ಶೀರ್ಷಿಕೆ – ಶರಣ ಸಂಸ್ಕೃತಿ…..
ಶರಣ ಸಂಸ್ಕೃತಿ ಮೈಮರೆತಿಹುದು
ಶರಣ ಸಂಸ್ಕೃತಿ ಮೈಮರೆತಿಹುದು ಮಲಗಿದೆ ಪ್ರಜ್ಞಾವಂತರ ಸಮಾಜ,
ಎಚ್ಚರವಾಗಿ ಮೆರೆಯುವುದೆಂದು? ಶರಣ ಧರ್ಮ ಮಹಾನ್
ನನ್ನೀ ಕಲ್ಯಾಣ ನಾಡು ಮಹಾನ್
ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ನಾಗರಿಕತೆಯು, ಪವಿತ್ರ ವಚನ ಕಾವ್ಯದ ನೈಜತೆಯು
ಸಕಲ ಶರಣರ ಸಿದ್ಧಾಂತಗಳು, ನಡೆ ನುಡಿಯ ಮೌಲ್ಯಾಧಾರಿತ ಆಚಾರಗಳು
ವಾಸ್ತವದ ಅರಿವಿನಲ್ಲಿ, ಹಾರಾಡಿದೆ ಬಾನಂಗಳದಲ್ಲಿ.
ಬಸವ ಶಕ್ತಿಯು ಏಳುವುದೆಂದು! ಸರ್ವರದುನ್ನತಿಗೆ ಶ್ರಮಿಸುವುದೆಂದು!
ಸತ್ಯದ ದೀಪ್ತಿ ಬೆಳಗುವುದೆಂದು! ತ್ಯಾಗ ಸಾಹಸ ಶೌರ್ಯ ಮೊಳಗುವುದೆಂದು!
ಎಂದಿಗೆ ಶರಣರ ಪುನರುತ್ಥಾನ! ಕರುನಾಡಿನ ಬಸವ ಕಲ್ಯಾಣ!
ಶರಣರ ಚಿಂತನೆಗಳು ಜಗದಲ್ಲಿ ಬೆಳಗಲು ಮೈ ಕೊಡವೇಳಲಿ, ಶಿವಶರಣರ ಸೇವೆಗೆ ನಾವೆಲ್ಲರೂ ನಿಲ್ಲಲಿ
ಬಸವಚೇತನ ತುಂಬಿ ಮೈ ನವಿರೇಳಲಿ, ಶರಣರು ತೋರಿದ ದಾರಿಯ ತುಳಿಯಲಿ
ಅಂದಿಗೆ ಹೊಸ ಬೆಳಕು, ನೂತನ ನೆಮ್ಮದಿಯ ಬದುಕು.
ದ್ವೇಷಾ ಸೂಯೆ ಮತ್ಸರಗಳಿಗೆ ವಿರಾಮ ನೀಡಲಿ
ಶಾಂತಿ ಸ್ನೇಹ ಸೌಹಾರ್ದತೆ ಮೂಡಲಿ ಸರ್ವರಲ್ಲಿಯೂ ಬಸವ ಪರಂಪರೆ ಕಾಣಲಿ,
ಇದೆ ಶರಣ ಸಂಸ್ಕೃತಿ, ಇದೆ ಬಸವ ಸಂಸ್ಕೃತಿ, ಇದೆ ಮಾನವೀಯ ಮೌಲ್ಯಗಳನ್ನು ಸಾರುವ ಸಮತೆಯ ಸಂಸ್ಕೃತಿ.
ರಚನೆ – ಸಂಗಮೇಶ ಎನ್ ಜವಾದಿ,