ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಶ್ರೀ ರಾಮೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ದಾರ ಮಾಡಲು ಲಕ್ಷ್ಮಿ ಮೇಡಂ ರವರಿಗೆ ಡಾ. ಎಸ್ ರಾಘವೇಂದ್ರ ಗೌಡ್ರು ಮನವಿ ಮಾಡಲಾಯಿತು.
ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಸರ್ಕಾರ ಆಯುಕ್ತರವರ ಕಾರ್ಯಾಲಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಸ್ಥಾನಿಕ ಸಹಾಯಕರು -1 ಲಕ್ಷ್ಮಿ ಮೇಡಂ ರವರಿಗೆ ಡಾ. ಎಸ್ ರಾಘವೇಂದ್ರ ಗೌಡ್ರು ಮನವಿ ಮಾಡಲಾಯಿತು…….. 23-11-2021- ರಾಮನಾಥಪುರ- ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಶ್ರೀ ಕ್ಷೇತ್ರ ಶತಮಾನಗಳಷ್ಟು ಹಳೆಯದಾದ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನವು ಜೀವನದಿ ಕಾವೇರಿ ನದಿ ದಡದಲಿದ್ದು, ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಸದ್ಯ ಈ ಪುರಾತನ ದೇವಾಲಯ ಶಿಥಿಲಾವಸ್ಥೆ ಹಂತ ತಲಟಿಪಿದ್ದು ಈ ಕೂಡಲೇ ಈ ಪುರಾತನ ದೇವಾಲಯವನ್ನು ಸಂರಕ್ಷಣೆ ಮಾಡಲು ಈ ಹಿಂದೆ 4 ಕೋಟಿ 80 ಲಕ್ಷ ರೂ ಅಂದಾಜು ಪಟ್ಟಿಗೆ ಅಡಳಿತಾತ್ಮಕ ಅನುಮೊದನೆಗೆ ಅನುದಾನ ಬಿಡುಗಡೆ ಮಾಡಿಸಿ, ದೇವಾಲಯದ ಎಲ್ಲಾ ರೀತಿಯ ಜೀಣೋದ್ಧಾರ ಮಾಡಿಸಬೇಕೆಂದು ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಧ್ಯಕ್ಷರಾದ ಡಾ .ಎಸ್ ರಾಘವೇಂದ್ರ ಗೌಡ್ರು ಅವರು ಒತ್ತಾಯಿಸಿದರು. ಬೆಂಗಳೂರಿನ ಚಾಮರಾಜಪೇಟೆಗೆ ಇಂದು ಮಂಗಳವಾರ ಭೇಟಿ ಕೊಟ್ಟ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು ದೇವಾಲಯದ ಗರ್ಭಗುಡಿ, ರಾಜಗೋಪುರ ಹಾಗೂ ದೇವಾಲಯದ ಸುತ್ತಲೂ ಇರುವ ಪೌಳಗಳು ಬಿಳುತ್ತಿವೆ. ಇಂತಹ ದೇವಾಲಯದ ಅಭಿವೃದ್ಧಿಗೆ ಈ ಹಿಂದೆ ದೇವಾಲಯದ ಸಮಿತಿ ಮತ್ತು ಕ್ಷೇತ್ರದ ಶಾಸಕರು ಸಹ ಸಂಬಂಧ ಪಟ್ಟ ಪುರಾತತ್ವ ಇಲಾಖೆ ಮೈಸೂರು ಇವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ 4 ಕೋಟಿ. 80 ಲಕ್ಷ ರೂ ಪಟ್ಟಿ ತಯಾರಿಸಿ ಈ ಪಟ್ಟಿಯನ್ನು ಬೆಂಗಳೂರು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಒಂದು ವರ್ಷದ ಹಿಂದೆ ಕಳಿಹಿಸಿದರೂ ಕೂಡ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಗಿದೆ ಎಂದು ಲಕ್ಷ್ಮಿ ಮೇಡಂ ರವರಿಗೆ ತಿಳಿಸಿದಾಗ ಶ್ರೀಘವೇ ದೇವಾಲಯದ ಜೀಣೋದ್ದಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಮತ್ತು ಇದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಅದೇ ಕ್ಷಣ ಫೋನ್ ಕರೆ ಮುಖಾಂತರ ಎಚ್ಚರಿಕೆ ನೀಡಿ ಕೂಡಲೇ ಇದಕ್ಕೆ ಸಂಬಂಧಪಟ್ಟಂತ ಪೇಪರ್ ಗಳು ತಮ್ಮ ಕಚೇರಿಗೆ ಕಳುಹಿಸಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು . ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಡಾ. ಎಸ್ ರಾಘವೇಂದ್ರ ಗೌಡ್ರು ಮತ್ತು ರಾಜ್ಯ ಮಾರ್ಗದರ್ಶಕರಾದ ಡಾ ಎ ಪಿ ಕರಾಟೆ ಶ್ರೀನಾಥ್ ರವರು MN ವೇಣುಗೋಪಾಲ್ ರವರು ಶಶಿಕಲಾ ರವರು ಭಾಸ್ಕರ್ ಭಾಗವಹಿಸಿದ್ದರು. ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಹಿರಿಯ ಮಾರ್ಗದರ್ಶಕರಾದ ಡಾ. ಕರಾಟೆ ಶ್ರೀನಾಥ್ ಮತ್ತು MN ವೇಣುಗೋಪಾಲ್ ಮಾತನಾಡಿದ ಅವರು ಶ್ರೀ ರಾಮೇಶ್ವರಸ್ವಾಮಿ ದೇವಾಲಯ ಒಂದು ಸಾವಿರ ಇತಿಹಾಸ ವಿರುವ ಈ ಶಿಥಿಲವಾಗಿರುವ ಈ ದೇವಾಲಯಕ್ಕೆ ಈಗಾಗಲೇ 3 ತಿಂಗಳಿಂದ ಸಾರ್ವಜನಿಕರುಗಳಿಗೆ ನಿರ್ಭಧಿಸಲಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ದೇವಾಲಯದ ಬಾಗಿಲ ಬೀಗ ನೋಡಿಕೊಂಡು ಹೋಗುತ್ತಿದ್ದಾರೆ. ಸಂಬಂಧ ಪಟ್ಟ ಸರ್ಕಾರ ಕೂಡಲೇ ಈ ದೇವಾಲಯಕ್ಕೆ ಹಣ ಬಿಡುಗಡೆ ಮಾಡಿ ಜೀಣೋದ್ದಾರ ಮಾಡಿಸಿಕೊಡುವಂತೆ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯ ಹಿರಿಯ ಪದಾಧಿಕಾರಿಗಳು ಒತ್ತಾಯಿಸಿದರು. ವರದಿ – ಮಹೇಶ ಶರ್ಮಾ