ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಎಂಬ ಅವಹೇಳನಕಾರಿ ಹೇಳಿಕೆ ಖಂಡಿಸಿ ಹೊಳೆಆಲೂರ ಗ್ರಾಮದ ಆಲೂರ ವೆಂಕಟರಾಯರ ವೃತ್ತದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

Spread the love

ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಎಂಬ ಅವಹೇಳನಕಾರಿ ಹೇಳಿಕೆ ಖಂಡಿಸಿ ಹೊಳೆಆಲೂರ ಗ್ರಾಮದ ಆಲೂರ ವೆಂಕಟರಾಯರ ವೃತ್ತದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಇಂದು ನರಗುಂದ ಮತಕ್ಷೇತ್ರದ ಹೊಳೆಆಲೂರ ಮಂಡಲ ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಅಂತ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಆ ಒಂದು ಹೇಳಿಕೆ ಖಂಡಿಸಿ ಹೊಳೆಆಲೂರ ಗ್ರಾಮದ ಆಲೂರ ವೆಂಕಟರಾಯರ ವೃತ್ತದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಶರಣು ಚಲವಾದಿ, ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಶೇಖಪ್ಪ ಮಾದರ, ಹೊಳೆಆಲೂರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುದಿಯಪ್ಪ ದಾನಿ, ಉಮೇಶ ಪೂಜಾರ, ಯಲ್ಲಪ್ಪ ಚಲವಾದಿ, ರಾಜು ಕೊಳ್ಳಪ್ಪನವರ, ದುರ್ಗಪ್ಪ ಮಾದರ, ಕರಿಯಪ್ಪ ಚಲವಾದಿ, ಲೆಂಕೆಪ್ಪ ಹೊಸಮನಿ, ಬಸವರಾಜ ಹಾದಿಮನಿ, ಪಡಯಪ್ಪ ಮಾದರ, ಶಿವು ಮಾದರ, ಹನಮಂತ ನಂದಿ, ಕುಮಾರ ಕಾಳೆ, ರವಿ ಲಮಾಣಿ, ಶರಣಪ್ಪ ಚಲವಾದಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. *ಕಾರ್ಯಕ್ರಮ ಉದ್ದೇಶಿಸಿ ಗದಗ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಶರಣು ಚಲವಾದಿ ಮಾತನಾಡಿ ಸಿದ್ದರಾಮಯ್ಯನವರು ದಲಿತರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಇದು ಅವರ ಸಂಸ್ಕೃತಿ ಎಂತಹದು ಅಂತ ತೊರಿಸಿಕೊಡುತ್ತೆ ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಅಂತ ಹೇಳಿದ ಹಿನ್ನೆಲೆ, ಇವತ್ತು ರಾಜ್ಯಾದ್ಯಂತ ನನ್ನ ದಲಿತ ಸಮುದಾಯದವರು ಬದಲಾವಣೆ ಬಯಸಿ ಬಿಜೆಪಿ ಪಕ್ಷ ಸೇರುತ್ತಿದ್ದು ಇದರಿಂದ ಕಾಂಗ್ರೆಸ್ ಅವನತಿ ಅಂಚಿನಲ್ಲಿರುವ ಕಾರಣ ಸಹಿಸಲಾಗದೆ ಈ ರೀತಿಯಾದ ಹೇಳಿಕೆ ನೀಡುತ್ತಿದ್ದಿ ಅವರ ಈ ಹೇಳಿಕೆಯನ್ನು ವಾಪಸ್ ತಗೆದುಕೊಂಡು ದಲಿತರ ಕ್ಷೆಮೆ ಯಾಚಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಸಿದ್ದರಾಮಯ್ಯನವರ ವಿರುದ್ಧ ಉಗ್ರವಾದ ಪ್ರತಿಭಟನೆ ಮಾಡಲಾಗುವದು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ದಲಿತರನ್ನು ಯಾವ ರೀತಿ ನೋಡುತ್ತಿದೆ ಎನ್ನುವದು ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ ಅವರನ್ನು ನೋಡಿದರೆ ನಮಗೆ ತಿಳಿಯುತ್ತೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ,  ತಾವು ಜೆಡಿ ಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದು ಏಕೆ ಎಂದು ಪ್ರಶ್ನೇ ಮಾಡಿದರು, ತಾವು ಒಬ್ಬ ಪ್ರಭಾವಿ ರಾಜಕಾರಣಿಯಾಗಿ ಈ ರೀತಿ ಹೇಳಿದ್ದು ಖಂಡನಿಯ, ಈ ಕೂಡಲೇ ದಲಿತ ಸಮುದಾಯದ ಕ್ಷೆಮೆ ಯಾಚಿಸಬೇಕು ಎಂದು ಹೇಳಿದರು. ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಶೇಖಪ್ಪ ಮಾದರ ಮಾತನಾಡಿದರು, ಮುಖಂಡರಾದ ಯಲ್ಲಪ್ಪ ಚಲವಾದಿ, ಮುದಿಯಪ್ಪ ದಾನಿ ಮಾತನಾಡಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *