‘ಕೃಷಿ ತೋ ನಾಸ್ತಿ ದುರ್ಭಿಕ್ಷಂ’
ಶನಿವಾರ ನಡೆದ ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಮಹಾಸಭೆಯ ಅಂಗವಾಗಿ ವಿಶೇಷವಾಗಿ ರೈತರಿಗೆ ಹೊಸ ತಂತ್ರಜ್ಞಾನದ ಬಗ್ಗೆ ಪರಿಚಯ ಮಾಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಬೃಹತ್ ‘ಕೃಷಿ ಪ್ರದರ್ಶನ’ ಕಾರ್ಯಕ್ರಮದಲ್ಲಿ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಕೃಷಿ ಮಳಿಗೆಯನ್ನು ವೀಕ್ಷಿಸಿದರು. ಅನ್ನದಾತರಿಗೆ ಅನುಕೂಲವಾಗುವ ಉದ್ದೇಶದಿಂದ ಹಲವಾರು ಕೃಷಿ ಔಷಧ, ಹೊಸ ಯಂತ್ರೋಪಕರಣ, ಸಲಕರಣೆಗಳು ಕಾರ್ಖಾನೆ ವತಿಯಿಂದ ರೈತರಿಗೆ ಪರಿಚಯಿಸಿದರು. ಕೃಷಿಯಲ್ಲಿ ಸಾಧನೆ ಮಾಡಿದ ರೈತರು ಬೆಳೆದ ಕಬ್ಬಿನ ಹೊಸ ತಳಿಗಳ ಪ್ರದರ್ಶನ ನಡೆಯಿತು. ಇದೇ ವೇಳೆ 300 ಕ್ಕೂ ಅಧಿಕ ಬಾಳೆ ಹಣ್ಣಿನ ತಳಿಗಳನ್ನು ಸಂರಕ್ಷಿಸಿ, ಕೇಂದ್ರ ಸರ್ಕಾರದ ವತಿಯಿಂದ ‘ರಾಷ್ಟ್ರೀಯ ಬೆಳೆ ಸಂರಕ್ಷಕ ಪ್ರಶಸ್ತಿ’ ಪುರಸ್ಕೃತರಾದ ಬಿಜೆಪಿ ಪಕ್ಷದ ಕಾರ್ಯಕರ್ತರಾದ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ ಗ್ರಾಮದ ಶ್ರೀ ಶಿವಗೌಡ ಮಲ್ಲಪ್ಪ ಪಾಟೀಲ ಅವರನ್ನು ಸನ್ಮಾನಿಸಿದರು. ಅನ್ನದಾತರಿಗೆ ಒಳಿತಾಗುವ ನಿಟ್ಟಿನಲ್ಲಿ ಹಾಗೂ ಅವರು ಮಾಡುವ ಕೃಷಿಚಟುವಟಿಗಳಿಗೆ ಅನುಕೂಲವಾಗಲು ಕೃಷಿ ಪ್ರದರ್ಶನ ಹಮ್ಮಿಕೊಂಡು ಉತ್ತಮ ಸಂದೇಶ ನೀಡಿದ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಯ ನಿಜಕ್ಕೂ ಅಭಿನಂದನಾರ್ಹ ಎಂದು ಹೇಳಿದರು.
ವರದಿ – ಮಹೇಶ ಶರ್ಮಾ