“ಬೆನ್ನುಹುರಿ ಅಪಘಾತ ಗೊಳಗಾದ ವ್ಯಕ್ತಿಗಳಿಗೆ ಮೆಡಿಕಲ್ ಕಿಟ್ ವಿತರಣೆ “
ದಿ ಅಸೋಸಿಯೇಷನ್ ಆಪ್ ಪೀಪಲ್ ವಿತ್ ಡಿಸೆಬಿಲಿಟಿ(ಎ ಪಿ ಡಿ) ವಿಜಯಪುರ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಸಿಂದಗಿ, ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಜಯಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ತಪಾಸಣೆ ಮತ್ತು ಮೆಡಿಕಲ್ ಕಿಟ್ ವಿಚಾರಣಾ ಕಾರ್ಯಕ್ರಮ ದಿನಾಂಕ 18/11/21 ರಂದು ಸಿಂದಗಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಉದ್ಘಾಟವನ್ನು ಶ್ರೀ ಡಾ.ಎ.ಎ.ಮಾಗಿ ತಾಲೂಕಾ ಮುಖ್ಯ ವೈದ್ಯಾಧಿಕಾರಿಗಳು ಸಿಂದಗಿ ನೆರವೇರಿಸಿದರು. ಶ್ರೀ ಈರಣ್ಣ ಬಿರಾದಾರ ಮ್ಯಾನೇಜರ್ ಎಪಿಡಿ ಸಂಸ್ಥೆ ವಿಜಯಪುರ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಸ್ತಾವಿಕ ಭಾಷಣ ಮಾಡಿದ ಎಪಿಡಿ ಸಂಸ್ಥೆಯ ಅಂಗವಿಕಲ ವ್ಯಕ್ತಿಗಳನ್ನು ಸಾಮಾಜಿಕ ಮುಖ್ಯವಾಹಿನಿಗೆ ತರಲು ಏನೆಲ್ಲಾ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಹಾಗೂ ಬೆನ್ನುಹುರಿ ಅಪಘಾತ ವ್ಯಕ್ತಿಗಳಿಗೆ ಪೋಷಕರು ಬೆನ್ನೆಲುಬಾಗಿ ನಿಂತುಕೊಂಡರೆ ಎಪಿಡಿ ಸಂಸ್ಥೆ ಎಲ್ಲಾ ರೀತಿಯಿಂದ ಬಲಪಡಿಸಲು ಎಪಿಡಿ ಸಂಸ್ಥೆಯ ಸಿದ್ಧ ಇದೆ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳು ಆದ ಶ್ರೀ ಶಂಕರ ಮಳ್ಳಿ.ಸೀನಿಯರ್ ಫಾರ್ಮಸಿಟರ್ ಆಫೀಸರ್ ಸಿಂದಗಿ ಇವರು ಮಾತನಾಡಿ ಬೆನ್ನುಹುರಿ ಅಪಘಾತ ವ್ಯಕ್ತಿಗಳು ಪ್ರತಿದಿನ ವ್ಯಾಯಾಮ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ಬೇಕಾದ ಮೆಡಿಕಲ್ ಕಿಟ್ ಗಳನ್ನು 3 ತಿಂಗಳಿಗೊಮ್ಮೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕಿಟ್ಟು ಗಳನ್ನು ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು. ಇನ್ನಿಬ್ಬರು ಅತಿಥಿಗಳಾದ ಶ್ರೀ ಎಂ ಆರ್ ಬಡಿಗೇರ್ ಮೆಡಿಕಲ್ ಆಫೀಸರ್ ಸಿಂದಗಿ, ಹಾಗೂ ಶ್ರೀ ರಾಜಶೇಖರ ನರಕೊಂಡಿ ಪ್ರಯೋಗ ತಂತ್ರಜ್ಞ ಅಧಿಕಾರಿಗಳು ಸಿಂದಗಿ ಈ ಕಾರ್ಯಕ್ರಮ ನೋಡಿ ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ ದುಃಖವಾಗುತ್ತದೆ ಎಂದು ವ್ಯಕ್ತಪಡಿಸಿದರು, ಸಂತೋಷವೆಂದರೆ ನಾಲ್ಕು ಗೋಡೆಗಳ ಮಧ್ಯ ಸಮಸ್ಯೆ ಗೊಳಗಾದ ವ್ಯಕ್ತಿ ಈ ಶಿಬಿರದಲ್ಲಿ ಭಾಗವಹಿಸಿ ಎಲ್ಲರೊಡನೆ ಬೆರೆತಿದೆಕ್ಕೆ. ದುಃಖ ಎಂದರೆ ಗಾಲಿ ಕುರ್ಚಿಯಿಂದ ಬಂದು ನನಗೆ ಹೂಗುಚ್ಚ ಕೊಟ್ಟಿದ್ದಕ್ಕೆ ದುಃಖವಾಗುತ್ತೆ ಎಂದು ಹೇಳಿ ಮುಂದಿನ ಇಂತಹ ಶಿಬಿರಕ್ಕೆ ನಾನು ಎಲ್ಲಾ ರೀತಿ ಬೆಂಬಲ ನೀಡುತ್ತೇನೆಂದು ಹೇಳಿದರು. ಈ ಶಿಬಿರದಲ್ಲಿ 15ಜನ ಬೆನ್ನಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ಮೆಡಿಕಲ್ ಕಿಟ್ ವಿತರಿಸಲಾಯಿತು. ವಂದನಾರ್ಪಣೆ ಶ್ರೀ ಶಿವಶಂಕರ್ ಬುರ್ಲಿ ಎಪಿಡಿ ಸಂಸ್ಥೆ ವಿಜಯಪುರ ಅವರು ಮಾಡಿದರು. ಶ್ರೀ N.ಪಾಲಸ್ವಾಮಿ ಎಪಿಡಿ ಸಂಸ್ಥೆ ವಿಜಯಪುರ ಇವರು ನಿರೂಪಣೆ ಮಾಡಿದರು. ಪ್ರಾರ್ಥನೆ ಮತ್ತು ಸ್ವಾಗತ ಶ್ರೀಮತಿ ಈರಮ್ಮ ಹಾದಿಮನಿ ಎಪಿಡಿ ಸಂಸ್ಥೆ ವಿಜಯಪುರ ಅವರು ನಿರ್ವಹಸಿದರು.
ವರದಿ : ಮಲ್ಲಿಕಾರ್ಜುನ ಬುರ್ಲಿ