ವಿಜಯನಗರ:ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಸೈಕಲ್ ಮೂಲಕ ಜಾಗೃತಿ–
ಮಧುಮೇಹದಲ್ಲಿ ಭಾರತಕ್ಕೆ ವಿಶ್ವದಲ್ಲಿಯೇ 2ನೇ ಸ್ಥಾನ;ಎಚ್ಚೆತ್ತುಕೊಂಡು ಜೀವನಶೈಲಿಯಲ್ಲಿ ಬದಲಾವಣೆ ತುರ್ತು ಅಗತ್ಯ:ಡಿಎಚ್ಒ ಡಾ.ಜನಾರ್ಧನ್*- ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ, ಭಾರತೀಯ ವೈದ್ಯಕೀಯ ಸಂಘ, ಬಳ್ಳಾರಿ ಸೈಕಲ್ ಕ್ಲಬ್, ಬಳ್ಳಾರಿ ರನ್ನರ್ಸ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಹಾಗೂ ತಂಬಾಕು ಸೇವನೆ ನಿಯಂತ್ರಣಕ್ಕಾಗಿ ಗುಲಾಬಿ ಆಂದೋಲನದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸೈಕಲ್ ಮೂಲಕ ಸಂಚರಿಸಿ ಸಕ್ಕರೆ ಕಾಯಿಲೆ ಕುರಿತು ಜಾಗೃತಿ ಮಂಡಿಸಲಾಯಿತು. ಈ ಜಾಗೃತಿ ಜಾಥಾಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ಎಲ್. ಜನಾರ್ಧನ ಅವರು ಭಾನುವಾರ ಚಾಲನೆ ನೀಡಿದರು. ಈ ಸೈಕಲ್ ಜಾಥಾವು ಜಿಲ್ಲಾ ಆಸ್ಪತ್ರೆಯಿಂದ ಆರಂಭವಾಗಿ ಸಂಗಮ್ ಸರ್ಕಲ್,ರಾಯಲ್ ಸರ್ಕಲ್, ಬೆಂಗಳೂರು ರಸ್ತೆ, ತೇರು ಬೀದಿ, ಮೋತಿ ಸರ್ಕಲ್, ರಂಗಮಂದಿರ, ಕೌಲಬಜಾರ, ಬೆಳಗಲ್ಲ ಕ್ರಾಸ್, ರೇಡಿಯೋ ಪಾರ್ಕ್, ರೈಲ್ವೆ ಎರಡನೇ ಗೇಟ್ ಮೂಲಕ
ಮೂಲಕ ಮಳೆಯನ್ನು ಲೆಕ್ಕಿಸದೆ ಪ್ರಮುಖ ವೃತ್ತಗಳಲ್ಲಿ ನಿಲ್ಲುತ್ತಾ ಐಇಸಿ ವಿಭಾಗದ ವಾಹನದ ಮೂಲಕ ಸಾರ್ವಜನಿಕರಿಗೆ ಜಾಗೃತಿ ನೀಡಲಾಯಿತು. ಮತ್ತು ತಂಬಾಕು ಸೇವನೆ ವಿರೋಧ ಕುರಿತು ಗುಲಾಬಿ ಹೂವುಗಳನ್ನು ಸಾರ್ವಜನಿಕರಿಗೆ ನೀಡಿ ಜಾಗೃತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿಎಚ್ಒ ಡಾ.ಎಚ್.ಎಲ್.ಜನಾರ್ಧನ್ ಅವರು ಈ ವರ್ಷದ ಘೋಷಣೆಯಾದ “ಮಧುಮೇಹ ಆರೈಕೆಗೆ ಪ್ರವೇಶ, ಈಗ ಇಲ್ಲದಿದ್ದರೆ ಮುಂದೆ ಯಾವಾಗ” ಎಂಬುದನ್ನು ನಾವು ಹೆಚ್ಚು ಗಮನ ಹರಿಸಬೇಕಿದೆ, ಇಂದು ಪ್ರತಿ 10 ಜನರಲ್ಲಿ ಒಬ್ಬರು ಮಧುಮೇಹಿಗಳಿದ್ದಾರೆ, ನಗರ ಪ್ರದೇಶದಲ್ಲಿ ಶೇ.12ರಷ್ಟಿದ್ದರೆ ಗ್ರಾಮೀಣ ಮಟ್ಟದಲ್ಲಿ ಶೇ. 7ರಷ್ಟಿದ್ದಾರೆ. ಮಧುಮೇಹದಲ್ಲಿ ಭಾರತ ಜಾಗತಿಕವಾಗಿ ಎರಡನೇಯ ಸ್ಥಾನದಲ್ಲಿರಿವುದು ದುರಂತವೇ ಸರಿ; ಇಂದೇ ನಾವೂ ಎಚ್ಚೆತ್ತುಕೊಂಡು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು. ಆಹಾರದಲ್ಲಿ ಸಕ್ಕರೆ, ಅನ್ನ, ಮೈದಾ, ಹಾಲಿನ ಉತ್ಪನ್ನಗಳ, ಕರೀದ ಪದಾರ್ಥಗಳ ಹೆಚ್ಚು ಬಳಕೆಗೆ ಕಡಿವಾಣ ಹಾಕಿ, ನಾರಿನಂಶದ ಆಹಾರ ಪದಾರ್ಥಗಳ ಹೆಚ್ಚು ಸೇವನೆ ಮಾಡುವ ಮೂಲಕ, ಹಸಿ ತರಕಾರಿ, ಋತುಮಾನಕ್ಕನುಗುಣವಾಗಿ ದೊರಕುವ ಹಣ್ಣುಗಳ ಸೇವನೆ ದಿನನೀತ್ಯ ಕನಿಷ್ಠ 30 ನಿಮಿಷಗಳ ನಡಿಗೆ,ವ್ಯಾಯಾಮಕ್ಕೆ ಆದ್ಯತೆ ನೀಡಲು ಕೊರಿದರು. ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಡಾ ರವಿಶಂಕರ ಸಜ್ಜಲ ಮಾತನಾಡಿ 1922ರಲ್ಲಿ ಮಧುಮೇಹ ನಿಯಂತ್ರಣಕ್ಕಾಗಿ ಇನ್ಸುಲೀನ್ ಕಂಡುಹಿಡಿದ ಡಾ ಫ್ರೆಡರಿಕ್ ಬ್ಯಾಟಿಂಗ್ ಜನ್ಮದಿನದ ಅಂಗವಾಗಿ 1991 ರಿಂದ ಪ್ರತಿವರ್ಷ ದಿನಾಚರಣೆ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಮಧುಮೇಹ ಕಾಯಿಲೆಯನ್ನು ಟೈಪ್-1ಹಾಗೂ ಟೈಪ್-2 ಎಂದು ವಿಂಗಡಿಸಲಾಗುವುದು. ಟೈಪ್-1ರಲ್ಲಿ ಇನ್ಸುಲಿನ್ ಕೊರತೆಯಾದರೆ ಟೈಪ್-2 ಜೀವನ ಶೈಲಿಯಿಂದ ಕಂಡುಬರುತ್ತದೆ. ಅಲ್ಲದೆ ಮಧುಮೇಹದ ತೀವ್ರತೆ ಹೆಚ್ಚಾದರೆ ಪಾರ್ಶ್ವವಾಯು, ಕಣ್ಣಿನ ದೋಷ, ಹೃದಯಾಘಾತ, ಕಿಡ್ನಿವೈಪಲ್ಯ, ರಕ್ತಸಂಚಾರ ವ್ಯತ್ಯಯ ಆಗಬಹುದು. ಈ ಹಿನ್ನಲೆ 30 ವರ್ಷ ವಯಸ್ಸು ದಾಟಿದ ನಂತರ ನಿಯಮಿತವಾಗಿ ಸಕ್ಕರೆ ಪ್ರಮಾಣ, ರಕ್ತದೊತ್ತಡ ಪರೀಕ್ಷೆ ಮಾಡಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ.ಬಿ. ಚೌಹಾಣ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಮರಿಯಂಬಿ. ವಿ.ಕೆ, ತಾಲೂಕಾ ಆರೋಗ್ಯಾಧಿಕಾರಿ ಡಾ ಮೋಹನಕುಮಾರಿ, ಐಎಮ್‌ಎ ಕಾರ್ಯದರ್ಶಿ ಡಾ ಶ್ರಿಕಾಂತ, ವೈದ್ಯರಾದ ಡಾ ವಿರೇಂದ್ರಕುಮಾರ, ಡಾ.ನಿಜಾಮುದ್ದಿನ್, ಡಾ. ಸೋಮನಾಥ, ಡಾ.ಸುಂದರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಾ.ಜಬೀನ್ ತಾಜ್, ಎಮ್.ಡಿ.ಮಾಚನೂರು ಸೇರಿದಂತೆ ಸಿಬ್ಬಂದಿ ವರ್ಗ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.
ವರದಿ – ಚಲುವದಿ ಅಣ್ಣಪ್ಪ