ನಮ್ಮನ್ನಾಳುವ ಸರ್ಕಾರಗಳು ಬಾಬಾ ಸಾಹೇಬರ ಸಂವಿಧಾನದ ಮೂಲ‌ ಆಶಯಗಳನ್ನು ಅಳವಡಿಸಿಕೊಂಡಿದ್ದರೆ, ದೇಶದ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು.

Spread the love

ನಮ್ಮನ್ನಾಳುವ ಸರ್ಕಾರಗಳು ಬಾಬಾ ಸಾಹೇಬರ ಸಂವಿಧಾನದ ಮೂಲ‌ ಆಶಯಗಳನ್ನು ಅಳವಡಿಸಿಕೊಂಡಿದ್ದರೆ, ದೇಶದ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು.

ಸಿಂಧನೂರು. ನ.27,  ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಬಡತನ, ನಿರುದ್ಯೋಗ, ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ, ಕೋಮುವಾದ, ಅಸ್ಪೃಶ್ಯತೆ, ಲಿಂಗತಾರತಮ್ಯ, ಸೇರಿದಂತೆ ಜ್ವಲಂತ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣಬಹುದು ಎಂದು ದಲಿತ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕರಾದ ಎಂ.ಗಂಗಾಧರ  ಪತ್ರಿಕಾಗೋಷ್ಠಿ ಕರೆದಿದ್ದ ನಗರದ ಎಪಿಎಂಸಿ ಹಮಾಲರ ಸಂಘದ ಕಛೇರಿಯಲ್ಲಿ ಹೇಳಿದರು. ಅಂಬೇಡ್ಕರ್ ಅವರು ದೈಹಿಕವಾಗಿ ಇಲ್ಲದೆ ಇರಬಹುದು. ಆದರೆ ಅವರ ತತ್ವ ವಿಚಾರಧಾರೆಗಳ ಮೂಲಕ ನಮ್ಮನ್ನು ಸದಾ ಎಚ್ಚರಿಸುತ್ತಿದ್ದಾರೆ. 65 ನೇ ಅಂಬೇಡ್ಕರ್ ಅವರ ಪರಿನಿಬ್ಬಾಣ ಕಾರ್ಯಕ್ರಮ ಸಿಂಧನೂರು ತಾಲೂಕಿನ ಎಲ್ಲಾ ದಲಿತಪರ,‌ ಅಲ್ಪಸಂಖ್ಯಾತರಪರ, ಕನ್ನಡಪರ,‌ ಅಲೆಮಾರಿ ಶೋಷಿತ ಸಮುದಾಯಗಳ ಪರ, ನಿರಂತರ ಕಾರ್ಯಚಟುವಟಿಕೆಗಳಲ್ಲಿ ಇರುವಂತಹ 35 ಕ್ಕೂ ಹೆಚ್ಚು ಸಂಘಟನೆಗಳು ಒಗ್ಗೂಡಿಸಿ, ಒಕ್ಕೂಟ ರಚಿಸಿಕೊಂಡು ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತೇವೆ. ಸಂವಿಧಾನ ಶಿಲ್ಪಿ‌, ಭಾರತ ರತ್ನ,‌ ಅಂಬೇಡ್ಕರ್ ಅವರ 65ನೇ ಪರಿನಿಬ್ಬಾಣ ದಿನದ ಸಮಯದಲ್ಲಿ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳು, ‌ದಮನಿತ ವರ್ಗಗಳು, ವಿಮೋಚನೆ ಆಗಬೇಕೆಂದರೆ ಅಂಬೇಡ್ಕರ್ರವರ ಆಲೋಚನಾ ಕ್ರಮಕ್ಕೆ ತಾವು ತೆರೆದುಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯ ಎಂದರು.  ಮುಂದಿನ ತಿಂಗಳು ಡಿಸೆಂಬರ್ 06 ರಂದು ಬೆಳಿಗ್ಗೆ 11‌ ಗಂಟೆಗೆ  ನಗರದ ತಾಲೂಕು ಪಂಚಾಯತಿ ಆವರಣದಲ್ಲಿರುವ ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಅಂಬೇಡ್ಕರ್ ಭಾವಚಿತ್ರದ ಬೃಹತ್ ಮೆರವಣಿಗೆ ಪ್ರಾರಂಭವಾಗಿ, ಬಸ್ ನಿಲ್ದಾಣದ ಮೂಲಕ, ಬಸವ ವೃತ್ತ, ಬಾಬು ಜಗಜೀವನ್ರಾಮ ವೃತ್ತದ ಮೂಲಕ ಎಪಿಎಂಸಿಯ 2 ನೇ ಮುಖ್ಯ ದ್ವಾರದ ಹೊಸ ಗಂಜ್ನಲ್ಲಿರುವ ತೆರೆದ ಶೆಡ್ನಲ್ಲಿ ಬಹಿರಂಗ ಸಭೆಯಾಗಿ ಮಾರ್ಪಡುತ್ತದೆ. ಈ ಮೆರವಣಿಗೆ ಮತ್ತು ಬಹಿರಂಗ ಸಭೆಗೆ ಅಂಬೇಡ್ಕರ್ ನಡೆದುಬಂದ ಹೋರಾಟದ ದಾರಿಯ ಬಗ್ಗೆ  ಜನಪರ, ಶೋಷಿತರ ಪರವಾದಂತಹ ಚಿಂತಕರು, ಹಾಗೂ ಆಯಾ ಧರ್ಮ ಗುರುಗಳು ಮಾತನಾಡಲಿದ್ದಾರೆ.  ಸಮಾನ ಮನಸ್ಕರರು, ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಪರ ಚಳುವಳಿ ನಿರತರು, ರೈತ ಕಾರ್ಮಿಕ, ‌ವಿದ್ಯಾರ್ಥಿ, ಯುವಜನ, ಮಹಿಳೆಯರು, ಮತ್ತು ದಮನಿತ‌ ವರ್ಗಗಳ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಅವರ ಕೊನೆಯ ಸಂದೇಶದ ಪ್ರಸ್ತುತತೆ ಬಗ್ಗೆ ವಿಚಾರ ಮಂಥನ ಮಾಡುವಲ್ಲಿ ತಾವೆಲ್ಲರೂ ಪಾಲ್ಗೊಳ್ಳಲು ಕೋರಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ  ‌ಅಮರೇಶ ಗಿರಿಜಾಲಿ, ಹನುಮಂತಪ್ಪ ಹಂಪನಾಳ, ದವಲಸಾಬ ದೊಡ್ಡಮನಿ,‌ ಭೀಮೇಶ ಕವಿತಾಳ, ಸೈಯದ್ ರಬ್ಬಾನಿ ಜಾಗೀರದಾರ, ನಿರುಪಾದಿ ಸಾಸಲಮರಿ, ನಾಗರಾಜ ಸಾಸಲಮರಿ, ಮಾಬುಸಾಬ‌ ಬೆಳ್ಳಟ್ಟಿ, ಶ್ಯಾಮಣ್ಣ ಸಿಂದೋಳ್ಳಿ, ಇದ್ದರು.

  ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *