ಸಿಹಿಜೇನು ನಿನ್ನ ಪ್ರೀತಿ…….

Spread the love

ಸಿಹಿಜೇನು ನಿನ್ನ ಪ್ರೀತಿ…….

ಚುಮು-ಚುಮು ಮುಂಜಾನೆಯಲಿ

ಈ ಧರೆಯ ಮೇಲೆ

ಆ ಉದಯ ರವಿ ಚೆಲ್ಲಿದ

ಹೊಂಬಿಸಿಲು..ನಿನ್ನ ಪ್ರೀತಿ!!

ಕತ್ತಲು ಆವರಿಸಿದಾಗ ಭಯದಿಂದ

ಕೆಂಗಟ್ಟ ನನ್ನ ಹೃದಯಕೆ

ಆ ಚಂದಿರ ಚೆಲುವ ಸಾಂತ್ವನದ

ಹೊಂಬೆಳಕು ನಿನ್ನ ಪ್ರೀತಿ!!

 

ಬಣ್ಣ ಬಣ್ಣದ ಕುಸುಮ ರಾಶಿ,

ನವಿರು ನೈದಿಲೆಗಳಲೀ

ಘಮ್ ಎಂದು ಕಂಪು ಸೂಸುವ

ಹೂಬನ.. ನಿನ್ನ ಪ್ರೀತಿ!!

ತಣ್ಣನೆ ಬಿಸಿ ಮೈ ಮರೆಸುವ

ತಂಪು ತಂಗಾಳಿ ನಿನ್ನ ಪ್ರೀತಿ!!

 

ಅಲ್ಲೆಲ್ಲೋ ಹಾರುವ ದುಂಬಿಯನು

ಕ್ಷಣಮಾತ್ರದಲೀ ಸೇಳೆನಾ

ಸವಿ ಮಧುರತೆ ತುಂಬಿದ

ಹೂವಿನ ಮಕರಂದ.. ನಿನ್ನ ಪ್ರೀತಿ!!

ಅದೆಷ್ಟೋ ವರುಷಗಳಿಂದ ಹನಿ

ಹನಿಯಾಗಿ ಸೇರಿಸಿ ಕೂಡಿಟ್ಟು

ಮಿಡಿಯುವ ಜೀವ ಬಾವಕೆ ನೀಡುವ

ಸಿಹಿಜೇನು ನಿನ್ನ ಪ್ರೀತಿ!!

ಕುಮಾರಿ.ಜಾನಕಿ

ಬೆಂಗಳೂರು.

Leave a Reply

Your email address will not be published. Required fields are marked *