ಊರಿನ ಮುಖಂಡರುಗಳು ಸದಸ್ಯರುಗಳು ಸೇರಿ ಮುಖ್ಯೋಪಾಧ್ಯಾಯರಿಗೆ ತರಾಟೆ ತೆಗೆದುಕೊಂಡ ಘಟನೆ…..
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಹೋಬಳಿಯ ವೆಂಕಟಾಪುರ112 ಗ್ರಾಮದ ಮುಖಂಡರುಗಳು ಇಂದು ನಮ್ಮ ಗ್ರಾಮಕ್ಕೆ ಸಂಬಂಧಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವೆಂಕಟಾಪುರ 112 ಗ್ರಾಮ ಪಂಚಾಯತಿ ಡಣಾಪುರ ಇಲ್ಲಿನ ಶಾಲಾ ಮಕ್ಕಳು ಊರಿನ ಮುಖಂಡರುಗಳು ಸದಸ್ಯರುಗಳು ಸೇರಿ ಮುಖ್ಯೋಪಾಧ್ಯಾಯರಿಗೆ ತರಾಟೆ ತೆಗೆದುಕೊಂಡರು ಕಾರಣ, ವೆಂಕಟಾಪುರ ಗ್ರಾಮದ ಸಾರ್ವಜನಿಕರು ನಮ್ಮ ಗ್ರಾಮದ ಇಲ್ಲಿ ಶಾಲೆ ಇದ್ದು ನಮ್ಮ ಗ್ರಾಮದ ಶಾಲೆಯ ಹೆಸರಿಗೆ ಹಂಪನಕಟ್ಟೆ ಎಂದು ನಾಮಕರಣ ಇರುತ್ತದೆ ಆದ್ದರಿಂದ ನಮ್ಮ ಕಂದಾಯ ಗ್ರಾಮದ ಸರ್ಕಾರಿ ಶಾಲೆ ವೆಂಕಟಾಪುರ 112 ಎಂದು ಎಂದು ಶಾಲೆಯ ಹೆಸರು ಇರಬೇಕು ಎಂದು ಬಹುದಿನಗಳ ಬೇಡಿಕೆ ಗ್ರಾಮಸ್ಥರ ದಾಗಿದೆ ಸುಮಾರು 6ರಿಂದ 7 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ನಮಗೆ ನಮ್ಮ ಗ್ರಾಮದ ಶಾಲೆಯ ಹೆಸರು ವೆಂಕಟಾಪುರ 112 ಎಂದು ನಮೂದಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ ಆದರೆ ಸುಮಾರು ವರ್ಷದಿಂದ ಮನವಿ ಪತ್ರಗಳು ಮೂಲಕ ಕೊಟ್ಟರು ಇವತ್ತಿಗೂ ಯಾವುದೇ ಅಧಿಕಾರಿಗಳು ನಮ್ಮ ಗ್ರಾಮದ ಜನರಿಗೆ ಸ್ಪಂದಿಸುತ್ತಿಲ್ಲ ಇದನ್ನು ಮಾನ್ಯ ಉಪನಿರ್ದೇಶಕರು ನಮ್ಮ ಊರಿನ ಶಾಲೆಗೆ ಗ್ರಾಮದ ಹೆಸರು ವೆಂಕಟಾಪುರ 112 ಮಾಡಬೇಕೆಂದು ಕೇಳಿಕೊಂಡರು ನಮ್ಮ ಗ್ರಾಮದ ಜನರಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಗ್ರಾಮಸ್ಥರುಎಂದು ಆರೋಪಿಸುತ್ತಿದ್ದಾರೆ ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಗ್ರಾಮಸ್ಥರಿಗೆ ಸರ್ಕಾರದ ಆದೇಶದ ಪ್ರಕಾರ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸರಿಸುಮಾರು ಐದು ಕಿಲೋಮೀಟರ್ ಅಂತರ ಇರಬೇಕು ಎಂದು ಸ್ಪಷ್ಟಪಡಿಸುತ್ತಾರೆ ಕ್ಷೇತ್ರಶಿಕ್ಷಣಾಧಿಕಾರಿಗಳು ನಾವು ಕರೆ ಮೂಲಕ ಕೇಳಿದರೆ ಅವರು ನಾವು ನಮ್ಮ ಇಲಾಖೆಯಿಂದ ಪ್ರಸ್ತಾವನೆಯನ್ನು ಬಳ್ಳಾರಿ ವಿಭಾಗಕ್ಕೆ ಸಲ್ಲಿಸಿರುತ್ತೇನೆ ಸರ್ಕಾರದ ಅನ್ವಯ ನಾವು ಶಾಲಾ ಹೆಸರು ಬದಲಾವಣೆ ಮಾಡಲು ಬರುವುದಿಲ್ಲ ನಾವು ಸಲ್ಲಿಸಿದ ಪ್ರಸ್ತಾವನೆಯ ಮುಂದಿನ ಆದೇಶದವರೆಗೆ ಕಾಯಬೇಕಾಗುತ್ತದೆ ಊರಿನ ಸಾರ್ವಜನಿಕರು ನಾವು ಉಪನಿರ್ದೇಶಕರ ಕಛೇರಿ ಬಳ್ಳಾರಿ ಇವರಿಗೆ ಕಳಿಸಿ ದಂತಹ ಜೆರಾಕ್ಸ್ ಪ್ರತಿ ಕೊಟ್ಟಿದ್ದೇವೆ ಇದನ್ನು ನೋಡಿ ಸಾರ್ವಜನಿಕರು ಸಹಕರಿಸಬೇಕು ಎಂದು ನಮಗೆ ತಿಳಿಸಿದರೆ ಮುಖಂಡರು ನಮಗೆ ನಮ್ಮ ಗ್ರಾಮದ ಹೆಸರು ವೆಂಕಟಾಪುರ 112 ಎಂದು ನಾಮಕರಣ ಮಾಡದಿದ್ದಲ್ಲಿ ಮುಂದಿನ ದಿನದಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಉಗ್ಗಿ ಬಸವರಾಜ್ ಕೆಂಚನಳ್ಳಿ ಅಂಜಿನಪ್ಪ ಹೊಸಳ್ಳಿ ಮಲ್ಲೇಶ್ ಸದಸ್ಯರು ಗೋಸಿ ಗಾಳೆಪ್ಪ ಸದಸ್ಯರು ಹೆಚ್ ರಾಮಣ್ಣ ಸದಸ್ಯರು ಊರಿನ ಹಿರಿಯರು ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಎಲ್ಲರೂ ಈ ಸಂದರ್ಭದಲ್ಲಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ -9008937428