ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ 74ನೇ ಜನ್ಮದಿನದ ಸಂಭ್ರಮ, ಶುಭಾಶಯಗಳ ಸುರಿಮಳೆ…..
ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಇಂದು 74ನೇ ಜನ್ಮದಿನದ ಸಂಭ್ರಮ. ಧಾರ್ಮಿಕ ಕ್ಷೇತ್ರವೊಂದು ಸಮಾಜಮುಖಿ ಕಾರ್ಯಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಸಿದ್ದರಾಮೇಶ ಬೇಲೇರಿ ಅವರು ಹೇಳಿದರು, ಯಲಬುರ್ಗಾ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ದಕ್ಷಿಣ ಕನ್ನಡದ ಅನ್ನ, ಅಕ್ಷರ, ಅಭಯ, ಔಷಧ ದಾನಗಳ ಮೂಲಕ ಚತುರ್ದಾನ ಪರಂಪರೆಯ ಕ್ಷೇತ್ರವೆಂದೇ ಹೆಸರಾದ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ,ವೀರೇಂದ್ರ ಹೆಗ್ಗಡೆಯವರ 74ನೇ ಜನ್ಮ ದಿನಾಚರಣೆಯ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು, ರಾಜ್ಯದ ಬಡ ಮಹಿಳೆಯರಿಗೆ ನೆಮ್ಮದಿಯ ಜೀವನ ನಡೆಸುವ ಉದ್ದೇಶದಿಂದ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಮೂಲಕ ಸಾಲ ಸೌಲಭ್ಯ ನೀಡಿ ಅವರ ಬದುಕು ಉಜ್ವಲ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಸಾವಿರಾರು ಕುಟುಂಬಗಳು ವೀರೇಂದ್ರ ಹೆಗಡೆಯವರ ಸಹಾಯ ಮಾರ್ಗದರ್ಶನದಿಂದ ಬದುಕು ಕಟ್ಟಿಕೊಂಡಿದ್ದಾರೆ, ಎಂದು ಮಾತನಾಡಿದರು, ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ,ವೀರೇಂದ್ರ ಹೆಗ್ಗಡೆಯವರ ಜನ್ಮದಿನಕ್ಕೆ ಸಂಘ ಸಂಸ್ಥೆ ಸೇರಿದಂತೆ ನಾಡಿನೆಲ್ಲೆಡೆಯ ಭಕ್ತರು ಶುಭ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ವಿಜಯಲಕ್ಷ್ಮಿ ಬೇಲೇರಿ, ಡಾ, ಎಚ್ ಬಿ ಹುನುಗುಂದ, ಪ್ರಭುಸ್ವಾಮಿ ಸಾಲಿಮಠ, ಸಿ ಎಸ್ ಬಸನಗೌಡರು, ಶರಣಬಸಪ್ಪ ದಾನಕೈ, ಆನಂದ್, ರಮೇಶ್ ಬೇಲೇರಿ, ಮತ್ತು ಧರ್ಮಸ್ಥಳ ಸಂಘದ ಮಹಿಳೆಯರು ಇನ್ನು ಹಲವಾರು ಉಪಸ್ಥಿತರು ಇದ್ದರು
ವರದಿ– ಹುಸೇನ್ ಮೊತೇಖಾನ್