ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ 2021-22ನೇ ಸಾಲಿನ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕುಷ್ಟಗಿ ತಾಲೂಕಾ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಾಡಿರುವ ಎಲ್ಲಾ ಕಾಮಗಾರಿಗಳು ಅತ್ಯಂತ ಕಳಪೆಯಾಗಿದ್ದು, ತಂತ್ರದ ಮೂಲಕ ಕಾಮಗಾರಿ ನಿರ್ವಹಿಸಿ ಕೂಲಿಕಾರ್ಮಿಕರಿಗೆ ಬರುವ ಹಣದಲ್ಲಿ 500 ರಿಂದ 1000 ರೂಪಾಯಿಗಳ ಹಣವನ್ನು ಕೊಟ್ಟು ಉಳಿದ ಹಣದಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿಕೊಂಡು ಹಂಚಿಕೊಂಡಿದ್ದಾರೆ . 2021-22ನೇ ಸಾಲಿನಲ್ಲಿ ಸುಮಾರು 250 ಕ್ಕಿಂತ ಹೆಚ್ಚಿಗೆ ಅಧಿಕಾರಿಗಳು ಬೇಕಾಬಿಟ್ಟುಯಾಗಿ ಕಾಮಗಾರಿಯನ್ನು ಮಾಡಿಸಿದ್ದಾರೆ . ಯಾವುದೇ ಕೃಷಿಹೊಂಡ ನೀರು ಹರಿಯುವ ಜಾಗದಲ್ಲಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅಲ್ಲದೇ ಮಾನವನಿಂದ ನಿರ್ಮಿಸಬೇಕಾದ ಕೃಷಿ ಹೊಂಡಗಳನ್ನು ಜೆ.ಸಿ.ಬಿ. ಯಂತ್ರಗಳ ಮೂಲಕ ನಿರ್ವಹಿಸಿರುವುದು ವಿಡಿಯೋ ಮುಖಾಂತರ ಸಾಭೀತಾಗಿದೆ. ಮತ್ತು ನಿಮ್ಮ ಇಲಾಖೆಯಿಂದ ನಡೆದಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿರುವ ಕೃಷಿ ಹೊಂಡಗಳು ಯಾವುದೇ ರೀತಿಯಿಂದ ಅಂದಾಜು ಪತ್ರಿಕೆಯ ಪ್ರಕಾರ ನಡೆದಿರುವುದಿಲ್ಲ. ಈ ಎಲ್ಲಾ ಭ್ರಷ್ಟಚಾರ ನೋಡಿದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸಹಿತ ಶ್ಯಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಈ ಕೂಡಲೇ ತಾವು ಸದರಿ ತಮ್ಮ ಇಲಾಖೆಯಿಂದ ನಡೆದಿರುವ ಕೃಷಿ ಹೊಂಡಗಳು ಹಾಗೂ ಇತರೆ ಕಾಮಗಾರಿಗಳನ್ನು ತನಿಖೆ ಆದೇಶಿಸಿ, ತಪ್ಪಿಸ್ತ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಈ ಕ.ನ.ಸೇ ವತಿಯಿಂದ ಮನವಿ ಪತ್ರ ಸಲ್ಲಿಸಿದರು. ಶ್ಯಾಮೂರ್ತಿ ಅಂಚಿ .ರಮೇಶ್ ಕಟ್ಟಿಮನಿ .ಬೀಮೆಶ ಹಾದಿಮನಿ. ಕಳಕೇಶ ನಾಯಕ ವಿಶ್ವನಾಥ್ .ಮತ್ತಿತರು ಪಾಲುಗೊಂಡಿದ್ದರು.
ವರದಿ – ಉಪ- ಸಂಪಾದಕೀಯ