಗಿರುವುದರಿಂದ ರಕ್ತನಾಳಗಳು ನಿರ್ಬಂಧಿಸುತ್ತವೆ. ಜೊತೆಗೆ ಪೀಡಿತ ಪ್ರದೇಶಗಳಿಗೆ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಇದರಿಂದ ನೋವು, ಸೆಳೆತ ಮತ್ತು ಉರಿಯೂತವು ಕಡಿಮೆಯಾಗುವುದು. ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕುಳಿಸಿದರೆ ಹಲ್ಲಿನ ಸಂಧಿಯಲ್ಲಿ ಸಿಲುಕಿಕೊಂಡ ಕೊಳೆ ಹಾಗೂ ಆಹಾರ ಪದಾರ್ಥಗಳು ತೆರವುಗೊಳ್ಳುತ್ತವೆ. ಜೊತೆಗೆ ಕೀಟಾಣುಗಳನ್ನು ನಾಶಗೊಳಿಸುವುದರಿಂದ ನೋವು ಮತ್ತು ಸೆಳೆತವು ಕಡಿಮೆಯಾಗುತ್ತದೆ.ಹಾಗೂ ಬೆಳ್ಳುಳ್ಳಿ ಸಹ ಹಲ್ಲು ನೋವು ನಿವಾರಣೆಗೆ ಅತ್ಯುತ್ತಮ ಮನೆ ಮದ್ದಾಗಿದೆ. ಹಿಂದಿನ ಕಾಲದಿಂದಲೂ ಬೆಳ್ಳುಳ್ಳಿ ಔಷಧೀಯ ವಸ್ತುವನ್ನಾಗಿ ಬಳಸಲಾಗುತ್ತಿದೆ. ಇದರಲ್ಲಿ ಆಲಿಸಿನ್ ಎನ್ನುವ ಸಂಯುಕ್ತ ಇರುವುದನ್ನು ಕಾಣಬಹುದು. ಅಲ್ಲದೆ ಶಕ್ತಿ ಶಾಲಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಆದ್ದರಿಂದ ಹಲ್ಲುನೋವು ಬಂದಾಗ ಬೆಳ್ಳುಳ್ಳಿಯನ್ನು ಬಳಸುವುದು ಒಳ್ಳೆಯದು ಎಂಬ ನಂಬಿಕೆ ನಮ್ಮದಾಗಿದೆ. ಕೆಲವು ತಾಜಾ ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಿ.ಸಿಪ್ಪೆಯನ್ನು ಬಿಡಿಸಿ, ಜಜ್ಜಿಕೊಳ್ಳಿ ಅಥವಾ ಪುಡಿಮಾಡಿಕೊಳ್ಳಿ.ಇದನ್ನು ಉಪ್ಪಿನೊಂದಿಗೆ ಬೆರೆಸಿ.ಉಪ್ಪಿನೊಂದಿಗೆ ಬೆರೆತ ಬೆಳ್ಳುಳ್ಳಿ ಮಿಶ್ರಣವನ್ನು ಪೀಡಿತ ಪ್ರದೇಶ ಅಥವಾ ನೋವಿನ ಜಾಗದಲ್ಲಿ ಇರಿಸಿ.ನೋವು ಬಹುಬೇಗ ಕಡಿಮೆಯಾಗುತ್ತದೆ.ಇದಲ್ಲದೆ ಪುದೀನಾ ಚಹಾ ಹೆಚ್ಚು ಆರಾಮದಾಯಕ ಅನುಭವ ನೀಡುವುದು. ಜೊತೆಗೆ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ನೋವುಗಳನ್ನು ಶಮನಗೊಳಿಸುವುದು. ಪುದೀನದಲ್ಲಿ ಇರುವ ಮಿಂಟಿ ಪರಿಮಳ ಹಾಗೂ ಜೀವವಿರೋಧಿ ಗುಣವು ನೋವನ್ನು ನಿವಾರಿಸಲು ಸಹಾಯಮಾಡುತ್ತದೆ.ಹಾಗೆ ಈರುಳ್ಳಿಯಲ್ಲಿರುವ ನಂಜುನಿರೋಧಕ ಗುಣಗಳು, ಎಂತಹ ಹಲ್ಲು ನೋವನ್ನು ಕೂಡ ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಂದು ವೇಳೆ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಹಸಿ ಈರುಳ್ಳಿಯನ್ನು ಸಣ್ಣ ಭಾಗಗಳಾಗಿ ಕತ್ತರಿಸಿ ನೋವಿರುವ ಹಲ್ಲುಗಳ ಭಾಗದಲ್ಲಿಟ್ಟು ಅಗಿಯಿರಿ. ಇಲ್ಲದಿದ್ದರೆ ಹತ್ತು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿಕೊಂಡಾಗ ಹಲ್ಲಿನ ನೋವು ಕಡಿಮೆಯಾಗುತ್ತದೆ.ಇನ್ನು ಒಂದು ಹತ್ತಿಯ ಉಂಡೆಯನ್ನು ಥೈಮ್ ಸಾರಭೂತ ತೈಲ ಮತ್ತು ನೀರಿನ ಮಿಶ್ರಣದಲ್ಲಿ ಅದ್ದಿ, ನೋವಿನ ಜಾಗದಲ್ಲಿ ಇರಿಸಿಕೊಳ್ಳಬಹುದು. ಹತ್ತಿಯ ಚಂಡನ್ನು ನೋವು ಇರುವ ಹಲ್ಲಿನ ವಿರುದ್ಧ ಮುಖವಾಗಿ ಒತ್ತಬೇಕು. ನೋವು ಕಡಿಮೆಯಾಗುತ್ತದೆ.ಅಲ್ಲದೇ ಸಮೃದ್ಧವಾದ ವಿಟಮಿನ್ ಇ ಇಂದ ಕೂಡಿರುವ ಸಸ್ಯ ಅಲೋವೆರಾ. ಅಲೋವೆರಾ ಜೆಲ್ಅನ್ನು ಸುಟ್ಟ ಗಾಯಗಳು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಲ್ಲಿನ ನೋವು ಹಾಗೂ ಒಸಡುಗಳನ್ನು ಸ್ವಚ್ಛ ಮಾಡಲು ಸಹಾಯಮಾಡುತ್ತದೆ ಎನ್ನುವುದು ಸುಳ್ಳಲ್ಲ. ಅಲೋವೆರಾ ನೈಸರ್ಗಿಕ ಜೀವ ವಿರೋಧಿ ಗುಣಗಳನ್ನು ಒಳಗೊಂಡಿದೆ. ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣದಿಂದ ಹಲ್ಲನ್ನು ತೊಳೆಯುವುದು, ನೋವಿನ ಸ್ಥಳವನ್ನು ಸ್ವಚ್ಛಗೊಳಿಸುವುದರಿಂದ ನೋವು ನಿವಾರಿಸಬಹುದು. ಆಂಟಿಬ್ಯಾಕ್ಟೀರಿಯಾ ಮೌತ್ವಾಶ್ ಆಗಿ ಬಳಸಬಹುದು.ಬಳಸುವ ಮೂಲಕ ಹಲ್ಲಿನ ನೋವಿಗೆ ಕಡಿವಾಣ ಹಾಕಬಹುದಾಗಿದೆ.ಹಾಗೂ ಲವಂಗ ಸಾಂಬಾರು ಪದಾರ್ಥಗಳಲ್ಲಿ ಒಂದು. ಅತ್ಯಂತ ಔಷಧೀಯ ಗುಣವನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಅರವಳಿಕೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ರಾಸಾಯನಿಕ ಸಂಯುಕ್ತವಾದ ಯುಜೆನಾಲ್ ಇರುತ್ತದೆ. ಲವಂಗ ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಒಳಗೊಂಡಿದೆ. ಇದು ಹಲ್ಲು ಮತ್ತು ವಸಡು ಸೋಂಕುಗಳ ವಿರುದ್ಧ ಹೋರಾಡುತ್ತದೆ ಮತ್ತು ನೋವು ಉಪಶಮನ ಮಾಡುತ್ತದೆ.ಲವಂಗ ಸಹ ಹಲ್ಲು ನೋವಿಗೆ ಒಳ್ಳೆಯ ಮದ್ದು. ಇವುಗಳಲ್ಲದೆ ವೆನಿಲ್ಲಾ ಸಾರ ಸಹ ಹಲ್ಲಿನ ನೋವು ನಿವಾರಣೆಗಾಗಿ ಬಳಸಬಹುದು. ಅದೇ ರೀತಿ ಲಿಂಬೆ ರಸ್,ಪುದೀನಾ ಎಣ್ಣೆ, ಹಿಂಗು,ಅಲಿವ್ ಎಣ್ಣೆ, ತೆಂಗಿನ ಎಣ್ಣೆ, ಕಾಳು ಮೆಣಸು ಸೇರಿದಂತೆ ಹಲವು ವಿವಿಧ ಬಗೆಯ ಮನೆಯಲ್ಲಿ ಸೀಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಹಲ್ಲಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.ಹೀಗೆ ಈ ರೀತಿಗಳಲ್ಲಿ ಹಲ್ಲು ನೋವು ಬಂದಾಗ ಮನೆ ಮದ್ದು ಮಾಡಿಕೊಳ್ಳುವುದಕ್ಕೆ ಅನೇಕ ಪರಿಹಾರಗಳು ಇವೆ. ಅದಕ್ಕೆ ಮಾತ್ರೆಯೊಂದೆ ಪರಿಹಾರ ಅಲ್ಲ. ಮಾತ್ರೆಗಳನ್ನು ತೆಗೆದುಕೊಂಡು ಹಲ್ಲು ನೋವನ್ನು ಪರಿಹರಿಸಿಕೊಳ್ಳುತ್ತೇವೆ ಅಂದರೆ ಅದು ಮಾರನೆ ದಿವಸ ಮತ್ತೆ ಬರುತ್ತದೆ.ಆಗ ನಾವು ಈ ರೀತಿ ಪರಿಣಾಮಕಾರಿಯಾದ ಮನೆ ಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಹಲ್ಲು ನೋವನ ಪರಿಹಾರವನ್ನು ಮಾಡಿಕೊಳ್ಳಬಹುದು. ಕೊನೆಯ ಮಾತು : ಹಲ್ಲಿನ ಒಸಡು ಕಾಯಿಲೆ ಅಥವಾ ಹಲ್ಲಿನ ಬಾವುಗಳಂತಹ ನೋವು ಹೆಚ್ಚು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಲ್ಲಿನ ತಿರುಳು ಎಂದು ಕರೆಯಲ್ಪಡುವ ಹಲ್ಲಿನ ಒಳಗಿನ ಭಾಗಕ್ಕೆ ಬ್ಯಾಕ್ಟೀರಿಯಾ ಸೋಂಕು ತಗುಲಿದಾಗ ಬಾವು ಉಂಟಾಗುತ್ತದೆ.ಹಾಗಾಗಿ ಹಲ್ಲಿನ ನೋವು ಹಾಗೂ ಕಾಳಜಿಯ ಬಗ್ಗೆ ಸಾಕಷ್ಟು ಗಮನ ನೀಡುವುದು ಅತಿಮುಖ್ಯವಾಗಿದೆ ಮತ್ತು ಅವಶ್ಯಕತೆ ಇದೆ.