ಬೆಂಗಳೂರು:ರಾಜ್ಯಮಟ್ಟದ ಬೀದಿ ಬದಿ ವ್ಯಾಪಾರಿಗಳ ಪೂರ್ವಭಾವಿಸಭೆ–
ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ದಿಂದ,ನವಂಬರ13ರಂದು ಶನಿವಾರ ಬೆಳಿಗ್ಗೆ 10-00 ಕ್ಕೆ, ಬೆಂಗಳೂರಿನ ಗಾಂಧಿನಗರ ಮುಖ್ಯರಸ್ಥೆಯಲ್ಲಿರುವ, ಮಹಾರಾಷ್ಟ್ರಮ೦ಡಲ ಹಾಲ್ ನಲ್ಲಿ ಜರುಗುವ ಪೂರ್ವಭಾವಿ ಸಭೆಗೆ, ಮುಖ್ಯಅತಿಥಿಗಳಾಗಿ ಎನ್.ಎ.ಎಸ್.ವಿ.ಐ ಆರಬಿ೦ದಸಿ೦ಗಜೀರವರು, ಹಾಗೂ ಗಣ್ಯಮಾನ್ಯರು.ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ತಾಲ್ಲೂಕು ಅಧ್ಯಕ್ಷರು,ಹೋಬಳಿ ಅಧ್ಯಕ್ಷರು ಹಾಗೂ ಬೆಂಗಳೂರು,ನಗರ ವಲಯ ಅಧ್ಯಕ್ಷರು ಹಾಗೂ ವಾರ್ಡ ಅಧ್ಯಕ್ಷರುಗಳು,ಬೀದಿ ಬದಿ ವ್ಯಾಪಾರಿಗಳು,ಸಮಿತಿಪದಾಧಿಕಾರಿಗಳು,ಪಟ್ಟಣ ಮಾರಾಟ ಸಮಿತಿಯ ಚುನಾಯಿತ ಪ್ರತಿನಿಧಿಗಳು,ವಿಕಲ ಚೇತನ ಘಟಕದ ಪದಾಧಿಕಾರಿಗಳು,ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಸಮಿತಿ ಪದಾಧಿಕಾರಿಗಳು, ಬೀದಿ ಬದಿ ವ್ಯಾಪಾರಿ ಮುಖಂಡರುಗಳು ಭಾಗವಹಿಸಲಿದ್ದಾರೆ.ಸಭೆಗೆ ಕರ್ನಾಟಕ ರಾಜ್ಯಾದ್ಯಂತ ಎಲ್ಲ ಶಾಖೆಯ ಸಮಿತಿ ಪದಾಧಿಕಾರಿಗಳು ತಪ್ಪದೆ ಆಗಮಿಸಿ, ತಮ್ಮ ಅಭಿಪ್ರಾಯ ಗಳನ್ನು ತಿಳಿಸಬೇಕೆಂದು, ಸಂಘಟನೆ ರಾಜ್ಯ ಘಟಕದಿಂದ ವಿನಂತಿಸಲಾಗಿದೆ. ಸಭೆಯಲ್ಲಿ ಚರ್ಚಿಸ ಬೇಕಾದ ವಿಷಯಗಳು:ಮಹಿಳಾ ಬೀದಿಬದಿ ವ್ಯಾಪಾರಿಗಳ ರಾಜ್ಯ ಮಟ್ಟದ ಸಭೆ ಮಾಡುವದರ ಕುರಿತು, ಜನೇವರಿ 20 ರಂದು 2022 ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಅತಿ ವಿಜೃಂಭಣೆಯಿಂದ ಆಚರಿಸುವುದರ ಕುರಿತು, ದಿನಾಚರಣೆ ಯಾವೂರ ನಲ್ಲಿ ಮಾಡುವ ಕುರಿತು,ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಹೊಸ ಸವಲತ್ತುಗಳ ಬಗ್ಗೆ ಚರ್ಚೆ,ಕರ್ನಾಟಕ ರಾಜ್ಯಾದ್ಯಂತ ಬೀದಿಬದಿ ವ್ಯಾಪಾರಿಗಳ ಕುಂದುಕೊರತೆಗಳ ಬಗ್ಗೆ ಅಭಿಪ್ರಾಯ,ಪಟ್ಟಣ ವ್ಯಾಪಾರ ಸಮಿತಿ ಸಮಸ್ಯೆಗಳ ಬಗ್ಗೆ ಚರ್ಚೆ,ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದ್ದು. ಪೂರ್ವಭಾವಿ ಸಭೆಗೆ ಸಂಘಟನೆಯ ಸರ್ವ ಸದಸ್ಯರು ಆಗಮಿಸಿ,ಸಭೆಯಲ್ಲಿ ತಮ್ಮ ಅಮೂಲ್ಯ ವಾದ ಅಭಿಪ್ರಾಯ ತಿಳಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾದ್ಯಕ್ಷರಾದ ಸಿ.ಈ.ರಂಗಸ್ವಾಮಿ ಈ ಮೂಲಕ ವಿನಂತಿಕೊಂಡಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008927428