ಮನೆಕುಸಿದು ಮೃತಪಟ್ಟ ಕುಟುಂಬಕ್ಕೆ,ವಸತಿ ಯೊಂದಿಗೆ 10ಲಕ್ಷ ಪರಿಹಾರ ನೀಡಬೇಕು- ಗುನ್ನಳ್ಳಿ ರಾಘವೇಂದ್ರ ಆಗ್ರಹ..

Spread the love

ಮನೆಕುಸಿದು ಮೃತಪಟ್ಟ ಕುಟುಂಬಕ್ಕೆ,ವಸತಿ ಯೊಂದಿಗೆ 10ಲಕ್ಷ ಪರಿಹಾರ ನೀಡಬೇಕು- ಗುನ್ನಳ್ಳಿ ರಾಘವೇಂದ್ರ ಆಗ್ರಹ..

ವಿಜಯನಗರ  ಜಿಲ್ಲೆ ಕೂಡ್ಲಿಗಿ ಸಿಐಟಿಯು ಹಾಗೂ ಸಿಡಬ್ಲೂಎಫೈ ಸಹಯೊಗದಲ್ಲಿ,ಕಟ್ಟಡ ಕಾರ್ಮಿಕರು ಸಿಐಟಿಯು ಕಾರ್ಯದರ್ಶಿ ಹಾಗೂ ಎಸ್ಡಿ ಎಮ್ಸಿ ರಾಜ್ಯಮುಖಂಡ ಗುನ್ನಳ್ಳಿ ರಾಘವೇಂದ್ರ ನೇತೃತ್ವದಲ್ಲಿ. ತಾಲೂಕಿನ ನಿರಾಶ್ರಿತರಿಗೆ ಯೋಗ್ಯ ಪರಿಹಾರ ಹಾಗೂ ವಸತಿ ಕಲ್ಪಿಸುವಂತೆ ಒತ್ತಾಯಿಸಿ ಕ್ರಮಕ್ಕಾಗಿ,ಕಟ್ಟಡ ಕಾರ್ಮಿಕರು ತಹಶಿಲ್ದಾರರಿಗೆ ಹಕ್ಕೊತ್ತಾಯ  ಪತ್ರ ನೀಡಿದರು.ರಾಘವೇಂದ್ರ ತಹಶಿಲ್ದಾರರಿಗೆ ಹಕ್ಕೊತ್ತಾಯ  ಪತ್ರ  ನೀಡಿ ಮಾತನಾಡಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಪ್ರತಿ ಗ್ರಾಮಗಳಲ್ಲಿ ನಿರಾಶ್ರಿತ ಕುಟುಂಬಗಳಿಗಾಗಿ ಮಳೆಗಾಲದಲ್ಲಿ ಗಂಜಿ ಕೇಂದ್ರ ಪ್ರಾರಂಬಿಸಬೇಕಿದೆ. ಅವರಿಗೆ ಸೂಕ್ತ ವಸತಿ ಕಲ್ಪಿಸಬೇಕು ಮತ್ತು ಪರಿಹಾರ ನೀಡಬೇಕು ಎಂದು ಈ ಮೂಲಕ ತಾಲೂಕಾಡಳಿತಕ್ಕೆ ಒತ್ತಾಯಿಸಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಹತ್ತಾರು ನಿರಾಶ್ರಿತರಿದ್ದು ಅವರು ವಸತಿ ಹೊಂದಿಲ್ಲ,ಪ್ರತಿ ಗ್ರಾಮಗಳಲ್ಲಿ ಹತ್ತಾರು ನಿರಾಶ್ರಿತರು ಬೀಳುವಂತಹ ದುಸ್ಥಿತಿಯ ಮನೆಗಳಲ್ಲಿದ್ದಾರೆ. ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ನಿರಾಶ್ರಿತರು ಬೀಳುವಂತಹ ಶಿಥಿಲಾವಸ್ಥೆಯ ಮನೆಯಲ್ಲಿದ್ದಾರೆ.  ತಾಲೂಕು ಆಡಳಿತ ಕೂಡಲೇ ಮನೆಬಿದ್ದು ಮೃತಪಟ್ಟಿರುವ ಕುಟುಂಬಗಳಿಗೆ,ಶೀಘ್ರವೇ ವಸತಿಯೊಂದಿಗೆ 10ಲಕ್ಷರೂ ಪರಿಹಾರ ನೀಡಬೇಕು ಮತ್ತು ನಿರಾಶ್ರಿತ ಕುಟುಂಬಗಳಿಗೆ. ಶೀಘ್ರವೇ  ವಸತಿಯೊಂದಿಗೆ ಯೋಗ್ಯ ಪರಿ ಮತ್ತು ಪರಿಹಾರ ಕಲ್ಪಿಸಬೇಕೆಂದು ರಾಘವೇಂದ್ರ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು ಸಂಸದರು ಮನಸ್ಸು ಮಾಡಬೇಕಿದೆ ಮತ್ತು ಶೀಘ್ರವೇ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಬೇಕಿದೆ,ಸೂಕ್ತ ಪರಿಹಾರ ನೀಡಬೇಕಿದೆ ಅವರು ತಮ್ಮ ಕನಿಷ್ಠ ಜವಾಬ್ದಾರಿಯನ್ನ ಸಕಾಲಕ್ಕೆ ನಿರ್ವಹಿಸಬೇಕಿದೆ.ತಾಲೂಕಾಡಳಿತ ಜಿಲ್ಲಾಡಳಿತ ಪ್ರಾಮಾಣಿಕವಾಗಿ ನೆರವು ಕಲ್ಪಿಸಬೇಕೆಂದು ಕೋರಿದ್ದಾರೆ. ಕುಟುಂಬಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಹಕ್ಕೊತ್ತಾಯ ಪತ್ರವನ್ನು ತಹಶಿಲ್ದಾರರಾದ ಟಿ.ಜಗದೀಶರವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ವಿವಿದೆಡೆಗಳಿಂದ ಬಂದಿದ್ದ ಕಾರ್ಮಿಕ ಮುಖಂಡರು ಹಾಗೂ ಹೋರಾಟಗಾರರು ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ, ಹೂಲೆಪ್ಪ, ಸತ್ಯಪ್ಪ, ನಾಗರಾಜ, ತಮ್ಮಪ್ಪ, ಬಂಗಾರಪ್ಪ, ಬಸವರಾಜ ಶಿವರಾಮ,ಅಮರೇಶ, ಮಹದೇವಪ್ಪ, ಅಜೀಜ್ ,ಮಂಜುನಾಥ,ಸಿದ್ದೇಶ,ಯರಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.✍️

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *