ಹೊಸಪೇಟ ರಾಷ್ಟ್ರೀಯ ಹೆದ್ದಾರಿ ಚಳುವಳಿ ಯಶಸ್ವಿಯಾಯಿತು……
ಸತತವಾಗಿ ಮೂರು ಗಂಟೆಗಳ ವರೆಗೆ ರಸ್ತೆಯ ನ್ನು ಬಂದ್ ಮಾಡಲಾಗಿತ್ತು. ಪೋಲೀಸ್ ರು ಪ್ರೀ ಪ್ಲ್ಯಾನ್ ಮಾಡಿ ಹೋರಾಟದ ಸ್ಥಳದಿಂದ 4 ಕಿಲೋ ದೂರ ದಲ್ಲಿಯೇ ವಾಹನಗಳಳನ್ನು ತಡೆದು ನಿಲ್ಲಿಸಿದ್ದರು.ವಿಜಯ ನಗರ , ಕೊಪ್ಪಳ, ಬಳ್ಳಾರಿ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಮತ್ತು ಎಡಪಂಥೀಯ ಕಾರ್ಮಿಕ ಸಂಘಗಳು ಹೆದ್ದಾರಿ ಚಳುವಳಿಯಲ್ಲಿ ಭಾಗವಹಿಸಿ ದ್ದವು. 700 ರೈತರ ವಸತಿ ಪ್ರಾಣ ತ್ಯಾಗ, ದೇಶದ ಚಳುವಳಿ ನಿರತ ಸಂಘಟನೆಗಳ ಐಕ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿದೆ. ಇಷ್ಟು ಮಾತ್ರವಲ್ಲ ಪ್ರಜ್ಞಾಸತ್ಮಾಕ ಹೋರಾಟಕ್ಕೆ ಎಲ್ಲಾ ಕಾಲಘಟ್ಟಗಳಲ್ಲಿ, ಅತ್ಯಂತ ಮಹತ್ವ ಇದೆ ಎನ್ನುವುದು ಸಾಬೀತಾಗಿದೆ. ರೈತರ ಒಂದು ವರ್ಷದ ಹೋರಾಟದ ಜಯ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಸ್ವಾತಂತ್ರ್ಯ ಚಳುವಳಿ ನಂತರದ ಕಾಲಾವಧಿಯಲ್ಲಿ, ವೈಚಾರಿಕ ಬಿನ್ನಭಿಪ್ರಾಯಗಳಿದ್ದ ಸಂಘಟನೆಗಳು ಐಕ್ಯಗೊಂಡಿರುವುದು, ದೇಶದ ಜನರಲ್ಲಿ ಹೊಸ ಬರವಸೆಗಳನ್ನು ಉಂಟು ಮಾಡಿದೆ.
ವರದಿ – ಸಂಪಾದಕೀಯ