ಕೂಡ್ಲಿಗಿ:ಸಿಐಟಿಯು, ಸಿಡಬ್ಲೂಎಪೈ ತಾಲೂಕು ಸಮ್ಮೇಳನ–
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ನ10ರಂದು ಶ್ರೀಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ,ಸಿಐಟಿಯು,ಸಿಡಬ್ಲೂಎಫೈ ಸಹಯೋಗದಲ್ಲಿ ತಾಲೂಕು ಸಮ್ಮೇಳನ ಜರುಗಿತು.ಕಾಂ ಮಹಾಂತೇಶ ಮಾತನಾಡಿ ಕಾರ್ಮಿಕರು ಸಂಘದಲ್ಲಿ ಸಂಘಟಿತರಾಗಬೇಕಿದೆ, ಅರ್ಹ ಕಾರ್ಮಿಕರೆಲ್ಲರೂ ಸರ್ಕಾರಿ ಸೌಕರ್ಯಗಳನ್ನು ಸಮರ್ಪಕವಾಗಿ ಪಡೆಯಬೇಕಿದೆ ಎಂದರು.ಕಾರ್ಮಿಕರು ಹಾಗೂ ಕಾರ್ಮಿಕರ ಕುಟುಂಬಗಳ ಸರ್ವತೋಮುಖ ಅಭಿವೃದ್ಧಿಗೆ, ಸರ್ಕಾರ ಇನ್ನೂ ಹತ್ತು ಹಲವು ಯೋಜನೆಗಳನ್ನು ಜಾರಿತರಬೇಕಿದೆ ಎಂದರು.ವೇದಿಕೆಯಲ್ಲಿ ಕಾರ್ಮಿಕ ಮುಖಂಡರಾದ ಭಾಸ್ಕರ ರೆಡ್ಡಿ, ಯಲ್ಲಲಿಂಗ, ಸಿ.ವಿರುಪಾಕ್ಷಪ್ಪ, ಗುನ್ನಳ್ಳಿ ರಾಘವೇಂದ್ರ ಉಪಸ್ಥಿತರಿದ್ದರು.ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ, ಮಹಿಳಾ ಕಾರ್ಮಿಕರು ಹಾಗೂ ವಿವಿದ ನೂರಾರು ಕಾರ್ಮಿಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕಚೇರಿಗೆ ಭೆಟ್ಟಿ- ಕೂಡ್ಲಿಗಿ ಪಟ್ಟಣದ ಹೊಸಪೇಟೆ ರಸ್ತೆ ಶ್ರೀಕೊತ್ತಲಾಂಜನೇಯ ದೇವಸ್ಥಾನದ ಹತ್ತಿರ ಇರುವ,ಸಿಐಟಿಯು ಹಾಗೂ ಸಿಡಬ್ಯೂಎಫೈ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಛೇರಿಗೆ.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಭೆಟ್ಟಿ ನೀಡಿನೀಡಿದರು,ಈ ಸಂದರ್ಭದಲ್ಲಿ ಕಾರ್ಮಿಕೆನ್ನುದ್ದೇಶಿಸಿ ಮಾತನಾಡಿದರು.ಕಾರ್ಮಿಕರು ಸಂಘದ ಕಛೇರಿಯ ಸಹಕಾರ ಪಡೆದು ಸರ್ವತೋಮುಖ ಅಭಿವೃದ್ಧಿ ಹೊಂದಬೇಕಿದೆ,ಮದ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕರ ನಡುವೆ, ಸಂಪರ್ಕ ಸೇತುವೆಯಾಗಿ ಸಂಘಟನೆ ಕಚೇರಿ ಕಾರ್ಯನಿರ್ವಹಿಸಲಿದೆ. ಕಾರ್ಮಿಕರ ಹಿತಕ್ಕಾಗಿ ಸಂಘನೆ ಕಚೇರಿ ತೆರೆಯಲಾಗಿದ್ದು,ಪ್ರತಿ ಕಾರ್ಮಿಕರು ಸಂಘದಲ್ಲಿ ಸದಸ್ಯತ್ವ ಹೊಂದಿ ಸಂಘಟನೆ ಜೊತೆ ಕೈಜೋಡಿಸಬೇಕಿದೆ ಎಂದರು. ಕಾರ್ಮಿಕ ಹೋರಾಟಗಾರ ಸಿ.ವಿರುಪಾಕ್ಷಪ್ಪ, ಸಿಐಟಿಯು ಕಾರ್ಯದರ್ಶಿ ಗುನ್ನಳ್ಳಿ ರಾಘವೇಂದ್ರ ಸೇರಿದಂತೆ ಹಲವು ಕಾರ್ಮಿಕರು ಇದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428