ಬದುಕು ಕಟ್ಟಿಕೊಳ್ಳಲು ಕೂಲಿ ಅರಸಿ. ಚಿಕ್ಕ ಪುಟ್ಟ ಮಕ್ಕಳ ಕಟ್ಟಿಕೊಂಡು ಗುಳೆ ಹೋಗುತ್ತಿರುವ ಜುಮಲಾಪೂರ ಬಡ ಜನತೆ.
ಕುಷ್ಟಗಿ ತಾಲ್ಲೂಕಿನ ತಾವರಗೇರಾ ಹೋಬಳಿಯ ಜುಮಲಾಪೂರ ಗ್ರಾಮದ. ದುಡಿದು ಜೀವನ ಸಾಗಿಸುವ ಸುಮಾರು ಬಡಜನರು ಕಾರ್ಮಿಕರು ಇಂದು ಬದುಕು ಕಟ್ಟಿಕೊಳ್ಳಲು ಕೂಲಿ ಅರಸಿ ದಿನ ಒಂದು ಎರಡರಂತೆ ತೆರೆದ ವಾಹನದಲ್ಲಿ ಗುಳೆ ಹೊರಟಿರುವದು ಕಂಡು ಬರ್ತಾಯಿದೆ. ಸತತವಾಗಿ ಎರಡು ವರ್ಷಗಳ ಕಾಲ “ಕೋರೋನ್” ಮಹಾ ಮಾರಿಯಿಂದ. ಮನೆಯಲ್ಲಿಯೇ ಕೈ ಕಟ್ಟಿ ಕುಳಿತ ಬಡ ಜನರಿಗೆ ಈಗ ಸರ್ಕಾರ ನಿಡಿರುವ ಸಂಪೂರ್ಣ ಅನಲಾಕ್ ನಿರ್ದಾರದಿಂದ. ಕೂಲಿಯನ್ನೆ ನಂಬಿ ಕುಳಿತಿದ್ದ ಗ್ರಾಮಸ್ಥರು ತುತ್ತಿನ ಚಿಲ ತುಂಬಿಸಿಕೊಳ್ಳುವ ಸಲುವಾಗಿ ಹಳ್ಳಿಯ ಬಡ ಜನರು ಕುಟುಂಬ ಸಮೇತವಾಗಿ ಮಕ್ಕಳ ಜತೆಗೂಡಿ ತೆರೆದ ವಾಹನದಲ್ಲಿ ಕಾಳು ಕಡಿ ದಿನದ ಚಟುವಟಿಕೆ ಗಂಟು ಮೂಟೆ ಕಟ್ಟಿಕೊಂಡು ನಗರದತ್ತ ಮುಖ ಮಾಡುತ್ತಿದ್ದಾರೆ. ಬಡವನಾಗಿ ಹುಟ್ಟಿ ಬಡವನಾಗಿಯೇ ಸಾಯಬೇಕೆ ಹೊರತು ಶ್ರೀ ಮಂತನಾಗಲಿಕ್ಕೆ ಸಾದ್ಯವಿಲ್ಲ. ಎಂದು ಕಾರಣ ಗ್ರಾಮದಲ್ಲಿ ನಿತ್ಯವೂ ಕೆಲಸ ಸಿಗುವುದಿಲ್ಲ ಕೆವಲ ಎರಡು ಮೂರು ದಿನ ಮಾತ್ರ ಕೆಲಸಕ್ಕೆ ಕರೆಯುತ್ತಾರೆ. ನಂತರ ಏನೂ ಮಾಡಬೇಕು ಇದೆ ತರಹ ಕೊವಿಡ್ ನಿಂದ ಎರಡು ವರ್ಷದಿಂದ ಮನೆಯಲ್ಲಿ ಕುಳಿತು ಜೀವನ ನೆಡೆಸುವದು ಕಷ್ಟವಾಗುತ್ತಿದೆ. ಹಾಗಾಗಿ ತುತ್ತಿನ ಚಿಲ ತುಂಬಿಸಿಕೊಳ್ಳುವ ಸಲುವಾಗಿ ರಾಯಚೂರ ಜಿಲ್ಲೆಯ ಮಠಮಾರಿ ಗ್ರಾಮದ ಸುತ್ತ ಮುತ್ತ ಗ್ರಾಮಕ್ಕೆ ಹತ್ತಿ ಬಿಡಿಸಲು ಕುಟುಂಬ ಸಮೇತವಾಗಿ ಹೊಗು ತ್ತಿದ್ದಾರೆ. ಕೆಲಸವಿಲ್ಲದೆ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಅನೇಕ ಕುಟುಂಬಗಳು ಉದ್ಯೋಗ ಅರಸಿ ನಗರಗಳತ್ತ ಮುಖ ಮಾಡಿವೆ. “ಇಷ್ಟು ದಿನ ಮನ್ಯಾಗ ಕುಂತ ತಿಂದ ರೊಕ್ಕ ಎಲ್ಲ ಖಾಲಿಯಾಗ್ಯಾವ ಹೊಟ್ಟೆ ಪಾಡಿಗಾಗಿ ದುಡಿಯಾಕ ಹೊಂಟಿವ್ರಿ ಮಕ್ಕಳನ್ನು ಬಿಟ್ಟು ಹೋದ್ರ ಮನ್ಯಾಗ ನೊಡ್ಕೊಳಾಕ ಯಾರು ಇಲ್ರಿ ಅದಕ್ಕ ಕರ್ಕೊಂಡು ಹೊಂಟಿವ್ರಿ. ಸಾಮಾನ್ಯ ಜನರ ಇಂತಹ ಕಷ್ಟದ ಜೀವನದಲ್ಲಿ ಮಕ್ಕಳನ್ನು ಕರೆದುಕೊಂಡು ಹೊಗುವದು ಅನಿವಾರ್ಯ ವಾಗಿದೆ. ಈ ಜಿಲ್ಲೆಯಲ್ಲಿ ಸಾಕಷ್ಟು ಕಿತ್ತು ತಿನ್ನುವ ಬಡತನವಿದ್ದು. ಉದ್ಯೋಗ ಮಾಡಲು ಕೈಗಾರಿಕೆಗಳು ಇಲ್ಲದ ಕಾರಣ ಜಿಲ್ಲೆಯಿಂದ ಲಕ್ಷಾಂತರ ಕಾರ್ಮಿಕರು ಗುಳೆ ಹೋಗಬೇಕಾಗಿದೆ. ಇತ್ತ ದುಡಿಯುವ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಕೈಗೊಂಡರು ಬಡವರ್ಗದ ಮಕ್ಕಳಿಗೆ ಪ್ರಯೋಜನ ಇಲ್ಲದಂತಾಗಿದೆ. ಈ ಬಗ್ಗೆ ಸಮಗ್ರವಾಗಿ ಅಧ್ಯಯನ ನೆಡಸಿ ಶಿಕ್ಷಣದಿಂದ ವಂಚಿತರಾಗುವದನ್ನು ತಪ್ಪಿಸಬೇಕಿದೆ. ಗ್ರಾಮ ಪಂಚಾಯಿತಿ ಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನಿಡಿ ಗುಳೆ ಹೋಗುವುದನ್ನು ತಡೆಯಲು ಪ್ರಯತ್ನ ಪಡಬೇಕಾಗಿರುವದು ಪಂಚಾಯಿತಿ ಇಲಾಖೆ ಒಂದು ಕಡೆ ಆದರೆ. ಪಂಚಾಯಿತಿ ಯಿಂದ ನೀಡಿದ ಮಾನವ ದಿನದ ಕೂಲಿ ಹಣ ಬರಲು ಹಲವಾರು ದಿನಗಳ ಬೇಕಾಗುತ್ತದೆ. ಆ ಹಣದಿಂದ ಒಂದು ದಿನದ ಹೊಟ್ಟೆ ತುಂಬಬಹುದೇ ಹೊರತು ಬೆಳೆ ಬೆಳೆಯಲು ಮಾಡಿದ ಸಾಲ ಇನ್ನಿತರ ಸಾಲ ಶೂಲ ಮಾಡಿದ್ದೆವೆ ಈ ಸಾಲಕ್ಕೆ ಬಡ್ಡಿ ಅಸಲು ಕಟ್ಟಬೇಕಾದರೆ ಗುಳೆ ಹೋಗಬೆಕಾಗಿರುವದು ಅನಿವಾರ್ಯ ವಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಈ ವಿಷಯಕ್ಕೆ ಸಂಭಂದಿಸಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳು ಹೆಚ್ಚೆತ್ತು ಕೂಡಲೇ ಗುಳೆ ಹೋಗುತ್ತಿರವ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸ್ಥಳೀಯವಾಗಿ ದೊರೆಯುವ ಕೆಲಸ ನೀಡಿ ಗುಳೆ ಹೋಗುವುದನ್ನು ತಡೆಗಟ್ಟಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿದೆ.
ವರದಿ – ಉಪ-ಸಂಪಾದಕೀಯ