ಹಸಿರಾದ ಪರಿಸರ…….
ನಮ್ಮೆಲ್ಲರ ಉಸಿರೇ ಹಸಿರಲ್ಲಿ ನೆಲೆಸಿರುವಾಗ
ಆ ಹಸಿರನ್ನು ಜೋಪಾನವಾಗಿಟ್ಟು
ಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ
ಈ ಹಸಿರಾದ ನೇಸರ ಉಳಿಸದಿದ್ದಲ್ಲಿ
ಹೆಸರು ಮಾಡಿ ಗಳಿಸಿದ
ಭೂತಬಂಗಲೆ ಇದ್ದು ಏನು ಪ್ರಯೋಜನ
ನಿನ್ನ ಸ್ವಾರ್ಥ ಹೆಸರಿಗಾಗಿ ನಿನಗೆ ಉಸಿರಾದ
ಗಿಡ ಮರಗಳನ್ನು ಕತ್ತರಿಸಿದರು
ನೀನು ಹೆಸರಾಗು, ಉಸಿರಾದ
ಗಿಡ ಮರಗಳನ್ನು , ಬೆಳೆಸುತ್ತಾ ಅ ಶುದ್ಧ ಉಸಿರು
ನಿನ್ನ ಸುದೀರ್ಘವಾಗಿ ಕಾಯುತ್ತೆ ಕೊನೆತನಕ
ಉಸಿರಾದ ಹಸಿರು ಪರಿಸರವನ್ನು ಕತ್ತರಿಸಿದರೆ
ಆ ಉಸಿರಿಗಾಗಿ ತಿರ್ಪೆ ಎತ್ತುವ ಕ್ಷಣ
ಕಣ್ಮುಂದೆ ಇದೆ ಮನುಜ ಎಷ್ಟೇ ತನ್ನ ಸ್ವಾರ್ಥತೆ ಇಂದ ಬದಲಾದರು
ಪರಿಸರ ಮಾತ್ರ ತನ್ನ ನಿಸ್ವಾರ್ಥ ಹಸಿರಾದ ಉಸಿರನ್ನು ಎಲ್ಲರಿಗೆ ಕೊಟ್ಟು ಸಹಕರಿಸುತ್ತೇ
ಕುಮಾರಿ.ಸ್ವಾತಿ ಸಿಂದೆ ಹುಬ್ಬಳ್ಳಿ