ಹಂಸಲೇಖರ ಬೆಂಬಲಕ್ಕೆ ನಿಂತ ಮೂಲ ನಿವಾಸಿ ಮಂಚ್ ಹಾಗೂ ಇತರೆ ಹಾಗೂ ಪ್ರಗತಿ ಪರ ಸಂಘಟಿಕರು ……
ತಾವರಗೇರಾ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿಂದು ನಡೆದ ನಾದಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ಪೇಜಾವರ ಶ್ರೀಗಳ ಕುರಿತು ನೀಡಿದ ಹೇಳಿಕೆ ವಾದ/ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ದೂರು ದಾಖಲಾದ ಕಾರಣ ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಸಹ ದಾಖಲಿಸಿದ್ದಾರೆ. ಅವರ ಪರವಾಗಿ ಮತ್ತು ವಿರುದ್ಧವಾಗಿ ವಾದ ಪ್ರತಿವಾದಗಳು ನಡೆಯುತ್ತಿರುವುದರ ಮಧ್ಯೆಯೇ ತಾವರಗೇರಾ ಪಟ್ಟಣದಲ್ಲಿಂದು ಶ್ರೀ ಬಸವೇಶ್ವರ (ಸಿಂಧನೂರು ಸರ್ಕಲ್) ವೃತ್ತದಲ್ಲಿ ಮೂಲ ನಿವಾಸಿ ಮಂಚ್ ಹಾಗೂ ಪ್ರಗತಿ ಪರ ಸಂಘಟಿಕರು ಹಂಸಲೇಖರ ಪರ ಮಾತನಾಡಿದ್ದಾರೆ. ಹಂಸಲೇಖ ಅವರ ಹೇಳಿಕೆಯ ಮೇಲೆ ದೊಡ್ಡ ಪ್ರಹಸನವನ್ನೇ ಸೃಷ್ಟಿಸಿರುವ ಮನುವಾದಿಗಳು, ಜನರ ಆಹಾರ ಪದ್ದತಿಯ ಸ್ವಾತಂತ್ರ್ಯದ ವಿರೋಧಿಗಳು ಎಂದೆನ್ನಬಹುದು’ ಎಂದರು. ದಲಿತರ ಮನೆಗೆ ಯಾರೋ ಭೇಟಿ ನೀಡುವುದು ದೊಡ್ಡ ವಿಚಾರವೇ ಅಲ್ಲ. ದಲಿತರನ್ನು ಮೇಲ್ವರ್ಗದ ಮನೆಗಳಿಗೆ ಕರೆಸಿಕೊಂಡು ಅವರ ಮನೆಯ ಅಡುಗೆ ಪಾತ್ರೆ ಬಳಸಿ ಊಟ ಬಡಿಸುವುದು, ದೇವಾಲಯದ ಗರ್ಭಗುಡಿಗೆ ಪ್ರವೇಶ ನೀಡುವುದು ಇಂದಿಗೆ ದೊಡ್ಡ ವಿಚಾರವೇ ಹೌದು ಎಂದಿದ್ದಾರೆ. ಮೂಲ ನಿವಾಸಿ ಮಂಚ್ ಹಾಗೂ ಪ್ರಗತಿ ಪರ ಸಂಘಟಿಕರು ಅದಕ್ಕೆ ಉದಾಹರಣೆ ದಲಿತ ಸಮುದಾಯದ ಐದು ವರ್ಷದ ಚಿಕ್ಕ ಮಗು ದೇವಾಲಯದ ಒಳ ಹೋಗಿದ್ದಕ್ಕೆ ಆ ಮಗುವಿನ ಪೋಷಕರಿಗೆ ಆ ದೇವಾಲಯದ ಆಡಳಿತ ವರ್ಗ ಶುದ್ದೀಕರಣದ ವೆಚ್ಚವನ್ನ ದಂಡವನ್ನಾಗಿ ವಸೂಲಿ ಮಾಡುವ ಕೆಲಸ ಮಾಡಿದ್ದು, ದಲಿತರು ಮನೆಗೆ ಬಂದರೆ ಶುದ್ದೀಕರಣಕ್ಕೆ ಗೋಮೂತ್ರ ಬಳಸುವುದು. ಈ ಮನುವಾದಿ ಸಂಸ್ಕೃತಿಯ ರಾಜಕೀಯ ನಾಯಕರಿಗೆ ಹಾಗೂ ಸಂಘ ಪರಿವಾರದವರಿಗೆ ದಲಿತರ ಮೇಲೆ ನಿಜವಾದ ಕಾಳಜಿಯಿದ್ದಲ್ಲಿ ಮೊದಲು ಇವುಗಳನ್ನು ನಿಲ್ಲಿಸಲಿ. ಸಮಾನತೆ ಸ್ಥಾಪಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾರಿಗೆ ತಂದಿರುವ ಸಂವಿಧಾನವನ್ನೇ ಬದಲಾಯಿಸುತ್ತೇವೆ ಅನ್ನುವ ಮಾತುಗಳನ್ನು ನಿಲ್ಲಿಸಲಿ ನೋಡೋಣ. ರಾಜಕೀಯ ನಾಯಕರು ದಲಿತರ ಮನೆಗೆ ತೆರಳಿ ಹೋಟೆಲ್‌ನಿಂದ ಊಟ ತರಿಸಿ ತಿಂದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಸಮಾಜದ ಜನರಲ್ಲಿಯೂ ನಾನೂ ವಿನಂತಿಸಿಕೊಳ್ಳುತ್ತೇನೆ, ಜನರ ಕಣ್ಣಿಗೆ ಮಣ್ಣೆರುಚುವ ಯಾವುದೇ ರಾಜಕೀಯ ನಾಯಕರ ಡೋಂಗಿ ಪ್ರಯತ್ನಗಳಿಗೆ ನಿಮ್ಮ ಮನೆಯನ್ನು ನಾಟಕ ಪ್ರದರ್ಶನ ಮಾಡುವ ಕೇಂದ್ರ ಮಾಡದಿರಿ. ಕೆಲವರಿಗೆ ನಿಜವಾಗಿಯೂ ದಲಿತರ ಮೇಲೆ ಪ್ರೀತಿಯಿದ್ದರೆ, ಕರ್ನಾಟಕದಲ್ಲಿ ಅವರ ಏಳಿಗೆಗಾಗಿ ಸರ್ಕಾರ ದುಡಿಯುವಂತೆ ನೋಡಿಕೊಳ್ಳಲಿ. ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಲು ಕ್ರಮ ಕೈಗೊಳ್ಳಲಿ, ದಲಿತರ ಮಕ್ಕಳಿಗೆ ಸಮಾನ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಿ. ದಲಿತರ ಮನೆಗೆ ಹೋಗಿ ತೋರಿಕೆ ಪ್ರಚಾರ ಮಾಡುವುದರಿಂದ ಸಮಾಜದ ಏಳಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅವರು ಮೊದಲು ಅರಿತುಕೊಳ್ಳಲಿ ಎಂದು ಮೂಲ ನಿವಾಸಿ ಮಂಚ್ ಹಾಗೂ ಪ್ರಗತಿ ಪರ ಸಂಘಟಿಕರು ಹೇಳಿದರು. ಈ ಕಾರ್ಯಕ್ರಮದಲ್ಲಿ ಮೂಲ ನಿವಾಸಿ ಮಂಚ್ ವಿಭಾಗಿ ಸಂಚಾಲಕರು ಹೇಮರಾಜ್ ವೀರಾಪುರ್, ಜಿಲ್ಲಾ ಅಧ್ಯಕ್ಷ ಹನುಮೇಶ್ ಮ್ಯಾಗಳಮನಿ., ಎಂ ಡಿ ಬಾಬು. ಗೌತಮ್ ಬಂಡಾರಿ. ದುರುಗೇಶ ದೇವರಮನಿ. ಮಂಜುನಾಥ್. ಗಣೇಶ್ ನಾರಿನಾಳ, ಅಮರೇಶ್ ಛಲವಾದಿ, ಛತ್ರಪ್ಪ ನಾರಿನಾಳ ಸಂಜೀವ ಛಲವಾದಿ, ಇತರರು ಉಪಸ್ಥಿತರಿದ್ದರು.
ವರದಿ – ಉಪ ಸಂಪಾದಕೀಯ