ಕುಂದಾನಗರಿಯಲ್ಲಿ ಬಿಜೆಪಿ ಗೆಲ್ಲಿಸಿ, ಜನಪರ ಆಡಳಿತ ನಡೆಸೋಣ….
ಬೆಳಗಾವಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ನಮ್ಮ ಪಕ್ಷದ ಅಭ್ಯರ್ಥಿಯಾದ ಶ್ರೀ ಮಹಾಂತೇಶ ಕವಟಗಿಮಠ ಅವರ ಪರವಾಗಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಮಾತನಾಡಿದರು. ಈಗಾಗಲೇ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ಜನರ ಮನೆ-ಮನ ತಲುಪುತ್ತಿವೆ. ಹೀಗಾಗಿ ವಿಧಾನಪರಿಷತ್ ಚುನಾವಣೆಯಲ್ಲೂ ಜನರು ನಮಗೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಸರ್ವ ಕಾರ್ಯಕರ್ತರು ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಉಮೇಶ್ ಕತ್ತಿ ಜಿ, ಸಂಸದರಾದ ಶ್ರೀಮತಿ ಮಂಗಲಾ ಅಂಗಡಿ ಜಿ, ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ ಜಿ, ಮಾಜಿ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಜಿ, ಶಾಸಕರಾದ ಶ್ರೀ ಅಭಯ್ ಪಾಟೀಲ್ ಜಿ, ಶ್ರೀ ಅನಿಲ್ ಬೆನಕೆ ಜಿ, ಶ್ರೀ ಪಿ. ರಾಜೀವ್ ಜಿ, ಶ್ರೀ ಧುರ್ಯೋಧನ ಐಹೊಳೆ ಜಿ, ಶ್ರೀ ಮಹೇಶ ಕುಮಟಳ್ಳಿ ಜಿ, ಸ್ಥಳೀಯ ಮುಖಂಡರು, ಪಕ್ಷದ ಇತರೆ ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಿದ್ದರು. .
ವರದಿ – ಮಹೇಶ ಶರ್ಮಾ