ಕನ್ನಡ ಸಾಹಿತ್ಯ ಪರಿಷತ ಗೆ ರಾಜ್ಯಾಧ್ಯಕ್ಷರಾಗಿ ನಾಡೋಜ ಡಾ,ಮಹೇಶ್ ಜೋಶಿ ಆಯ್ಕೆಯಾಗಿದ್ದು ಬೆಂಬಲಿಗರು ಗೆಲುವಿನ ವಿಜಯೋತ್ಸವದ ಸಂಭ್ರಮಾಚರಣೆ ಆಚರಿಸಿದರು,
ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ವೀರಣ್ಣ ನಿಂಗೋಜಿ ಮಾತನಾಡಿ, ನಾಡೋಜ ಡಾ,ಮಹೇಶ್ ಜೋಶಿ ಅವರ ಗೆಲುವು ಕನ್ನಡ ನಾಡಿನ ಸಮಸ್ತ ಜನರ ಗೆಲುವಾಗಿದೆ ಅವರ ಅಧಿಕಾರದ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಇನ್ನಷ್ಟು ಪ್ರಬಲವಾಗಲಿದೆ ಎಂಬ ನಂಬಿಕೆ ನಮಗಿದೆ ಜೋಶಿ ಅವರು ಅತ್ಯಂತ ಕ್ರಿಯಾಶೀಲರಾಗಿ ದ್ದಾರೆ ಅವರು ಕಾರ್ಯನಿರ್ವಹಿಸುತ್ತಿದ್ದ ದೂರದರ್ಶನದ ಚಂದನ ವಾಹಿನಿ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮವನ್ನು ಕನ್ನಡ ನಾಡಿನ ಮೂಲೆ ಮೂಲೆಯಲ್ಲಿರುವ ಕನ್ನಡಾಭಿಮಾನಿಗಳಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಾಡೋಜ ಡಾ, ಮಹೇಶ್ ಜೋಷಿ 49 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಯಲಬುರ್ಗಾ. ನಡೋಜ ಮಹೇಶ್ ಜೋಷಿ ಬೆಂಬಲಿಗರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಎಲ್ಲರೂ ಸೇರಿ ಕಿತ್ತೂರಾಣಿ ಚೆನ್ನಮ್ಮ ವೃತ್ತದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು. ಮಲ್ಲನಗೌಡ ವಕೀಲರು ಮಾತನಾಡಿ ಡಾ, ಮಹೇಶ್ ಜೋಶಿ ಗೆಲುವು ಕನ್ನಡ ನಾಡಿನ ಸಮಸ್ತ ಜನರ ಗೆಲುವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಇನ್ನಷ್ಟು ಪ್ರಬಲವಾಗಿದ್ದು ಮಹೇಶ್ ಜೋಶಿ ಅವರು ಹಲವಾರು ಯೋಜನೆಗಳನ್ನು ಕಾರ್ಯಗತ ಮಾಡಲಿದ್ದಾರೆ, ಕನ್ನಡಿಗರ ಮನೆ ಮನೆಗಳಿಗೆ ಕನ್ನಡಸಾಹಿತ್ಯಪರಿಷತ್ತಿನ ತೆಗೆದುಕೊಂಡು ಹೋಗುವ ಗುರಿಯನ್ನು ಅವರು ಹೊಂದಿದ್ದಾರೆ, ಎಂದು ಹೇಳಿದರು, ಈ ಸಂದರ್ಭದಲ್ಲಿ ವೀರಣ್ಣ ನಿಂಗೋಜಿ, ಶರಣಪ್ಪ ರಾಂಪುರ, ರಾಜಣ್ಣ ಪಲ್ಲೇದ, ಸುರೇಶ, ಶರಣಪ್ಪ ಕೊಪ್ಪಳ, ಕಲ್ಲೇಶ್ ಧರಣಾ, ರಾಜಶೇಖರ್ ವಕೀಲರು, ಮುಖಂಡರಾದ ಈಶ್ವರ ಮಾಳಗಿ, ರಾಮಣ್ಣ ಪ್ರಬಣ್ಣ ನವರ್, ಹನುಮಂತಪ್ಪ ದಾನಕೈ, ಪತ್ರಕರ್ತರು ಮಹಾಂತೇಶ್, ಇನ್ನು ಹಲವಾರು ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು, ವರದಿ– ಹುಸೇನ್ ಮೊತೇಖಾನ್