ಕೊಟ್ಟೂರು ಪಟ್ಟಣ ಪಂಚಾಯಿತಿ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು…!
ಜಿಲ್ಲೆಯಾ ಕೊಟ್ಟೂರು ಪಟ್ಟಣ ಪಂಚಾಯಿತಿಯಿಂದ ದಿನ ನಿತ್ಯ ಕಸವನ್ನು ಮಲ್ಲನಾಯಕನಹಳ್ಳಿ ಅರಣ್ಯ ಪ್ರದೇಶಕ್ಕೆ ವಿಲೇವಾರಿ ಮಾಡುತ್ತಿರುವುದರಿಂದ ಗೋಕಟ್ಟೆ ಹಳ್ಳ ಗುಂಡಿಗಳಲ್ಲಿ ನೀರು ಮಲೀನ ವಾಗಿದ್ದು ಜಾನುವಾರುಗಳು ಕುಡಿಯುವ ನೀರು ವಿಷ ವಾಗುತ್ತಿದ್ದು ಆ ನೀರನ್ನು ಜಾನುವಾರುಗಳು ಕುಡಿದು ನಾನ ರೋಗಕ್ಕೆ ತುತ್ತಾಗಿ ರೈತರಿಗೆ ಆತಂಕ ತಂದಿದೆ ಹಾಗೂ ಅರಣ್ಯದಲ್ಲಿ ಕಾಡು ಪ್ರಾಣಿಗಳು ಪಕ್ಷಿಗಳು ಆ ನೀರನ್ನು ಕುಡಿದು ಸಾವನ್ನಪ್ಪುತ್ತಿವೆ ಈ ಕಸವನ್ನು ವಿಲೇವಾರಿ ಮಾಡುತ್ತಿರುವ ಜಾಗವನ್ನು ಪರಿಶೀಲನೆ ಮಾಡಿ ಅಲ್ಲಿ ಆಗುತ್ತಿರುವ ಅನಾಹುತಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳೆ ನೇರ ಹೊಣೆ ಅವರ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಕೊಟ್ಟೂರು ತಾಲೂಕಿನ ನಾಗರಿಕ ಹಕ್ಕುಗಳ ರಕ್ಷಣಾ ವೇದಿಕೆ ಅಧ್ಯಕ್ಷರಾದ ದುರುಗೆಶ್ ರವರು ಜಿಲ್ಲಾಧಿಕಾರಿಗಳಗೆ ದೂರು ಸಲ್ಲಿಸಿದ್ದಾರೆ.
ವರದಿ – ಚಲುವಾದಿ ಅಣ್ಣಪ್ಪ