ಜುಮಲಾಪುರ ದಲ್ಲಿ ಕರೋನ ಮನೆ ಮಾಡಿರುವ ಶಂಕೆ ಗ್ರಾಮಸ್ಥರ ಲ್ಲಿ ಆತಂಕ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪುರ ಗ್ರಾಮದಲ್ಲಿ ಮಹಿಳೆಗೆ ಕರೋನ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಜನರಲ್ಲಿ ಕರೋನದ ಎರಡನೇ ಅಲೆಯ ಭಯ ಆತಂಕ ಮನೆ ಮಾಡಿದೆ ಕರೋನವು ಜುಮಲಾಪೂರ ಗ್ರಾಮದ ಮಹಿಳೆಯು ಬೆರೆ ಊರಿನವರಿದ್ದು ಹೇರಿಗೆಗೆ ಎಂದು ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಅಕ್ಕನ ಮನೆಗೆ ಬಂದಿದ್ದು, ಕೂಲಿ ಮಾಡಲು ಬೆಂಗಳೂರಿಗೆ ಹೋಗಿ ನೇರವಾಗಿ ಅಕ್ಕನ ಮನೆಗೆ ಬಂದಿದ್ದು ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ ಎಂಟು ದಿನದ ಹಿಂದೆ ಮಹಿಳೆ ಹೊಟ್ಟೆ ನೋವು ಎಂದು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಮುದೆನೂರ ಹೊಗಿದ್ದಾರೆ ಆಗ ಅಲ್ಲಿನ ವೈದ್ಯರು ಚೆಕ್ ಮಾಡಿ ಕುಷ್ಟಗಿ ತಾಲೂಕು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದು ರೇಪರ ಮಾಡಿದ್ದಾರೆ ಮಹಿಳೆಗೆ ಅಲ್ಲಿನ ವೈದ್ಯರು ಚೆಕ್ ಮಾಡಿ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರೆಪರ ಮಾಡಿದ್ದಾರೆ ತದನಂತರ ಜಿಲ್ಲಾ ಆಸ್ಪತ್ರೆ ವೈದ್ಯರು ಗರ್ಭಿಣಿ ಮಹಿಳೆಯನ್ನು ಮೊದಲು ಕೊವಿಡ ಟೆಸ್ಟ್ ಮಾಡಿದ್ದಾರೆ ಟೆಸ್ಟ್ ರಿಪೊರ್ಟ ಪಾಸಿಟಿವ್ ಬಂದಿದೆ ಬಂದ ತಕ್ಷಣ ಅಲ್ಲಿನ ವೈದ್ಯರು ಇಲ್ಲಿಯೆ ಇರಿ ನಿಮಗೆ ಪಾಸಿಟಿವ್ ಆಗಿದೆ ನಿಮ್ಮನ್ನು ಕರೋನ ವಾರ್ಡಗೆ ಕಳುಹಿಸಿ ಕೊಡುತ್ತೇವೆ ಅಂತ ಹೆಳಿದ ತಕ್ಷಣ ಇವರು ಅಲ್ಲಿಂದ ಸಿದಾ ಜುಮಲಾಪುರ ಗ್ರಾಮಕ್ಕೆ ಬಂದಿದ್ದಾರೆ. ಅಲ್ಲಿಯ ವೈದ್ಯರು ಇವರನ್ನು ಹುಡುಕಿ, ಇವರು ಮಾಡಿರುವ ಆಸ್ಪತ್ರೆ ಚಿಟಿ ತಾಯಿಯ ಕಾರ್ಡ ಅಡ್ರೆಸ್ ಹುಡುಕಲು ಪ್ರಯತ್ನಿಸಿದ್ದಾರೆ, ತಾಯಿಯ ಕಾರ್ಡಲ್ಲಿರುವ ಅಡ್ರೆಸ್ ಸಂಪೂರ್ಣ ಬೆಂಗಳೂರಿನ ಅಡ್ರಸ್ ಆಗಿರುತ್ತದೆ ಅದರಲ್ಲಿ ಇರುವ ಮೊಬೈಲ್ ನಂ ಕರೆ ಮಾಡಿದರೆ ಅದು ಸ್ವೀಚ ಆಪ್ ಎಂದು ಬರುತ್ತದೆ ಅಲ್ಲಿನ ವೈದ್ಯರಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು, ತದನಂತರ ವೈದ್ಯಾಧಿಕಾರಿಗಳು ಇದನ್ನು ರೇಪರ್ ಮಾಡಿರುವ ಕುಷ್ಟಗಿ ತಾಲೂಕು ಆಸ್ಪತ್ರೆಯ ವಿಷಯ ತಿಳಿಸಿದ ನಂತರ ತಾಲ್ಲೂಕು ವೈದ್ಯಾಧಿಕಾರಿಗಳು ಆದ ಆನಂದ ಗೋಟುರು ವಿಚಾರಣೆ ಮಾಡಲಾಗಿ ಮುದೆನೂರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬಂದಿರುವ ರೋಗಿ ಎಂದು ದೃಢ ಪಟ್ಟ ಹಿನ್ನೆಲೆಯಲ್ಲಿ ಮುದೆನೂರ ವೈದ್ಯಾಧಿಕಾರಿಗಳು ಆದ ಡಾ ನಿಲಪ್ಪ ಅವರು ಪಾಸಿಟಿವ್ ಮಹಿಳೆಯನ್ನು ಪತ್ತೆ ಹಚ್ಚಿ ಮಹಿಳೆಯ ಆರೋಗ್ಯದ ಬಗ್ಗೆ ವಿಚಾರಿಸಿದಾಗ ಮಹಿಳೆ ಆರೋಗ್ಯ ದಿಂದ ಇದ್ದಾಳೆ ಈ ಮಹಿಳೆಗೆ ಅವಳಿ ಜವಳಿ ಮಕ್ಕಳಿದ್ದಾರೆ ಎಂದು ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ವೆಬ್ ನ್ಯೂಸ್ ಪತ್ರಿಕೆಗೆ ಪ್ರತಿಕ್ರಿಯಿಸಿದರು. ಏನೆ ಆಗಲಿ ಹೊಗಲಿ ನಮ್ಮ ಜೀವನ ಬಗ್ಗೆ ಮೊದಲು ನಮಗೆ ಅರಿವಿರಲಿ. ಮತ್ತೆ ನಮ್ಮ ಸುತ್ತ ಮುತ್ತಲಿರುವ ಜನರ ಬಗ್ಗೆ ಅರಿವಿರಲಿ. ಮರಳಿ ಹುಟ್ಟಿ ಬರಲು ಹುಲ್ಲು ಬಿಜ ಅಲ್ಲ. ಹಾಗಾಗಿ ಜನರು ಹೆಚ್ಚೆತ್ತು ಕೊಂಡು ತಮ್ಮ ಆರೋಗ್ಯ ಹಾಗೂ ತಮ್ಮ ಮನೆಯಲ್ಲಿ ಇರುವ ಎಲ್ಲರ ಆರೋಗ್ಯ ತಮ್ಮ ಕೈಯಲ್ಲಿ ಇರುತ್ತದೆ ಹಾಗಾಗಿ ಪಾಸಿಟಿವ್ ಬಂದಿರುವರು ಯಾರೆ ಆಗಲಿ ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆಯಿರಿ ಆರೋಗ್ಯ ವಾಗಿರಿ, ವರದಿ – ಅಮಾಜಪ್ಪ ಹೆಚ್. ಜುಮಲಾಪೂರ.