ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಕಾರ್ಯ ಸರ್ವರಿಗೂ ಅನುಕರಣೀಯ.
ಇಂದು ಯಕ್ಸಂಬಾ ಪಟ್ಟಣದಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಹೋಬಳಿ ಸಮಾವೇಶದ ಪಥ ಸಂಚಲನವನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ವೀಕ್ಷಿಸಿದರು. ಈ ವೇಳೆ ಮಹಿಳೆಯರು ಆರತಿ ತಟ್ಟೆ ಹಿಡಿದು, ಬೀದಿಯುದ್ದಕ್ಕೂ ವರ್ಣ ರಂಜಿತ ರಂಗವಲ್ಲಿ ಬಿಡಿಸಿರುವುದು ಆಕರ್ಷಕವಾಗಿತ್ತು. ಇದರೊಂದಿಗೆ ಪುಟಾಣಿ ಮಕ್ಕಳು ದೇಶದ ಮಹಾನ್ ಚೇತನರ ಛದ್ಮವೇಶ ಧರಿಸಿ ದೇಶಭಕ್ತಿ ಮೆರೆದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು , ಗಣವೇಶಧಾರಿಗಳು ಉಪಸ್ಥಿತರಿದ್ದರು.. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಪ್ರಹ್ಲಾದ್ ವಾಗ್ಮೋರೆ .ತಾಲೂಕಾ ಅಧ್ಯಕ್ಷರು ವಿಜಯಕುಮಾರ ಪವಾರ .ಆಕಾಶ ನಂದಗಾಂವ .ಸಿದ್ದು ತೇಲಿ .ರಾಜು ವಿಜಾಪುರ .ಶಂಭು ತೆರೆದಾಳ.ಶ್ರವಣ್ ಕಾಂಬಳೆ.ಹನುಮಂತ್ ಸಿಂಧೂರ ಮತ್ತಿತರ ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ