ಪಿಡಿಒ ವರ್ಗಾವಣೆಗೆ ಒತ್ತಾಯಿಸಿ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ–
ಕಳೆದ ಹಲವು ತಿಂಗಳುಗಳಿಂದ ಶಿರಗುಪ್ಪಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳಾಗದೇ ಗ್ರಾಮದ ಅಭಿವೃದ್ಧಿ ಹಿಂದುಳಿಯಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೇ ಕಾರಣ ಹೀಗಾಗಿ ಅವರನ್ನ ತಕ್ಷಣ ವರ್ಗಾವಣೆ ಮಾಡಬೇಕು ಇಲ್ಲವಾದರೆ ಗ್ರಾಮ ಪಂಚಾಯತಿಯ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡುವದಾಗಿ ಶಿರಗುಪ್ಪಿ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತ ರ ಸರ್ಕಾರ ನೀಡುವ ಗಾಂಧಿ ಗ್ರಾಮ ಪ್ರಶಸ್ತಿ ಪಡದುಕೊಂಡಿದೆ ಇಂತಹ ಗ್ರಾಮದಲ್ಲಿ ಕಳೆದ ಒಂಭತ್ತು ತಿಂಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ ಎಂಬುದು ವಿಪರ್ಯಾಸವೆ ಸರಿ. ಈ ವಿಷಯಕ್ಕೆ ಸಂಬಂದಿಸಿದಂತೆ ಮಾತನಾಡಿದ ಶಿರಗುಪ್ಪಿ ಗ್ರಾಪಂ ಅಧ್ಯಕ್ಷೆ ಗೀತಾಂಜಲಿ ಚೌಗಲೆ ಮಾತನಾಡಿ,ಶಿರಗುಪ್ಪಿ ಗ್ರಾಮ ಪಂಚಾಯತಿಗೆ ಈ ವರ್ಷ ನೂತನವಾಗಿ ಆಯ್ಕೆಯಾಗಿ ಬಂದಿದ್ದೇವೆ ಆದರೆ ಆಯ್ಕೆ ಆಗಿ ಬಂದಾಗಿನಿಂದ ನಮಗೆ ಪಿಡಿಒ ಅವರು ನಮಗೆ ಯಾವುದೇ ಸ್ಪಂದನೆ ನೀಡಿಲ್ಲ ಹೀಗಾಗಿ ಅವರನ್ನ ತಕ್ಷಣ ಮೇಲಾಧಿಕಾರಿಗಳು ಅವರನ್ನ ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಲಾಗುವದು ಎಂದರು. ನಂತರ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ರಾಮಗೌಡಾ ಪಾಟೀಲ್ ಮಾತನಾಡಿ,ಶಿರಗುಪ್ಪಿ ಗ್ರಾಮ ಪಂಚಾಯತಿ ಅನೇಕ ಸಲ ಗಾಂಧಿ ಗ್ರಾಮ ಪ್ರಶಸ್ತಿಗೆ ಭಾಜನವಾಗಿದೆ ಆದರೆ ಈ ವರ್ಷದ ಆಡಳಿತದಲ್ಲಿ ಪಿಡಿಒ ಶೈಲಜಾ ಭಜಂತ್ರಿ ಅವರು ನಮಗೆ ಸ್ಪಂದನೆ ನೀಡದೇ ಇರುವದರಿಂದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ ಆದ್ದರಿಂದ ಊರಿನ ಗ್ರಾಮಸ್ಥರು ನಮ್ಮೆಲ್ಲಾ ಸದಸ್ಯರಿಗೆ ಛೀಮಾರಿ ಹಾಕುತ್ತಿದ್ದಾರೆ ಅದಕ್ಕಾಗಿ ಆದ್ದರಿಂದ ಈ ಪಿಡಿಒ ಅವರನ್ನು ವರ್ಗಾವಣೆ ಮಾಡಬೇಕು ಇಲ್ಲವಾದಲ್ಲಿ ನಾವೆಲ್ಲ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವದಾಗಿ ಹೇಳಿದರು.
ವರದಿ – ಮಹೇಶ ಶರ್ಮಾ