ಜುಮಲಾಪೂರ ಕಾಲು ಬೇನೆ ರೋಗಕ್ಕೆ ಚಿಕಿತ್ಸೆಗಾಗಿ ಮೂಕ ಪ್ರಾಣಿಗಳ ರೋದನೆ.ಸೂಕ್ತ ಔಷಧಿ ಇಲ್ಲದ ಪಶು ದವಾಖಾನೆ. ಯಾರು ಕೆಳಬೇಕು ಜಾನುವಾರುಗಳ ನರಕಯಾತನೇ.
ಕುಷ್ಟಗಿ ತಾಲ್ಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ ಜಾನುವಾರುಗಳಿಗೆ ಕಾಲು ಬೇನೆ ರೋಗಗಳು ಬಂದಿರುವದು ಬೆಳಕಿಗೆ ಬಂದಿದ್ದು ಜುಮಲಾಪೂರ ಗ್ರಾಮದ ವ್ಯಾಪ್ತಿಯ ಬರುವ ಗ್ರಾಮಗಳ ದನು ಕರುಗಳಿಗೆ ಅತಿ ಹೆಚ್ಚು ಕಾಲು ಬೇನೆ ರೋಗ ಬಂದಿರುವುದು. ಸಾರ್ವಜನಿಕರ ತಲೆ ಮೇಲೆ ಮೋಡ ಕಳಚಿ ಬಿದ್ದಂತೆ ಆಗಿದೆ. ಗ್ರಾಮದ ರೈತರು ಕೃಷಿಯನ್ನೆ ನಂಬಿ ಎತ್ತಿನ ಮೇಲೆ ಅವಲಂಬಿತರಾಗಿ. ಜಾನುವಾರುಗಳನ್ನು ರೈತರು ಅನ್ನ ನೀಡುವ ದೇವರೆಂದು ಪೂಜಿಸಿ ಲಾಲನೆ ಪಾಲನೆ ಮಾಡುತ್ತ ಸಾಗುತ್ತಿರುವ ಸಂದರ್ಭದಲ್ಲಿ ಎತ್ತುಗಳಿಗೆ ಕಾಲು ಬೇನೆ ರೋಗ ಬಂದಿರುವುದು ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಗ್ರಾಮಗಳಾದ್ಯಂತ ಕಾಲು ಬೇನೆ ರೋಗ ಬಂದಿರುವ ಮೂಕ ಪ್ರಾಣಿಗಳು ಜ್ವರದಿಂದ ಬಳಲಿ ಚಿಕಿತ್ಸೆ ಕೊಡಿಸಿ ಎಂದು ರೋದಿಸುತ್ತಿರುವದು ಕಂಡು ಬರುತ್ತದೆ. ಇಂತಹ ನಿಟ್ಟಿನಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಜುಮಲಾಪೂರ ಪಶು ಆಸ್ಪತ್ರೆ ಗೆ ತೆರಳಿ ಕಾಲು ಬೇನೆ ರೋಗ ಕ್ಕೆ ಔಷಧಿ ಕೆಳಿದರೆ ಔಷಧಿ ಬಂದಿಲ್ಲ ಎಂದು ಹೆಳುತ್ತಿರುವ ವೈದ್ಯಾಧಿಕಾರಿ ಹೆಳಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಸಮುದಾಯದ ಜೀವನಾಡಿ ಜಾನುವಾರುಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಯೋಜನೆಗಳನ್ನು ಕೈಗೊಂಡರು ಪ್ರಯೋಜನ ಇಲ್ಲದಂತಾಗಿದೆ. ಜಾನುವಾರುಗಳಿಗೆ ಆರು ತಿಂಗಳಿಗೆ ಒಂದು ಸಾರಿ ವ್ಯಾಕ್ಸಿನ್ ಆಕಬೇಕು ಆದರೆ ಸೂಕ್ತ ಚಿಕಿತ್ಸೆ ನೀಡಲು ಔಷಧಿ ಇಲ್ಲ “ನಿಗದಿತ ಸಮಯಕ್ಕೆ ಔಷಧಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಔಷಧಿ ಕೊರತೆ ಎದುರಾಗಿದೆ. ಏನೆ ಆಗಲಿ ಈ ಕ್ಷಣದಲ್ಲಿ ಜುಮಲಾಪೂರ ಪಶು ಆಸ್ಪತ್ರೆ ವೈದ್ಯಾಧಿಕಾರಿಗೆ ಕರೆ ಮಾಡಿ ಅಲ್ಲಿರುವ ಔಷಧಿ ಬಗ್ಗೆ ವಿವರಣೆ ಪಡೆದು ಜಾನುವಾರುಗಳಿಗೆ ಶಿಘ್ರವಾಗಿ ಸೂಕ್ತ ಔಷಧಿ ನಿಡುವ ಭರವಸೆ ನೀಡಿದರು.ಡಾ// ಅಖಿಲೇಶ ಸಹಾಯಕ ನಿರ್ದೇಶಕರು ಪಶು ತಾಲೂಕ ಆಸ್ಪತ್ರೆ ಕುಷ್ಟಗಿ. ಹಾಗಾಗಿ ಸಂಭಂದಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಬೇಗನೆ ಹೆಚ್ಚೆತ್ತು ತಾವು ಮೂಕ ಪ್ರಾಣಿಗಳು ಆಗದೆ. ಕೂಡಲೇ ಮೂಕ ಪ್ರಾಣಿಗಳ ರೋದನೆಗೆ ಸ್ಪಂದಿಸಬೇಕೆಂದು ಜುಮಲಾಪೂರ ಸಾಸ್ವಿಹಾಳ ರಾಂಪೂರ ಸುತ್ತ ಮುತ್ತ ಗ್ರಾಮದ ರೈತರು ಅಗ್ರಹಿಸಿದ್ದಾರೆ.
ವರದಿ – ಉಪ-ಸಂಪಾದಕೀಯ