ಅಖಿಲ ಭಾರತ ಕ್ರಾಂತಿಕಾರಿ ರೈತ ಸಂಘಟನೆ– AIKKS…..
ಇಂದು ರಾಯಚೂರಿನ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಕರ್ನಾಟಕ ರೈತ ಸಂಘ (AIKKS) ನೇತೃತ್ವದಲ್ಲಿ ಜನ ವಿರೋಧಿ ಕೇಂದ್ರ ಸರ್ಕಾರದ ಮೂರು ತಿದ್ದುಪಡಿ ಕಾಯ್ದೆಗಳನ್ನು ಕೈ ಬಿಡಬೇಕೆಂದು ಆರಂಭವಾದ ಅನಿರ್ದಿಷ್ಟ ಧರಣಿ ಹೋರಾಟವನ್ನು ಉದ್ದೇಶಿಸಿ CPI(ML) ಪಕ್ಷದ ರಾಜ್ಯ ಕಾರ್ಯದರ್ಶಿ ಕಾ” ಬಿ. ರುದ್ರಯ್ಯ , ಪ್ರಗತಿಪರ ಚಿಂತಕರು ಹಾಗೂ ಸಿನಿಮಾ ನಟರಾದ ಚೇತನ್ , CPIML ಪಕ್ಷದ ಕೇಂದ್ರ ಸಮಿತಿ ಸದಸ್ಯರಾದ ಕಾ” ಅಮೀರ್ ಅಲಿ, ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾ” ಶೇಖರಯ್ಯ , ಮಹಿಳಾ ಒಕ್ಕೂಟದ ರಾಜ್ಯ ಮಹಿಳಾ ಮುಖಂಡರಾದ ವಿರೂಪಮ್ಮ ಅವರು ಮಾತನಾಡಿದರು. ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳು ವಾಪಸ್ಸುಗಲಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಐಕ್ಯತೆ ಚಿರಾಯುವಾಗಲಿ .
ವರದಿ – ಸೋಮನಾಥ ಹೆಚ್.ಎಮ್.