ಸಾರ್ವಜನಿಕ ಶೌಚಾಲಯ ನಿರ್ವಣೆಯಿಲ್ಲ–ಸದಸ್ಯ ಪೂರ್ಯ್ಯಾನಾಯ್ಕ ಆರೋಪ–
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಯಗಳು ನಿರ್ವಹಣೆ ಇಲ್ಲ,ಸಮರ್ಪಕ ನಿರ್ವಹಣೆಗೆ ಕ್ರಮ ಜರಿಗಿಸಿ ಎಂದು ಸದಸ್ಯ ಪೂರ್ಯಾನಾಯ್ಕ ಸಭೆಯಲ್ಲಿ ಆಗ್ರಹಿಸಿದ್ದಾರೆ.ಅವರು ಪಪಂ ಸಭೆಯಲ್ಲಿ ಮಾತನಾಡಿ ಶೌಚಾಲಯಕ್ಕೆ ಸಾಯಂಕಾಲ ಬೇಗ ಬೀಗ ಹಾಕಲಾಗುತ್ತೆ,ಇದರಿಂದಾಗಿ ಸಾರ್ವಜನಿಕರು ಪರಾದಾಡುವಂತಾಗಿದೆ ಕಾರಣ ಬೆಳಿಗ್ಗೆ ಬೇಗ ತೆರೆಯಬೇಕು,ಹಾಗೂ ರಾತ್ರಿ ಹೊತ್ತಿನವರೆಗೂ ಶೌಚಾಲಯಗಳ ಸೇವೆ ಅಗತ್ಯವಿದ್ದು ತೆರೆದಿರಲು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸದಸ್ಯ ಪೂರ್ಯಾನಾಯ್ಕ ಸೂಚಿಸಿದರು.ತಾಂಡದಲ್ಲಿ ಕುಡಿಯೋ ನೀರಿನ ಸಮಸ್ಯೆ ಬಹುದಿನಗಳಿಂದ ಹಾಗೇ ಇದೆ ಬೇಗ ಶೀಘ್ರವೇ ಕುಡಿಯೋ ನೀರಿನ ಸಮಸ್ಯೆ ಬಗೆಹರಿಸಿ ಎಂದು ಪೂರ್ಯಾನಾಯ್ಕ ಮುಖ್ಯಾಧಿಕಾರಿಗೆ ಸಭೆಯಲ್ಲಿ ಒತ್ತಾಯಿಸಿದರು. ಸದಸ್ಯ ಚಂದ್ರಶೇಖರ ಮಾತನಾಡಿ ಕೃಷಿಯೇತರ ಭೂಮಿಗೆ ಪಪಂ ನಿಂದ ಅನುಮೋದನೆ ನೀಡುವ ಸಂದರ್ಭದಲ್ಲಿ,ಸ್ಥಳೀಯ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತಗೆದುಕೊಳ್ಳತ್ತಿಲ್ಲ ಹಾಗೂ ಖುದ್ಧು ಸ್ಥಳ ಪರಿಶೀಲಿಸದೇ ಅನುಮೋದನೆ ನೀಡುತ್ತಿದ್ದೀರಿ ಎಂಬ ಆರೋಪಗಳಿವೆ ಅನುಮೋದನೆ ನೀಡುವಲ್ಲಿ ಭಾರೀ ತಾರತಮ್ಯ ಎಸಗುತ್ತಿದ್ದೀರಿ ಎಂದು ಚಂದ್ರಶೇಖರ ಮುಖ್ಯಾಧಿಕಾರಿಗೆ ನೇರವಾಗಿ ಆರೋಪಿಸಿದರು. ಕಾವಲ್ಲಿ ಶಿವಪ್ಪನಾಯಕ ಮಾತನಾಡಿ ಅನುಮೋದನೆ ಗಳನ್ನ ನೀಡುವಲ್ಲಿ,ತಾವು ತಾರತಮ್ಯ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಅನುಮೋದನೆ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದೀರಿ ಹಾಗೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅನುಮೋದನೆ ನೀಡಿರುವ ಆರೋಪಗಳಿವೆ.ಲೋಪ ಎಸಗಲು ಕಾರಣವಾದರು ಏನು.!? ಲಂಚದ ಆಮೀಶನಾ ಪ್ರಭಾವಿಗಳ ಒತ್ತಡನಾ.?.ಹಾಗೇನಾದರೂ ಲಂಚ ನಿಗಧಿಪಡಿಸಿದ್ದು ಇದ್ದರೆ ಲಂಚದ ದರಪಟ್ಟಿ ನಿಗದಿಪಡಿಸಿ ಕಚೇರಿಯಲ್ಲಿ ಫಲಕ ಹಾಕಿ ಎಂದು ಶಿವಪ್ಪನಾಯಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿಯ ತಾರತಮ್ಯ ದ್ವಿಮುಖ ನೀತಿ ಭ್ರಷ್ಠಾಚಾರ ಆರೋಪಗಳ ಕುರಿತು,ತಮಗೆ ಬಂದ ಮಾಹಿತಿಗಳನ್ನ ಆಧರಿಸಿ ಮುಖ್ಯಾಧಿಕಾರಿಗೆ ವಿವಿದ ರೀತಿಯ ಪ್ರೆಶ್ನೆಗಳ ಸುರಿಮಳೆ ಗೈದರು. .ಸದಸ್ಯರಾದ ಸಿರಿಬಿ ಮಂಜುನಾಥ ಹಾಗೂ ಬಾಸುನಾಯ್ಕ,ಸಚಿನ ಕುಮಾರ್ ಕೂಡ ಇವರೊಂದಿಗೆ ಧ್ವನಿಗೂಡಿಸಿದರು.ಪಪಂ ಅಧ್ಯಕ್ಷರು ಉಪಾಧ್ಯಕ್ಷರು ಮುಖ್ಯಾಧಿಕಾರಿ ವೇದಿಕೆಯಲ್ಲಿದ್ದರು ಸಭೆಯಲ್ಲಿ ಸದಸ್ಯರು ಇದ್ದರು. ವರದಿ – ಅಣ್ಣಪ್ಪ ಚಲುವಾದಿ