ತಾವರಗೇರಾ ಪಟ್ಟಣದಲ್ಲಿಂದು “ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ”
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ಎಪ್.ಐ.ಟಿ.ಯು ಹಾಗೂ ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಹಾಗೂ ಕ.ರಾ.ರೈ.ಸಂಘ ಮತ್ತು ಹ.ಸೇ ಯ ರೈತರು ಸೇರಿಕೊಂಡು. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದದ್ದನ್ನು ಸ್ವಾಗತಿಸಿ ತಾವರಗೇರಾ ಪಟ್ಟಣದ ಬಸವೇಶ್ವರ (ಸಿಂಧನೂರು) ಸರ್ಕಲ್ ನಲ್ಲಿಂದು ಎಪ್.ಐ.ಟಿ.ಯು ಹಾಗೂ ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಹಾಗೂ ಕ.ರಾ.ರೈ.ಸಂಘ ಮತ್ತು ಹ.ಸೇ ಯ ಮುಖಂಡರ ನೇತೃತ್ವದಲ್ಲಿ ರೈತ ಹೋರಾಟಗಾರರು ಜಯಶಾಲಿಗಳಿಸಿದ ಕಾರಣ ಸಂಭ್ರಮದಿಂದ ಪಟ್ಟಣದ ನಾಗರಿಕರಿಗೆ ಸಿಹಿ (ಜಿಲೇಬಿ) ಹಂಚ್ಚುವ ಮೂಲಕ ವಿಜಯೋತ್ಸವ ಆಚರಿಸಿದರು. ಎಪ್.ಐ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಜನಾಯಕರವರು ಮಾತನಾಡಿದ ರೈತ ಹೋರಾಟಗಾರಿಗೆ ಶುಭ ಕೋರಿ ಸುಪ್ರೀಂ ಕೋರ್ಟ್ ಇನ್ನೂ ಮುಂದೆ ಸದರಿ ಕಾಯ್ದೆಗಳನ್ನು ಯಾವುದೇ ಸರ್ಕಾರ ಬಂದರೂ ಜಾರಿ ಗೊಳಿಸಬಾರದು ಮತ್ತು ಸರ್ಕಾರ ರೈತರ ಪರವಾಗಿ ಕೆಲಸ ಮಾಡಬೇಕು, ರೈತರ ವಿರುದ್ಧ ನಡೆದರೆ ಮನೆಗೆ ಕಳಿಸಿಕೊಡುವ ಕೆಲಸ ರೈತ ಸಂಘ ಹಾಗೂ ಎಲ್ಲಾ ರೈತರು ಸೇರಿಕೊಂಡು ಮಾಡ್ತೀವಿ ಎಂದು ತಿಳಿಸಿದ್ದಾರೆ. ಇದರ ದಿನ ನಿತ್ಯ ಸುರಿಯುವ ಮಳೆಯಿಂದ ಮನೆಗಳು ಹಾಗು ಹೋಲ ಗದ್ಯೆಗಳಲ್ಲಿ ನೀರು ಹೊಕ್ಕು ಲಾಸ್ ಆದ ಫಲನುಭವಿಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ನಾಸೀರಾ ಬೇಗಂ ಹಣಗಿ, ಶರಣಪ್ಪ ಕಲಾಲ್, ರವಿ ಆರೇರ್, ಖಾಜಾಖಾನ್, ಸಂಗಪ್ಪ ಸುಣಗಾರ, ಯಮನಗೌಡ ಕಟ್ಟಿಮನಿ, ವೆಂಕಟೇಶ ಹುಲಸನಟ್ಟಿ, ಶ್ಯಾಮ್ ನಾಯಕ್,ಅಂಬಾಜಿ ಕಲಾಲ್ ಇನ್ನಿತರರು ಉಪಸ್ಥಿತರಿದ್ದರು. ವರದಿ – ಉಪ-ಸಂಪಾದಕೀಯ
ವರದಿ – ಉಪ-ಸಂಪಾದಕೀಯ