ಮಳೆರಾಯನ ಚೆಲ್ಲಾಟ. ರೈತನ ಗೊಳಾಟ. ಕೈಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕುಷ್ಟಗಿ ತಾಲೂಕಿನ ರೈತರ ಗೊಳು ಕೆಳುವರ್ಯಾರು…..
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾವರಗೇರಾ ಹೋಬಳಿಯ ಸುತ್ತ ಮುತ್ತ ಇರುವ ಹಾಗಲದಾಳ, ಜುಮಲಾಪೂರ, ಇದ್ಲಾಪುರ, ಮುದೇನೂರ, ಸಾಸ್ವಿಹಾಳ, ಕಿಲಾರಹಟ್ಟಿ, ಗ್ರಾಮದ ಸಮಸ್ತ ರೈತ ಬಾಂಧವರು ವಿಪರಿತ ಮಳೆಯಿಂದ ತೀರ ನಷ್ಟ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಸುಮಾರು ಎರಡು ವರ್ಷಗಳ ಕಾಲ ಈ ಮಹಾಮಾರಿ ಕೊರೊನ ಖಾಯಿಲೆಯಿಂದ ರೈತರು ಬಹಳಷ್ಟು ತೊಂದರೆಗೊಳಪಟ್ಟಿದ್ದು, ರೈತರು ಈ ವರ್ಷ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಮಳೆ ಪ್ರಮಾಣದಲ್ಲಿ ಆಗಿದ್ದರಿಂದ ಖುಷಿಯಿಂದ ಭೂಮಿಯನ್ನು ನೆಚ್ಚಿಕೊಂಡು ಸಂಪೂರ್ಣ ತೊಗರಿ ಬಿತ್ತನೆ ಮಾಡಿ, ಅದಕ್ಕೆ ರಾಸಾಯನಿಕ ಗೊಬ್ಬರ, ಕಿಟ ಕ್ರಿಮಿನಾಶಕ, ಸಿಂಪರಣೆ ಮಾಡಿ, ಸತತವಾಗಿ ನಾಲ್ಕು ತಿಂಗಳ ಕಾಲ ಅತ್ಯಂತ ಜವಾಬ್ದಾರಿಯುತವಾಗಿ ಸಾಲ ಶೂಲ ಮಾಡಿ, ಮಕ್ಕಳಂತೆ ಜೋಪಾನ ಮಾಡಿದ್ದ ತೊಗರಿ ಬೆಳೆ ಕೆಲವೆ ದಿನಗಳಲ್ಲಿ ಅದನ್ನು ಕೊಯ್ಲು ಮಾಡಿ ಅದರಿಂದ ಅಲ್ಪ ಆದಾಯ ತೆಗೆದು ಕೊಳ್ಳಬೇಕು ಎನ್ನುವಷ್ಟರಲ್ಲಿ.. ಬಡವನ ಸಿಟ್ಟು ದವಡೆಗೆ ಮೂಲ ಎಂಬುವಂತೆ. ಬೆಳಾಗಾಗುವದರಲ್ಲಿ ವರುಣನ ಆರ್ಭಟಕ್ಕೆ ವರ್ಷ ಪೂರ್ತಿ ನಂಬಿ ಉಳಿಮೆ ಮಾಡಿದ ತೋಗರಿ ಗಿಡದಲ್ಲಿ ಕಾಯಿ ಮೂಲಕ ಸಸಿಯಾಗಿ ರೈತನ ಹೊಟ್ಟೆಗೆ ಬರೆ ಎಳದಂತೆ ಆಗಿದೆ. ಮುದೇನೂರ ಗ್ರಾಮದ ಹುಸೇನ್ ಸಾಬ್ ಮುಲ್ಲಾ ಎಂಬುವರ ರೈತನ ಹೊಲದಲ್ಲಿ ಸುಮಾರು 16 ಎಕರೆ ತೊಗರಿ ಬೆಳೆ ಸಂಪೂರ್ಣವಾಗಿ ನೆಲಸಮವಾಗಿ ರೈತ ಬಹಳ ಸಂಕಷ್ಟಕ್ಕಿಡಾಗಿದ್ದಾರೆ,
ಹಾಗೆ ಕುಷ್ಟಗಿ ತಾಲೂಕಿನ ಕೆಲವು ಗ್ರಾಮಗಳ ರೈತರ ಬಾಳು ಚಿಂತಜನಕವಾಗಿದೆ. ರೈತಾಪಿ ವರ್ಗದವರ ಹಣೆಬರಹವೇನೋ ಗೊತ್ತಿಲ್ಲ ಸರಿಯಾದ ಕಾಲಕ್ಕೆ ಮುಂಗಾರು ಮಳೆಯಾದ್ರೆ ಹಿಂಗಾರು ವಿಪರಿತ ಮಳೆಯಿಂದ ಸರಿಯಾಗಿ ಬೆಳೆ ಬರುತ್ತಿಲ್ಲ, ಬಂದಂತಹ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಮಳೆರಾಯನ ಚೆಲ್ಲಾಟ ರೈತನ ಗೊಳಾಟ ಹಾಗಾಗಿ ಅಧಿಕಾರಿಗಳು ಜನಪ್ರತಿನಿಧಿಗಳು ಸಂಕಷ್ಟಕ್ಕಿಡಾದ ರೈತರು ಸೂಕ್ತ ಪರಿಹಾರ ನಿಡಿ ರೈತರಿಗೆ ಜೀವ ಕಳೆ ತುಂಬಬೇಕು.. ( ರೈತರಿಗೊಂದು ಸೂಚನೆ :- ಸಾಲಾ,ಸೂಲ ಮಾಡಿದ್ದಿರಿ ಹಾಗಾಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ ನಿಮ್ಮ ಬೆನ್ನಿಗೆ ರಾಜ್ಯ ಸರ್ಕಾರವೆ ನಿಂತಿದೆ ಧರ್ಯವಾಗಿರಿ,) ಜೊತೆಗೆ ನಿಮ್ಮನ್ನೆ ನಂಬಿದೆ ಕುಟುಂಬ ಮರೆಯದಿರಿ, ಜೈಹಿಂದ್, ಜೈಜವಾನ್, ಜೈಕೀಸಾನ್)
ವರದಿ – ಉಪ-ಸಂಪಾದಕೀಯ