ಶ್ರೀ ಶ್ರೀ ಡಾ, ಸಂಗನಬಸವ ಮಹಾಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ತಾಲೂಕಿನಾದ್ಯಂತ ಪುಷ್ಪ ನಮನ ಸಲ್ಲಿಸಿದರು….
ಯಲಬುರ್ಗಾ : ಹೊಸಪೇಟೆ ಮತ್ತು ಬಳ್ಳಾರಿ ಕೊಟ್ಟೂರು ಮಹಾಸ್ವಾಮಿ ಮಠದ ಜಗದ್ಗುರುಗಳು ಹಾಗೂ ಬದಾಮಿ ತಾಲೂಕಿನ ಶಿವಯೋಗಮಂದಿರದ ಪೀಠಾಧ್ಯಕ್ಷರಾಗಿದ್ದ ಶ್ರೀ ಮ, ನಿ, ಪ್ರ, ಡಾ,ಸಂಗನಬಸವ ಮಹಾಸ್ವಾಮಿಗಳು ಸೋಮವಾರ ಬೆಳಗಿನ ಜಾವ ಲಿಂಗೈಕ್ಯರಾದರು ಇವರ ನೋವಿನ ಸಂಗತಿ ತಿಳಿದು ಗದಗ್ ಜಿಲ್ಲೆಯ ಹಾಲಕೇರಿ ಅನ್ನದಾನೇಶ್ವರ ಮಠದ ಪೀಠಾಧಿಪತಿಗಳಾಗಿ 180 ಕ್ಕೂ ಹೆಚ್ಚು ಮಠಗಳಲ್ಲಿ ದಾಸೋಹ ಮತ್ತು ಶೈಕ್ಷಣಿಕ ಕ್ರಾಂತಿ ಜೊತೆಗೆ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಭೌತಿಕವಾಗಿ ನಮ್ಮಿಂದ ದೂರವಾಗಿದ್ದಾರೆ, ಬೇವೂರು ರಸ್ತೆ ಮೂಲಕ ಯಲಬುರ್ಗಾ ಪಟ್ಟಣದಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ದಾರಿಯುದ್ದಕ್ಕೂ ಪುಷ್ಪನಮನ ಸಲ್ಲಿಸಿದರು ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಮಹಾಸ್ವಾಮಿಜಿಗಳು ಮತ್ತು ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿಯವರು ಕೂಡಾ ಮಾತನಾಡಿದರು, ನಂತರ ಯಲಬುರ್ಗಾ ಪಟ್ಟಣದಿಂದ ಮುಧೋಳ ಗ್ರಾಮದಲ್ಲಿ ಅಂಬೇಡ್ಕರ್ ಸರ್ಕಲ್ ಹತ್ತಿರ ಭಕ್ತಸಮೂಹ ಸಾಗರವೇ ಹರಿದು ಬಂದಿತ್ತು ಶ್ರೀಗಳ ದರ್ಶನ ಪಡೆದು ನಂತರ ಶ್ರೀಗಳ ದರ್ಶನ ಎಲ್ಲರಿಗೂ ಆಗಬೇಕು ಎಂದು ಪಾರ್ಥಿವ ಶರೀರವನ್ನು ದಾರಿಯುದ್ದಕ್ಕೂ ಭಕ್ತಿ ಸಮರ್ಪಣೆ ಮಾಡಿ ಜಯಘೋಷ ವನ್ನು ಹಾಕಿ, ಊರ ಒಳಗೆ ಹೋಗೋಣವೆಂದು ತಡೆಹಿಡಿದು ಕೇಳಿಕೊಂಡರು ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರೆಲ್ಲರೂ ಬೆಂಗಳೂರಿನಿಂದ ಇಲ್ಲಿಯವರೆಗೂ ತಂದಿದ್ದೇವೆ ದಯವಿಟ್ಟು ತೊಂದರೆ ಕೊಡಬೇಡಿ ಇಲ್ಲೇ ದರ್ಶನ ಪಡೆದು ಕೇಳಿಕೊಂಡರು,ಅಂತಿಮ ಸಂಸ್ಕಾರಕ್ಕೆ ಬನ್ನಿ ಎಂದು ಹೇಳಿದರು ಕರ್ಮುಡಿ ಮಾರ್ಗವಾಗಿ ಹಾಲಕೇರಿ ಶ್ರೀ ಅನ್ನದಾನೇಶ್ವರ ಮಠಕ್ಕೆ ತಲುಪಿತ್ತು ಇದೇ ಸಂದರ್ಭದಲ್ಲಿ ಮುಧೋಳ ಗ್ರಾಮದ ಎಲ್ಲಾ ಸರ್ವ ಸದ್ಭಕ್ತರು ಸೇರಿ ಶ್ರೀಗಳ ದರ್ಶನ ಪಡೆದರು,
ವರದಿ – ಹುಸೇನ್ ಮೋತೆಖಾನ್