ಕೇಂದ್ರ ಸರ್ಕಾರವು ರೈತರ ಹೋರಾಟಕ್ಕೆ ಮಣಿದು ಕರಾಳ ಕೃಷಿ ನೀತಿಗಳನ್ನು ವಾಪಾಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಲಿಂಗಸ್ಗೂರು ತಾಲೂಕು ಸಮಿತಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಇಂದು ಲಿಂಗಸ್ಗೂರಿನ ಬಸ್ ಸ್ಟ್ಯಾಂಡ್ ಸರ್ಕಲ್ ನಲ್ಲಿ ಸಂಯುಕ್ತ ಹೋರಾಟ – ಕರ್ನಾಟಕ ಲಿಂಗಸ್ಗೂರು ತಾಲೂಕು ಸಮಿತಿ ನೇತೃತ್ವದಲ್ಲಿ ರೈತರ ಹೋರಾಟಕ್ಕೆ ಮಣಿದು ಕರಾಳ ಕೃಷಿ ನೀತಿಗಳನ್ನು ವಾಪಾಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭಮಾಚರಣೆ ಮಾಡಲಾಯಿತು. ವಿಜಯೋತ್ಸವವನ್ನುದ್ದೇಶಿಸಿ ರಮೇಶ ವೀರಾಪೂರು, ಬಸಲಿಂಗಪ್ಪ, ಮಹ್ಮದ್ ಹನೀಫ್, ಶರಣಪ್ಪ ಉದ್ಭಾಳ, ಶಿವಪುತ್ರಪ್ಪಗೌಡ, ಅನಿಲ್ ಕುಮಾರ್, ಮಾತನಾಡಿದರು. ಈ ಸಂದರ್ಭಗಳಲ್ಲಿ ಸದ್ಧಾಂ ಹುಸೇನ್, ಬಾಬಾಜಾನಿ, ಶರಣಪ್ಪ, ತಿರುಪತಿ, ನಿಂಗಪ್ಪ ಎಂ, ಶಿವರಾಜ್,ಮಲ್ಲೇಶ್ ಕೋಠಾ, ಶೀಲವಂತ, ಜಾಫರ್ ಹುಸೇನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ – ಸೋಮನಾಥ ಹೆಚ್ ಎಮ್