ಅಭಿನವ ಅನ್ನದಾನ ಶ್ರೀ ಗಳ ದರ್ಶನ ಪಡೆದ ಸಿಎಂ ಬೊಮ್ಮಾಯಿ ಹಾಗೂ ಸಚಿವ ಸಿ,ಸಿ,ಪಾಟೀಲ ಇತರರು….
ಲಿಂಗೈಕ್ಯ ಶ್ರೀ ಗಳ ದರ್ಶನ ಪಡೆದ ಮುಖ್ಯಮಂತ್ರಿ ಮಾತನಾಡಿ ತ್ರಿವಿಧ ದಾಸೋಹಿಗಳು ಅನ್ನ ಅಕ್ಷರ ನೀಡುವ ಮೂಲಕ ಶೈಕ್ಷಣಿಕವಾಗಿ ಧಾರ್ಮಿಕವಾಗಿ ನಾಡಿಗೆ ಕೊಟ್ಟ ಕೊಡುಗೆ ತುಂಬಾ ದೊಡ್ಡದು ಎಂದು ಹೇಳಿದರು. ಬೆಂಗಳೂರು: ಹಾಲಕೆರೆ ಅಭಿನವ ಲಿಂಗೈಕ್ಯ ಅನ್ನದಾನ ಶ್ರೀ ಗಳ ದರ್ಶನ ಆರ್ಶಿವಾದವನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಭೂಮ್ಮಾಯಿ ಹಾಗೂ ಸಚಿವ ಸಿ,ಸಿ,ಪಾಟೀಲ ಆರ್ಶಿವಾದ ಪಡೆದರು. ಲಿಂಗೈಕ್ಯ ಶ್ರೀ ಗಳ ದರ್ಶನ ಪಡೆದ ಮುಖ್ಯಮಂತ್ರಿ ಮಾತನಾಡಿ ತ್ರಿವಿಧ ದಾಸೋಹಿಗಳು ಅನ್ನ ಅಕ್ಷರ ನೀಡುವ ಮೂಲಕ ಶೈಕ್ಷಣಿಕವಾಗಿ ಧಾರ್ಮಿಕವಾಗಿ ನಾಡಿಗೆ ಕೊಟ್ಟ ಕೊಡುಗೆ ತುಂಬಾ ದೊಡ್ಡದು ಎಂದು ಹೇಳಿದರು. ಲಿಂಗೈಕ್ಯ ಶ್ರೀ ಗಳ ಅಗಲಿಕೆ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಜಿ,ಬಂಡಿ ಹಾಗೂ ಮಾಜಿ ಶಾಸಕ ಜಿ,ಎಸ್,ಪಾಟೀಲ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದರು. ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಹಾಲಕೆರೆ ಗ್ರಾಮದ ನಡೆದಾಡುವ ದೇವರು ಅಭಿನವ ಅನ್ನದಾನ ಶ್ರೀ ಗಳು (85) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಶ್ರೀಗಳ ಅಗಲಿಕೆಯಿಂದ ಅಪಾರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ, ತ್ರಿವಿಧ ದಾಸೋಹದ ಮೂಲಕ ಬೆಳಕಾಗಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಲವಾರು ಶಾಖಾಮಠವನ್ನು ಹೋಂದಿದ ಹಾಗೂ ಅನ್ನ ಅಕ್ಷರ ನೀಡಿ ಸಾವಿರಾರು ಮಕ್ಕಳ ಬಾಳಿಗೆ ಬೆಳೆಕಾಗಿ, ನಡೆದಾಡುವ ದೇವರು ಲಕ್ಷಾಂತರ ಭಕ್ತರ ಆರಾಧ್ಯ ದೇವರು ಶಿವಯೋಗ ಮಂದಿರದ ಅಧ್ಯಕ್ಷರಾದ ಹಾಗೂ ಹಾಲಕೆರೆ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಕೊಟ್ಟುರುಸ್ವಾಮಿ ಸಂಸ್ಥಾನಮಠ ಹೊಸಪೇಟೆ, ಬಳ್ಳಾರಿ, ಹಂಪಿ. ಅಧ್ಯಕ್ಷರು ಲಕ್ಷಾಂತರ ಭಕ್ತ ಸಮೂಹವನ್ನು ಇಂದು ಬೆಳಿಗ್ಗೆ 5:30 ಲಿಂಗೈಕ್ಯರಾದರರು. ಲಿಂಗೈಕ್ಯ ಶ್ರೀ ಗಳ ಅಗಲಿಕೆ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಜಿ,ಬಂಡಿ ಹಾಗೂ ಮಾಜಿ ಶಾಸಕ ಜಿ,ಎಸ್,ಪಾಟೀಲ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದರು. ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನರೆಗಲ್ ಹೋಬಳಿಯ ಎಲ್ಲಾ ಗ್ರಾಮದಲ್ಲಿ ಶೋಕ ಮಡುಗಟ್ಡಿದ್ದು ಕೆಲಸ ಕಾರ್ಯಗಳನ್ನು ಹಾಗೂ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದು ಮಾಡುವ ಮೂಲಕ ಗೌರವ ಸೂಚಿಸಿದರು.ಮಂಗಳವಾರ ಮಧ್ಯಾಹ್ನ 2 ಗಂಟೆಗೆ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಭಕ್ತರು ತಿಳಿಸಿದರು.
ವರದಿ – ಸಂಪಾದಕೀಯ