ಕುಷ್ಟಗಿ ತಾಲ್ಲೂಕಿನ ಸಂಗನಾಳ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಭಿವೃದ್ಧಿ ಅಧಿಕಾರಿಗಳಾಗಿದ್ದ ಶ್ರೀ ಮತಿ ಕವಿತಾ ಪಾಟೀಲ ರವರನ್ನು ತಾತ್ಕಾಲಿಕವಾಗಿ ಸಹಾಯಕ ನಿರ್ದೇಶಕರು (ಪಂ. ರಾಜ್) ಹುದ್ದೆಯ ಪ್ರಭಾರವನ್ನು ವಹಿಸಿ ಆದೇಶಿಸಿಲಾಗಿದೆ ಆದ್ದರಿಂದ ಸಧ್ಯ ಸದರಿಯವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂಗನಾಳ ಗ್ರಾಮ ಪಂಚಾಯಿತಿಗೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಗುರಪ್ಪ ನಾಯಕ ಗ್ರೇಡ್ 2 ಕಾರ್ಯದರ್ಶಿ ಗ್ರಾಮ ಪಂಚಾಯಿತಿ ಕಿಲಾರಹಟ್ಟಿ ಇವರನ್ನು ಪ್ರಭಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಸಂಗನಾಳ ಗ್ರಾಮ ಪಂಚಾಯಿತಿಗೆ ನಿಯೋಜಿಸಲಾಗಿದೆ ಎಂದು ಕುಷ್ಟಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಶ್ರೀ ಮಾನ್ಯ ಜಯರಾಂ ಚವ್ಹಾಣ ಆದೇಶಿಸಿದ್ದಾರೆ.