ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸೇರಿದ ಹೊನವಳ್ಳಿ ಎಂಬ ಗ್ರಾಮದಲ್ಲಿ ಹೊಳೆ ಹರಿಯುತ್ತಿದ್ದು ಈ ಹೊಳೆ ಕೂಗೆಕೋಡಿ ಮಾರ್ಗವಾಗಿ ಅಜ್ಜಳ್ಳಿ ಮತ್ತು ಶನಿವಾರಸಂತೆ ಮೂಲಕ ಗೊರೂರು ಡ್ಯಾಮ್ ಗೆ ನೀರು ಸೇರುತ್ತದೆ ಇದೇ ಹೊಳೆಯ ನೀರಿಗೆ ಕಾಫಿ ಪಲ್ಪರ್ ನೀರನ್ನು ಹೊಳೆಯ ನೀರಿಗೆ ಬಿಡುತ್ತಿರುವ ಬಗ್ಗೆ ಕರವೇ ಕಾರ್ಯಕರ್ತರು ಪತ್ರಿಕೆ ಮುಖಾಂತರ ಮತ್ತು ವಾಟ್ಸಪ್ ಮುಖಾಂತರ ವಿಡಿಯೋ ಮತ್ತು ಫೋಟೋ ಸಹಿತ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೆವು.. ಈ ಮನವಿಯನ್ನು ನೋಡಿದ ಪ್ರಭಾರ ಪರಿಸರ ಅಧಿಕಾರಿಗಳಾದ ಡಾಕ್ಟರ್ ಎಂ .ಆರ್ ಸುಧಾ ರವರು ಹೊನ್ನವಳ್ಳಿಯಿಂದ ಎಲ್ಲಾ ಕಾಪಿ ಪಲ್ಪರ್ ಗಳನ್ನು ಪರಿಶೀಲನೆ ನಡೆಸಿ ನೋಡಿದಾಗ ಕೂಗೆಕೋಡಿ ಗ್ರಾಮದ ಕೆ. ಬಿ ಚಂದ್ರಶೇಖರ್ ಇವರ ಕಾಫಿ ಪಲ್ಪರ್ ಹೊನವಳ್ಳಿ ಗ್ರಾಮದ ಲ್ಲಿರುತ್ತದೆ ಈ ಕಾಫಿ ಪಲ್ಪರ್ ನಿಂದ ನೀರನ್ನು ನದಿಗೆ ಬಿಟ್ಟಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ತಿಳಿದು ಬಂದಿರುತ್ತದೆ .ಹಾಗಾಗಿ ಡಾಕ್ಟರ್ ಎಂ ಆರ್ ಸುಧಾ ಪ್ರಭಾರ ಪರಿಸರ ಅಧಿಕಾರಿ ಯವರು ಈ ಕಾಫಿ ಪಲ್ಪರ್ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ ಮತ್ತು ಈಗ ಹೊಳೆಗೆ ಹೋಗಲು ಹಾಕಿರುವ ಕಾಪಿ ಕಲ್ಮಶವನ್ನು ತೆಗೆದು ಹಾಕುವಂತೆ ಸ್ಥಳದಲ್ಲೇ ಆದೇಶಿಸಿದರು ಈ ಕಾಫಿ ಪಲ್ಪರ್ ಮೆಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ .ಕರವೇ ಕಾರ್ಯಕರ್ತರು ಈ ಕಾಫಿ ಪಲ್ಪರ್ ಮನೆಯನ್ನು ಸೀಜ್ ಮಾಡಬೇಕೆಂದು ಮನವಿ ಸಲ್ಲಿಸಿರುತ್ತಾರೆ .ಈ ಸಂದರ್ಭದಲ್ಲಿ ಪ್ರಭಾರ ಪರಿಸರ ಅಧಿಕಾರಿ ಡಾಕ್ಟರ್ ಎಂ ಆರ್ ಸುಧಾ ರವರು ಮತ್ತು ಶಿವರಾಮೇಗೌಡರ ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿ ಸೋಜ ರವರು ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಕುಮಾರ್ ರವರು ಹಾಗೂ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ವಿಶ್ವರೂಪಾಚಾರ್ಯ ರವರು ಮತ್ತು ದೊಡ್ಡಮಳ್ತೆ ವಿಕಲಚೇತನರ ಸಾಮಾಜಿಕ ಕಾರ್ಯಕರ್ತ ಮಧುಸೂದನ್ ರವರೆಲ್ಲರೂ ಉಪಸ್ಥಿತರಿದ್ದರು.. ಕರವೇ ಫ್ರಾನ್ಸಿಸ್ ಡಿಸೋಜಾ ರವರ ಫೋನ್ ನಂಬರ್ 9449255831 ಮತ್ತು 9686095831
ವರದಿ – ಸಂಪಾದಕೀಯ